ಕಾರ್ಕಳ : ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಬಂದಿದ್ದ ಮಹಿಳೆಯೊಬ್ಬರ ಚಿನ್ನದ ಕರಿಮಣಿ ಸರ ಕಳವಾಗಿರುವ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಜ.15 ರಂದು ಹೆರಿಗೆಗಾಗಿ ದಾಖಲಾಗಿದ್ದ ದ.ಕ ಜಿಲ್ಲೆಯ ಬೆಳ್ತಂಗಡಿಯ ಮೋಗ್ರು ಗ್ರಾಮದ ಉಷಾ ಅವರು ಜ.17 ರಂದು ಮದ್ಯಾಹ್ನದ ವೇಳೆ 2:30 ಕ್ಕೆ ವಾರ್ಡ್ ನೊಳಗಿರುವ ಬಾತ್ ರೂಮ್ ಗೆ ಸ್ನಾನಕ್ಕೆಂದು ಹೋಗಿದ್ದರು. ಈ ವೇಳೆ ತಮ್ಮ 1.30 ಲಕ್ಷ ರೂ. ಮೌಲ್ಯದ 32 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ತೆಗೆದು ಬಾತ್ ರೂಮ್ ನಲ್ಲಿ ಸಿಕ್ಕಿಸಿ ಇಟ್ಟಿದ್ದರು.
ಈ ನಡುವೆ ಸ್ನಾನ ಮಾಡುವ ಸಮಯ ಅವರಿಗೆ ತಲೆ ತಿರುಗಿದಂತಾಗಿ ಅವರನ್ನು ಅವರ ತಾಯಿ ಮೋಹಿನಿ ಅವರು ಬೆಡ್ಡಿನಲ್ಲಿ ಕರೆದುಕೊಂಡು ಬಂದು ಮಲಗಿಸಿದ್ದರು. ಬಳಿಕ ಒಂದು ಗಂಟೆಯ ನಂತರ ಕರಿಮಣಿಸರ ಕಾಣಿಸದೇ ಇದ್ದು ಬಾತ್ ರೂಮಿನಲ್ಲಿ ಹೋಗಿ ನೋಡಿದಾಗ ಕರಿಮಣಿಸರ ಅಲ್ಲಿ ಇರಲಿಲ್ಲ ಆದ್ದರಿಂದ ಬಾತ್ ರೂಮಿನಲ್ಲಿ ಇಟ್ಟಿದ್ದ 1,30,000 ರೂ. ಮೌಲ್ಯದ ಕರಿಮಣಿ ಸರ ಕಳವಾಗಿದೆ ಎಂಬುದಾಗಿ ಉಷಾ ಅವರ ಪತಿ ಸಂಕೇತ್ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Join our Whatsapp group by clicking the below link 👇👇
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…