Featured

ಕಾರ್ಕಳ ಶಾಸಕರ ವಿರುದ್ಧದ ಬೇನಾಮಿ ಆಸ್ತಿ ಪ್ರಕರಣದ ತನಿಖೆ ವಿಳಂಬಿಸಿದರೆ ಲೋಕಾಯುಕ್ತ ಕಚೇರಿ ಮುಂದೆ ಧರಣಿ : ಮುತಾಲಿಕ್ ಎಚ್ಚರಿಕೆ – Vishwanews24

ಕಾರ್ಕಳ ಶಾಸಕರ ವಿರುದ್ಧದ ಬೇನಾಮಿ ಆಸ್ತಿ ಪ್ರಕರಣದ ತನಿಖೆ ವಿಳಂಬಿಸಿದರೆ ಲೋಕಾಯುಕ್ತ ಕಚೇರಿ ಮುಂದೆ ಧರಣಿ : ಮುತಾಲಿಕ್ ಎಚ್ಚರಿಕೆ

ಕಾರ್ಕಳ: ತಾನು ಲೋಕಾಯುಕ್ತಕ್ಕೆ ನೀಡಿರುವ ಕಾರ್ಕಳ ಶಾಸಕರ ವಿರುದ್ಧದ ಬೇನಾಮಿ ಆಸ್ತಿ ಪ್ರಕರಣದ ತನಿಖೆ ವಿಳಂಬಿಸಿದರೆ ಲೋಕಾಯುಕ್ತ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಅವರು, ಬೇನಾಮಿ ಆಸ್ತಿಗೆ ಸಂಬಂಧಿಸಿ ಫೆ. 28ರಂದು ಡಿ.ಸಿ.ಯವರಿಗೆ ದೂರು, ಮಾ. 2ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ. ಹೆಬ್ರಿ ತಾಲೂಕಿನ ಶಿವಪುರ ಹಾಗೂ ಕೆರೆಬೆಟ್ಟು ಗ್ರಾಮದಲ್ಲಿ 4.15 ಕೋ.ರೂ.ಗಳಿಗೆ 67.94 ಎಕ್ರೆ ಜಾಗವನ್ನು ಬೇನಾಮಿ ಹೆಸರಿನಲ್ಲಿ ಖರೀದಿಸಿದ್ದಾರೆ. ಅವರಿಗೆ ಅಷ್ಟು ಆದಾಯ ಇಲ್ಲ. ಬೇನಾಮಿ ಹೆಸರಿನಲ್ಲಿ ಆದಂತಹ ಹಗರಣ ಇದು. ಇದರಲ್ಲಿ ಸಚಿವರ ಕೈವಾಡದ ಸಂಶಯ ಇದೆ. ಈ ಜಾಗ ಮುಂದೆ ಇಂಡಸ್ಟ್ರಿಯಲ್ ಏರಿಯಾ ಆಗುತ್ತದೆ ಎಂದು ಗೊತ್ತಿದ್ದೇ ಖರೀದಿ ಮಾಡಿ¨ª?ರೆ. ಇದು ಖರೀದಿ ಮಾಡಿದ ಎರಡೇ ತಿಂಗಳಲ್ಲಿ ಇಂಡಸ್ಟ್ರಿಯಲ್ ಏರಿಯಾ ಎಂದು ಘೋಷಣೆ ಆಗಿ ಈಗ ಆ ಜಾಗದ ಕಿಮ್ಮತ್ತು ನಾಲ್ಕು ಪಟ್ಟು ಹೆಚ್ಚಿದೆ. ಇದು ಭ್ರಷ್ಟಾಚಾರ. ಇಂತಹ ಬೇನಾಮಿ ಆಸ್ತಿ ಈ ಕ್ಷೇತ್ರದಲ್ಲಿ ಸಾಕಷ್ಟಿವೆ. ಇದರ ವಿರುದ್ಧ ಸಮರ ಆರಂಭಿಸಿದ್ದೇನೆ ಎಂದು ಹೇಳಿದರು.

ಎಲ್ಲಾ ಬೇನಾಮಿಗಳ ಬಗ್ಗೆ ದಾಖಲೆಗಳಿವೆ ಎಂದ ಅವರು, ಎಲ್ಲವನ್ನೂ ಬಹಿರಂಗಪಡಿಸುವೆ. ನಮ್ಮ ಕಾರ್ಯಕರ್ತರಿಗೆ ಬೆದರಿಕೆ, ಕೊಲೆ ಪ್ರಕರಣ ಹಾಕಿದ್ದಾರೆ. ಕಾರ್ಯಕರ್ತರನ್ನು ಮುಟ್ಟಲಿ ನೋಡೋಣ. ನಮ್ಮ ಕಾರ್ಯಕರ್ತರಿಗೆ ಬೆದರಿಕೆ ಬಂದರೆ ನಾನಿದ್ದೇನೆ ಎಂಬ ಸ್ಪಷ್ಟ ಮಾತು ಹೇಳುತ್ತಿದ್ದೇನೆ. ಚುನಾವಣೆ ಘೋಷಣೆಯಾದ ಬಳಿಕ ಅವರ ಜತೆ ಗುರುತಿಸಿಕೊಂಡವರೆಲ್ಲ ನಮ್ಮ ಜತೆಗೆ ಇರುತ್ತಾರೆ ಎಂದು ಮುತಾಲಿಕ್ ಹೇಳಿದರು.

