ಕಾರ್ಕಳ :ಕೊರೊನಾ, ಪ್ರಾಕೃತಿಕ ಅವಘಡ ಸಂಭವಿಸಿ ಕ್ಷೇತ್ರದ ಜನ ಸಂಕಷ್ಟಕ್ಕೆ ಒಳಗಾಗಿ ನೋವಿನಲ್ಲಿದ್ದ ವೇಳೆ ಗುಹೆ ಸೇರಿಕೊಂಡಿದ್ದ ಕಾಂಗ್ರೆಸ್ ಈಗ ಚುನಾವಣೆ ವೇಳೆ ಯಾವ ಮುಖ ಹೊತ್ತುಕೊಂಡು ಜನರ ಬಳಿಗೆ ಹೋಗಿ ಮತ ಯಾಚಿಸುತ್ತಿದೆ? 5 ವರುಷಕ್ಕೊಮ್ಮೆ ಜನರ ಮನೆಬಾಗಿಲಿಗೆ ಬರುವ ಕಾಂಗ್ರೆಸ್ಸನ್ನು ಕ್ಷೇತ್ರದ ಜನ ತಿರಸ್ಕರಿಸಬೇಕು ಎಂದು ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ಕರೆ ನೀಡಿದರು.
ಕಾರ್ಕಳ ವಿಧಾನ ಸಭಾ ಕ್ಷೇತ್ರದ ಹಿರ್ಗಾನದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಜನರ ಕಷ್ಟ- ಕಾರ್ಪಣ್ಯ ನೋವುಗಳಲ್ಲಿ ಬಿಜೆಪಿ ಜನರ ಜತೆ ನಿರಂತರವಾಗಿ ನಿಂತಿದೆ. ಜನಸಾಮಾನ್ಯರು ನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರಿದ್ದ ಸ್ಥಳಕ್ಕೆ ತೆರಳಿ ಸಮಸ್ಯೆ ಆಲಿಸಿ ಅವರ ಕಷ್ಟಗಳನ್ನು ಪರಿಹರಿಸಿದ್ದೇವೆ. ಪ್ರತಿ ಹಳ್ಳಿಯ ಕಟ್ಟ ಕಡೆಯ ನಿವಾಸಿಯ ಕುಟುಂಬಕ್ಕೆ ಬಿಜೆಪಿ ಸ್ಪಂದಿಸಿದೆ. ಇತರೆಲ್ಲ ಸಮಯಗಳಲ್ಲಿ ಸ್ಪಂದಿಸುವುದು ಇದ್ದಿದ್ದೆ, ಆದರೆ ಕೊರೊನಾ ಬಂದು ಜನ ನೋವಿನಲ್ಲಿರುವಾಗ ಅವರ ಬಳಿ ತೆರಳಿ ವೈದ್ಯಕೀಯ ಸೇವೆ, ಆರೋಗ್ಯ ತಪಾಸಣೆ, ಕಿಟ್ ನೀಡಿದಲ್ಲದೆ ನಾಗರಿಕರ ಆರೋಗ್ಯ, ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಹೆಚ್ಚಿನ ಹಾನಿ ಸಂಭವಿಸದಂತೆ ತಡೆದು ಕ್ರಮ ಕೈಗೊಂಡಿದ್ದೇವೆ.
ಮುಂಬಯಿ, ಪೂನಾದಲ್ಲಿರುವ ನಮ್ಮ ಸ್ನೇಹಿತರು ಮರಳಿ ಕ್ಷೇತ್ರಕ್ಕೆ ಬಂದಾಗ ಅವರಿಗೆ ಯಾವುದೇ ತೊಂದರೆ ಆಗದಂತೆ ಕ್ವಾರಂಟೈನ್ ಸ್ಥಾಪಿಸಿ, ವ್ಯವಸ್ಥೆ ಕಲ್ಲಿಸಿದ್ದೇವೆ. ಆಗ ಇದೇ ಕಾಂಗ್ರೆಸ್ಸಿಗರು ಎಲ್ಲಿ ಅಡಗಿ ಕುಳಿತಿದ್ದರು ಎಂದು ಪ್ರಶ್ನಿಸಿರುವ ಅವರು 5 ವರುಷ ಜನಸಾಮಾನ್ಯರ ಕಡೆ ತಿರುಗಿಯು ನೋಡದವರು ಈಗ ಚುನಾವಣೆ ಹೊತ್ತಲ್ಲಿ ನಾನಾ ಭರವಸೆ, ಗ್ಯಾರಂಟಿ ಕಾರ್ಡ್ ಗಳನ್ನು ಹಿಡಿದುಕೊಂಡು ವಿವಿಧ ಮುಖವಾಡ ಹೊತ್ತು ಜನರ ಮನೆ ಬಾಗಿಲಿಗೆ ಬಂದು ಭರವಸೆಗಳನ್ನು ನೀಡುತ್ತಿದ್ದಾರೆ.
ಇಷ್ಟು ದಿನವೂ ಒಮ್ಮೆಯು ಕ್ಷೇತ್ರದ ಕಡೆ ತಿರುಗಿ ನೋಡದವರಿಗೆ ಈಗ ಜನರ ನೆನಪಾಗಿರುವುದು ಹಾಸ್ಯಾಸ್ಪದ ಎಂದು ಹೇಳಿದರು. ಕ್ಷೇತ್ರದ ಜನ ಸಮಸ್ಯೆಗೆ ಒಳಗಾದಗ, ಮೂಲಭೂತ ಸೌಕರ್ಯ ಕೇಳಿ ಬಂದಾಗ ಯಾವುದೇ ಜಾತಿ, ಧರ್ಮ ಎಂಬ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನ ನ್ಯಾಯ ನೀಡಿದ್ದೇವೆ. ಇದನ್ನು ಕ್ಷೇತ್ರದ ಮತದಾರರು ಖಂಡಿತ ಅರ್ಥ ಮಾಡಿಕೊಳ್ಳುತ್ತಾರೆ.
ಈ ಚುನಾವಣೆಯಲ್ಲಿ ಅಪಪ್ರಚಾರ ನಡೆಸುವವರನ್ನು, 5 ವರುಷಕ್ಕೆ ಒಮ್ಮೆ ಮನೆಗಳಿಗೆ ಬರುವವರನ್ನು ತಿರಸ್ಕರಿಸಿ ಜನರ ಜತೆಗೆ ಸದಾ ಕಾಲವು ಇದ್ದ ಬಿಜೆಪಿ ಶಾಸಕನಾದ ನನ್ನನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿದರು. ಪ್ರಮುಖರಾದ ಸಂತೋಷ್ ಶೆಟ್ಟಿ, ಶಂಭು ಹೆಗ್ಡೆ, ಹರಿಶ್ಚಂದ್ರ ಕುಲಾಲ್ ಸಹಿತ ಅನೇಕ ಮಂದಿ ಗಣ್ಯರು, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ ಕುಂದಾಪುರ : ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ಅಗತ್ಯ ದುರಸ್ತಿ…
ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ…
ಎಂಆರ್‌ಪಿಎಲ್ ದುರಂತ: ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ, ಸದಸ್ಯರೊಬ್ಬರಿಗೆ ಉದ್ಯೋಗ : ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳೂರು:…
ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಉಡುಪಿ: ಸುಮಾರು…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ…
ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ: ಹವಾಮಾನ ಇಲಾಖೆ ಮುನ್ಸೂಚನೆ ಮಂಗಳೂರು/ಉಡುಪಿ: ದಕ್ಷಿಣ ಕನ್ನಡ (ದ.ಕ)…