ಕಾರ್ಕಳ : ಐತಿಹಾಸಿಕ ಅನಂತಶಯನ ದೇವಸ್ಥಾನದ ಎದುರುಗಡೆಯ ರಸ್ತೆಯಲ್ಲಿ ಕುಡುಕನೊಬ್ಬ ಸಾರ್ವಜನಿಕ ರಸ್ತೆಯಲ್ಲಿ ಮಲಗಿ ಅವಾಂತರ ಸೃಷ್ಠಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆಸಿದೆ.
ಬಿಳಿ ಶರ್ಟ್ ಹಾಗೂ ಕಾವಿ ಲುಂಗಿ ಧರಿಸಿಕೊಂಡಿದ ವ್ಯಕ್ತಿ ಅನಂತಶಯನ ದೇವಸ್ಥಾನ ಎದುರುಗಡೆಯಲ್ಲಿ ಇರುವ ಸ್ವಾತಂತ್ರ್ಯ ಚಳುವಳಿ ಕಟ್ಟೆಯ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಉತ್ತರ ದಿಕ್ಕಿ ತಲೆ ಇಟ್ಟು ಮಲಗಿದ್ದನು.ಕುಡುಕನ ಅವಾಂತರಕ್ಕೆ ವಾಹನ ಸಂಚಾರಕ್ಕೂ ಅಡಚಣೆಯಾಗಿತ್ತು. ವಾಹನ ಚಾಲಕರು ನಿಯಂತ್ರಣ ಕಳೆದು ಕೊಂಡಿದ್ದರೆ ಆ ಪ್ರದೇಶದಲ್ಲಿ ಅನಾಹುತವೇ ನಡೆಯುತ್ತಿತ್ತು.
ಇದನೆಲ್ಲ ಗಮನಿಸಿದ ಸ್ಥಳೀಯರು ಕುಡುಕನನ್ನು ಸಮೀಪದ ಪುಟ್ ಪಾತ್ ಗೆ ಹೊತ್ತು ಮಲಗಿಸಿದರು. ತುಂತುರು ಮಳೆಯ ಸಿಂಚನದಲ್ಲಿ ಪುಟ್ ಪಾತ್ ನಲ್ಲಿ ಮಲಗಿದ್ದ ಕುಡುಕ ಮದ್ಯದ ನಶೆ ಇಳಿಯುತ್ತಿದ್ದಂತೆ ಒದ್ದೆ ಬಟ್ಟೆಯಲ್ಲಿ ಅಲ್ಲಿಂದ ಹೆಜ್ಜೆ ಹಾಕಿ ಬೇರೆಡೆಗೆ ಹೊರಟು ಹೋಗಿದ್ದಾನೆ.
ರಸ್ತೆಯಲ್ಲಿ ಮಲಗಿದ್ದ ಕುಡುಕನ ಅವಾಂತರದ ದೃಶ್ಯಾವಳಿಯನ್ನು ವಕೀಲ ಅನಿಲ್ ಕುಮಾರ್ ನಿಟ್ಟೆ ಅವರು ತನ್ನ ಮೊಬೈಲ್ ನಲ್ಲಿ ಫೋಟೋ ಸೆರೆ ಹಿಡಿದಿದ್ದರು.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…