ಆಡಿಯೋ ಒಂದರಲ್ಲಿ ಗುತ್ತಿಗೆದಾರನೊಬ್ಬ ಸಚಿವ ಸುನಿಲ್ ಅವರಿಗೆ ಕಮಿಶನ್ ನೀಡಬೇಕು ಎಂದು ಹೇಳಿರುವುದನ್ನು ಕೇಳಿಸಿಕೊಂಡಿದ್ದೇವೆ. ಟೆಂಡರ್ ಬಿಡುಗಡೆ, ಬಿಲ್ ಮಾಡುವಾಗ ಹೀಗೆ ಪ್ರತಿಬಾರಿಯೂ ಕಮಿಶನ್ ನೀಡಬೇಕು. ಒಂದು ತಿಂಗಳಿನಲ್ಲಿ ಕೋಟ್ಯಾಂತರ ರೂ.ಗಳ ಟೆಂಡರ್ ತರಾತುರಿಯಲ್ಲಿ ಆಗಿದೆ. ಇಂಧನ ಇಲಾಖೆ ಭ್ರಷ್ಟವಾಗಿದೆ. ಕೆಪಿಟಿಸಿಎಲ್‍ನಲ್ಲಿ ವರ್ಗ, ಭಡ್ತಿ ಎಲ್ಲವೂ ಭ್ರಷ್ಟವಾಗಿದೆ ಎಂದು ಆರೋಪಿಸಿದರು. ಹಾಗೂ ದಾವಣಗೆರೆ ಶಾಸಕನ ಸಹಿತ ಹಲವು ಶಾಸಕರ ವಿರುದ್ಧ ಭ್ರಷ್ಟಾಚಾರ ದೂರು ದಾಖಲಿಸಿ 10 ವರ್ಷಗಳಾಗಿವೆ. ಸ್ಪಷ್ಟ ದಾಖಲೆ ನೀಡಿದ್ದರೂ ವಿಳಂಬ ಮಾಡುವುದಾದರೆ ಲೋಕಾಯುಕ್ತ ಕೂಡ ಭ್ರಷ್ಟವೇ ಎಂಬ ಪ್ರಶ್ನೆಯನ್ನು ಅವರ ಬಳಿಯೇ ಕೇಳುವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಗೆಲ್ಲಬೇಕೆಂದು ಬಂದಿದ್ದೇನೆ. ಕಾಂಗ್ರೆಸ್‍ನವರು ಅಭ್ಯರ್ಥಿ ಹಾಕುವುದು ಬಿಡುವುದು ಅವರಿಗೆ ಬಿಟ್ಟದ್ದು. ಮುತಾಲಿಕ್ ಹಿಂದುತ್ವವನ್ನು ಗೆಲ್ಲಿಸುವುದಾದರೆ ಗೆಲ್ಲಿಸಲಿ ಎಂದರು. ಇದೇ ವೇಳೆ ಕೋಟಿ ಚೆನ್ನಯ, ಪರಶುರಾಮ ಥೀಂ ಪಾರ್ಕ್ ಮತ್ತು ಕಾರ್ಕಳ ಉತ್ಸವ ಇದೆಲ್ಲ ಪ್ರವಾಸೋದ್ಯಮ ದೃಷ್ಟಿಯಿಂದ ಉತ್ತಮ ಕಾರ್ಯಗಳು. ಜನರ ಆರ್ಥಿಕ ಮಟ್ಟ ಸುಧಾರಣೆಗೆ ಅನುಕೂಲಕರ. ಇದಕ್ಕೆ ಸಚಿವರಿಗೆ ಅಭಿನಂದನೆ. ಉಳಿದಂತೆ ಅಭಿವೃದ್ಧಿಯಲ್ಲಿ ಹಗರಣಗಳು ನಡೆದಿವೆ. ಇವುಗಳನ್ನೂ ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವೆ. ಹೆಬ್ರಿ ತಾಲೂಕಿನಲ್ಲಿ ಅಭಿವೃದ್ಧಿ ಏನಾಗಿದೆ ಎಂದು ಪ್ರಶ್ನಿಸಿದರು.

Vishwa News 24

Recent Posts

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

1 day ago

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ – vishwanews24

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…

1 day ago

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

1 day ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

1 day ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

1 day ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

1 day ago