ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹಾದು ಹೋಗುವ ಲೋಕೋಪಯೋಗಿ ಇಲಾಖೆ ಅಧೀನದಲ್ಲಿ ಬರುವ ಪ್ರಮುಖ ನಗರಗಳನ್ನು ಸಂಪರ್ಕಿರಾಜ್ಯ ಹೆದ್ದಾರಿಗಳನ್ನು ಹಾಗೂ ಜಿಲ್ಲಾ ಮುಖ್ಯ ಸಂಪರ್ಕ ರಸ್ತೆಗಳನ್ನು ಮತ್ತು ಸೇತುವೆಗಳನ್ನು ಅಭಿವೃದ್ಧಿಪಡಿಸಲು ಶಾಸಕ ವಿ ಸುನಿಲ್ ಕುಮಾರ್ ರವರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು. ಈ ಹಿನ್ನೆಲೆ ರಾಜ್ಯ ಸರಕಾರ ಲೋಕೋಪಯೋಗಿ ಇಲಾಖೆಯಿಂದ ಒಟ್ಟು 13 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.
ಈ ಕೆಳಗಿನ ರಸ್ತೆಗಳು ಮತ್ತು ಸೇತುವೆಗಳು ಈ ಅನುದಾನದಲ್ಲಿ ಅಭಿವೃದ್ಧಿಗೊಂಡು ಸಾರ್ವಜನಿಕ ಸಂಚಾರಕ್ಕೆ ಇನ್ನಷ್ಟು ಅನುಕೂಲಕರವಾಗಲಿದೆ.
ಕಾರ್ಕಳ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಮಂಜೂರಾದ ಕಾಮಗಾರಿಗಳ ವಿವರ:-
*ಮುದ್ರಾಡಿ – ಹೆಬ್ರಿ-ಬ್ರಹ್ಮಾವರ ರಾಜ್ಯ ಹೆದ್ದಾರಿ ಮುದ್ರಾಡಿ ಪೇಟೆಯಿಂದ ಜರುವತ್ತು ಸೇತುವೆವರೆಗೆ ರಸ್ತೆಯ ನವೀಕರಣಗೊಳಿಸುವುದಕ್ಕೆ 120 ಲಕ್ಷ. ರೂ.
*ಸುಬ್ರಹ್ಮಣ್ಯ-ಉಡುಪಿ ರಾಜ್ಯ ಹೆದ್ದಾರಿ-37ರ ಚೆಂಡೆ ಬಸದಿ ಕ್ರಾಸ್-ಬಜಗೋಳಿವರೆಗೆ ರಸ್ತೆಯನ್ನು ನವೀಕರಣಗೊಳಿಸುವುದಕ್ಕೆ 150 ಲಕ್ಷ ರೂ.
*ಕಾಂಜರಕಟ್ಟೆ – ಇನ್ನಾ – ಸಾಂತೂರುಕೊಪ್ಲ ಮುಂಡ್ಕೂರು ಕಜೆಮಾರಿಗುಡಿ-ಸಚ್ಚರಿಪೇಟೆ ಜಿಲ್ಲಾ ಮುಖ್ಯ ರಸ್ತೆಯ ಅಭಿವೃದ್ಧಿಗೆ 100 ಲಕ್ಷ ರೂ.
*ಬೆಳುವಾಯಿ-ಕಾಂತಾವರ-ಮಂಜರಪಲ್ಕೆ ಜಿಲ್ಲಾ ಮುಖ್ಯ ರಸ್ತೆಯ ವಂಜಾರಕಟ್ಟೆಯಿಂದ ಬೋಪಾಡಿ ಸೇತುವೆವರೆಗೆ ರಸ್ತೆಯನ್ನು ಅಭಿವೃದ್ಧಿಗೊಳಿಸುವುದಕ್ಕೆ 180.00 ಲಕ್ಷ ರೂ.
*ಅಜೆಕಾರು-ಹರ್ಮುಂಡೆ -ಜಾರ್ಕಳ-ಕೆರವಾಶೆ ಜಿಲ್ಲಾ ಮುಖ್ಯ ರಸ್ತೆಯ ಅಭಿವೃದ್ಧಿಗೆ 250.00 ಲಕ್ಷ ರೂ.
*ದುರ್ಗಾ -ಮುಂಡ್ಲಿ- ಶಿರ್ಲಾಲು ಜಿಲ್ಲಾ ಮುಖ್ಯ ರಸ್ತೆಯ ಅಭಿವೃದ್ಧಿಗೆ 250.00 ಲಕ್ಷ ರೂ.
*ಮುಡಾರು ರಾಜ್ಯಹೆದ್ದಾರಿ ರಾಮೇರುಗುತ್ತು ಬಳಿ ಶಿಥಿಲಗೊಂಡಿರುವ ಕಿರಿದಾದ ಹಳೆಯ ಸೇತುವೆಯನ್ನು ಮರುನಿರ್ಮಾಣ ಮಾಡುವುದಕ್ಕೆ 100.00 ಲಕ್ಷ ರೂ.
*ಬೆಳುವಾಯಿ-ಕಾಂತಾವರ-ಮಂಜರಪಲ್ಕೆ ಜಿಲ್ಲಾಮುಖ್ಯ ರಸ್ತೆಯಲ್ಲಿ ಅತಿಯಾದ ಮಳೆಯಿಂದ ಹಾನಿಗೊಂಡಿರುವ ಕಿರಿದಾದ ಸೇತುವೆಯ (ಬರಬೈಲು) ಮರುನಿರ್ಮಾಣಕ್ಕೆ 150.00 ಲಕ್ಷ ರೂ. ಬಿಡುಗಡೆ ಮಾಡಗಾಗಿದೆ ಎಂದು ಕಾರ್ಕಳ ವಿ. ಸುನೀಲ್ ಕುಮಾರ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…
ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…
ಬೆಳ್ತಂಗಡಿ: ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…
ಕಾಸರಗೋಡು : ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…
ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…