ಕಾರ್ಕಳ : ಸಾಣುರು ಗ್ರಾಮದ ಶುಂಠಿಗುಡ್ಡೆ ಎಂಬಲ್ಲಿನ ರಬ್ಬರ್ ಪ್ಲಾಂಟೇಶನ್ ಸನ್ನಿಹದಲ್ಲಿ ಸುಟ್ಟಸ್ಥಿತಿಯಲ್ಲಿ ಕಾರ್ಮಿಕರೋರ್ವರ ಶವ ಪತ್ತೆಯಾಗಿದೆ. ಕೇರಳ ಮೂಲದ ಮಲಪ್ಪುರ ಜಿಲ್ಲೆಯ ಗೋಪಿ(60) ಎಂಬವರ ಮೃತದೇಹ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ರಬ್ಬರ್ ತೋಟದಲ್ಲಿ ಕಾರ್ಮಿಕನಾಗಿ ದುಡಿಯುತ್ತಿರೆಂಬ ಮಾಹಿತಿ ಲಭಿಸಿದೆ. ಕಳೆದ ಒಂದು ವಾರದ ಹಿಂದೆ ಅದೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ಬಾಹುಲೇಯನ್ ಎಂಬವರೊಂದಿಗೆ ಊರಿಗೆ ಹೋಗಿ ಹಿಂತಿರುಗಿದ್ದರು.
ಅಕ್ಟೋಬರ್ 19ರಂದು ಬೆಳಿಗ್ಗೆ 9 ಗಂಟೆಗೆ ವಸಂತ ಎಂಬವರು ಗ್ರಾಸ್ ಕಟ್ಟಿಂಗ್‌ಗೆಂದು ಆ ತೋಟದ ದ್ವಾರದ ಬಳಿಗೆ ಬಂದಿದ್ದಾಗ ಗೇಟ್ ಒಳಗಿನಿಂದ ಬೀಗ ಹಾಕಲಾಗಿದ್ದು, ಕೂಗಿ ಕರೆದರೆ ಕೆಲಸದವರು ಬಂದಿರುವುದಿಲ್ಲ. ಗೇಟ್‌ನ ಮುಂದೆ ಸ್ವಲ್ಪ ದೂರದಲ್ಲಿ ದಾರಿಯ ಬದಿಯಲ್ಲಿ ಸುಟ್ಟ ಕರಕಲಾದ ಮೃತದೇಹವೊಂದು ಕಾಣಸಿಕ್ಕಿದೆ. ಅದರ ಪಕ್ಕದಲ್ಲಿ ಲೈಟರ್ ಹಾಗೂ ಪೆಟ್ರೋಲ್ ಕ್ಯಾನಿನ ಮುಚ್ಚಳ ಕಂಡುಬಂದಿರುತ್ತದೆ ಎಂದು ಕಾಬೆಟ್ಟು ಹವಾಲ್ದಾರ್‌ಬೆಟ್ಟುವಿನ ದಿಲೀಪ್ ಎಂಬವರ ಗಮನಕ್ಕೆ ತಂದಿದ್ದರು.
ಕೇದಾರನಾಥ ಸನ್ನಿಧಾನದಲ್ಲಿ ಪ್ರಧಾನಿ ಮೋದಿ: ವಿಶೇಷ ಪೂಜೆ ಸಲ್ಲಿಕೆ – Vishwanews24
ದಿಲೀಪ್ ಹಾಗೂ ವಿವೇಕಾನಂದ ಶೆಣೈ ಎಂಬವರು ಗೇರುಬೀಜ ಕಾರ್ಖಾನೆಯ ಪಾಲುದಾರರಾಗಿದ್ದಾರೆ. ವಿವೇಕಾನಂದ ಶೆಣೈಯವರು ಸಾಣೂರು ಶುಂಠಿಗುಡ್ಡೆಯ ಎಂಬಲ್ಲಿ ಕೇರಳದ ಬಿಜು ಥೋಮಸ್ ಎಂಬುವವರ ಜೊತೆ ಕರಾರು ಮೂಲಕ ರಬ್ಬರ್ ಪ್ಲಾಂಟೇಶನ್ ಪಡೆದುಕೊಂಡು ವ್ಯವಹಾರ ಮಾಡಿಕೊಂಡಿರುತ್ತಾರೆ. ಪ್ಲಾಂಟೇಶನ್‌ನ ಉಸ್ತುವಾರಿಯನ್ನು ಪಿರ್ಯಾದಿದಾರ ದಿಲೀಪ್ ನೋಡಿಕೊಳ್ಳುತ್ತಿದ್ದಾರೆ. ಇದೇ ಕಾರಣದಿಂದ ಈ ವಿಚಾರ ವಸಂತ ಅವರು ದಿಲೀಪ್ ಅವರ ಗಮನಕ್ಕೆ ತಂದಿರಲು ಕಾರಣವೆನ್ನಲಾಗಿದೆ.
ಗೋಪಿಯು ಯಾವುದೋ ಕಾರಣದಿಂದ ಬೆಂಕಿಯಿಂದ ಸುಟ್ಟು ಮೃತಪಟ್ಟಿರುತ್ತಾರೆ. ಜೊತೆಯಲ್ಲಿದ್ದ ಬಾಹುಲೇಯನ್ ಎಂಬಾತ ಕಾಣೆಯಾಗಿರುವುದರಿಂದ ಗೋಪಿಯ ಸಾವಿನ ಬಗ್ಗೆ ಸಂಶಯಕ್ಕೆ ಎಡೆಮಾಡಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.
ಕೇದಾರನಾಥ ಸನ್ನಿಧಾನದಲ್ಲಿ ಪ್ರಧಾನಿ ಮೋದಿ: ವಿಶೇಷ ಪೂಜೆ ಸಲ್ಲಿಕೆ – Vishwanews24
ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…
ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…
ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…
ಸಚಿವರ ಮೇಲೆ ಖಾಸಗಿ ಸ್ಟಿಂಗ್ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ…
ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…