ಕಾರ್ಕಳ: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕನೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ತಾಲೂಕಿನ ಬೋಳ ಗ್ರಾಮದಲ್ಲಿ ನಡೆದಿದೆ.
ಬೋಳ ಬರಬೈಲು ಶಾಲೆಯ ಮುಖ್ಯ ಶಿಕ್ಷಕ ಹಾಗೂ ಬೋಳ ಪಿಲಿಯೂರು ಇಚ್ಚೋಡಿ ಶ್ರೀ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ವಂಜಾರಕಟ್ಟೆ ನಿವಾಸಿ ರಾಜೇಂದ್ರ ಆಚಾರ್ (58) ಬಂಧಿತ ಆರೋಪಿ.
ರಾಜೇಂದ್ರ ಆಚಾರ್ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳವನ್ನು ನೀಡುತ್ತಿದ್ದ ಬಗ್ಗೆ ಅನೇಕ ದೂರುಗಳಿದ್ದು, ಊರಿನವರು ಬುದ್ದಿವಾದ ಹೇಳಿದ್ದರು ಎನ್ನಲಾಗಿದ್ದು, ಆದರೂ ತನ್ನ ಹಳೆ ಚಾಳಿಯನ್ನು ಮುಂದುವರಿಸಿದ ಪರಿಣಾಮ ಉಡುಪಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (ಮಕ್ಕಳ ಕ್ಷೇಮಾಭಿವೃದ್ದಿ ಘಟಕ) ಅಧಿಕಾರಿಗಳು ಶಾಲೆಗೆ ಭೇಟಿಯನ್ನು ನೀಡಿ ಸಮಗ್ರ ತನಿಖೆ ನಡೆಸಿದ್ದರು.
ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಅಪ್ರಾಪ್ತ ವಯಸ್ಸಿನ ಒಟ್ಟು 14 ವಿದ್ಯಾರ್ಥಿನಿಯರಿಂದ ದೂರು ಪಡೆದುಕೊಂಡಿದ್ದು ಈ ಬಗ್ಗೆ ಸೂಕ್ತ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿದ ಬಳಿಕವೇ ಈ ಕ್ರಮ ಕೈಗೊಂಡಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.
ಮುಖ್ಯ ಶಿಕ್ಷಕ ರಾಜೇಂದ್ರ ಆಚಾರ್ ತನ್ನ ಸೇವಾವಧಿಯನ್ನು ನಾನಾ ಶಾಲೆಗಳಲ್ಲಿ ಪೂರೈಸಿದ್ದಾರೆ. ಪ್ರಸ್ತುತ ವರ್ಗಾವಣೆಗೊಂಡು ಬರಬೈಲು ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಉಡುಪಿ : ಅಕ್ಕ ಕೆಫೆ ನಿರ್ವಹಣೆ ; ಏ. 13 ರಂದು ನೇರ ಸಂದರ್ಶನ ಉಡುಪಿ : ರಾಷ್ಟ್ರೀಯ ಗ್ರಾಮೀಣ…
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ, ದ.ಕ ಜಿಲ್ಲೆ ದ್ವೀತಿಯ ಬೆಂಗಳೂರು: 2025-26ನೇ ಸಾಲಿನ ದ್ವೀತಿಯ…
ಗುಜರಾತ್ ಜನರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ .. ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ ಬೆಂಗಳೂರು: ಕೇರಳ…
ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ ಮಂಗಳೂರು:…
ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು ಬಾಗಲಕೋಟೆ: ಯುವ ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಸಾವಿಗೆ ಶರಣಾದಂತಹ ಆಘಾತಕಾರಿ…
ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಹುದಿನಗಳ ನಿರೀಕ್ಷೆ ಕೊನೆಗೂ ಅಂತ್ಯಗೊಳ್ಳಲಿದೆ. ನಾಳೆ (ಏಪ್ರಿಲ್…