Featured

ಕಾರ್ಕಳ : 5 ವರುಷಕ್ಕೊಮ್ಮೆ ಜನರ ಮನೆಬಾಗಿಲಿಗೆ ಬರುವ ಕಾಂಗ್ರೆಸ್ಸನ್ನು ಕ್ಷೇತ್ರದ ಜನ ತಿರಸ್ಕರಿಸಬೇಕು : ಸುನಿಲ್ ಕುಮಾರ್  – Vishwanews24

ಕಾರ್ಕಳ : 5 ವರುಷಕ್ಕೊಮ್ಮೆ ಜನರ ಮನೆಬಾಗಿಲಿಗೆ ಬರುವ ಕಾಂಗ್ರೆಸ್ಸನ್ನು ಕ್ಷೇತ್ರದ ಜನ ತಿರಸ್ಕರಿಸಬೇಕು : ಸುನಿಲ್ ಕುಮಾರ್

ಕಾರ್ಕಳ :ಕೊರೊನಾ, ಪ್ರಾಕೃತಿಕ ಅವಘಡ ಸಂಭವಿಸಿ ಕ್ಷೇತ್ರದ ಜನ ಸಂಕಷ್ಟಕ್ಕೆ ಒಳಗಾಗಿ ನೋವಿನಲ್ಲಿದ್ದ ವೇಳೆ ಗುಹೆ ಸೇರಿಕೊಂಡಿದ್ದ ಕಾಂಗ್ರೆಸ್ ಈಗ ಚುನಾವಣೆ ವೇಳೆ ಯಾವ ಮುಖ ಹೊತ್ತುಕೊಂಡು ಜನರ ಬಳಿಗೆ ಹೋಗಿ ಮತ ಯಾಚಿಸುತ್ತಿದೆ? 5 ವರುಷಕ್ಕೊಮ್ಮೆ ಜನರ ಮನೆಬಾಗಿಲಿಗೆ ಬರುವ ಕಾಂಗ್ರೆಸ್ಸನ್ನು ಕ್ಷೇತ್ರದ ಜನ ತಿರಸ್ಕರಿಸಬೇಕು ಎಂದು ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ಕರೆ ನೀಡಿದರು.

ಕಾರ್ಕಳ ವಿಧಾನ ಸಭಾ ಕ್ಷೇತ್ರದ ಹಿರ್ಗಾನದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಜನರ ಕಷ್ಟ- ಕಾರ್ಪಣ್ಯ ನೋವುಗಳಲ್ಲಿ ಬಿಜೆಪಿ ಜನರ ಜತೆ ನಿರಂತರವಾಗಿ ನಿಂತಿದೆ. ಜನಸಾಮಾನ್ಯರು ನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರಿದ್ದ ಸ್ಥಳಕ್ಕೆ ತೆರಳಿ ಸಮಸ್ಯೆ ಆಲಿಸಿ ಅವರ ಕಷ್ಟಗಳನ್ನು ಪರಿಹರಿಸಿದ್ದೇವೆ. ಪ್ರತಿ ಹಳ್ಳಿಯ ಕಟ್ಟ ಕಡೆಯ ನಿವಾಸಿಯ ಕುಟುಂಬಕ್ಕೆ ಬಿಜೆಪಿ ಸ್ಪಂದಿಸಿದೆ. ಇತರೆಲ್ಲ ಸಮಯಗಳಲ್ಲಿ ಸ್ಪಂದಿಸುವುದು ಇದ್ದಿದ್ದೆ, ಆದರೆ ಕೊರೊನಾ ಬಂದು ಜನ ನೋವಿನಲ್ಲಿರುವಾಗ ಅವರ ಬಳಿ ತೆರಳಿ ವೈದ್ಯಕೀಯ ಸೇವೆ, ಆರೋಗ್ಯ ತಪಾಸಣೆ, ಕಿಟ್ ನೀಡಿದಲ್ಲದೆ ನಾಗರಿಕರ ಆರೋಗ್ಯ, ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಹೆಚ್ಚಿನ ಹಾನಿ ಸಂಭವಿಸದಂತೆ ತಡೆದು ಕ್ರಮ ಕೈಗೊಂಡಿದ್ದೇವೆ.

ಮುಂಬಯಿ, ಪೂನಾದಲ್ಲಿರುವ ನಮ್ಮ‌ ಸ್ನೇಹಿತರು ಮರಳಿ ಕ್ಷೇತ್ರಕ್ಕೆ ಬಂದಾಗ ಅವರಿಗೆ ಯಾವುದೇ ತೊಂದರೆ ಆಗದಂತೆ ಕ್ವಾರಂಟೈನ್ ಸ್ಥಾಪಿಸಿ, ವ್ಯವಸ್ಥೆ ಕಲ್ಲಿಸಿದ್ದೇವೆ. ಆಗ ಇದೇ ಕಾಂಗ್ರೆಸ್ಸಿಗರು ಎಲ್ಲಿ ಅಡಗಿ ಕುಳಿತಿದ್ದರು ಎಂದು ಪ್ರಶ್ನಿಸಿರುವ ಅವರು 5 ವರುಷ ಜನಸಾಮಾನ್ಯರ ಕಡೆ ತಿರುಗಿಯು ನೋಡದವರು ಈಗ ಚುನಾವಣೆ ಹೊತ್ತಲ್ಲಿ ನಾನಾ ಭರವಸೆ, ಗ್ಯಾರಂಟಿ ಕಾರ್ಡ್ ಗಳನ್ನು ಹಿಡಿದುಕೊಂಡು ವಿವಿಧ ಮುಖವಾಡ ಹೊತ್ತು ಜನರ ಮನೆ ಬಾಗಿಲಿಗೆ ಬಂದು ಭರವಸೆಗಳನ್ನು ನೀಡುತ್ತಿದ್ದಾರೆ.

ಇಷ್ಟು ದಿನವೂ ಒಮ್ಮೆಯು ಕ್ಷೇತ್ರದ ಕಡೆ ತಿರುಗಿ ನೋಡದವರಿಗೆ ಈಗ ಜನರ ನೆನಪಾಗಿರುವುದು ಹಾಸ್ಯಾಸ್ಪದ ಎಂದು ಹೇಳಿದರು. ಕ್ಷೇತ್ರದ ಜನ ಸಮಸ್ಯೆಗೆ ಒಳಗಾದಗ, ಮೂಲಭೂತ ಸೌಕರ್ಯ ಕೇಳಿ ಬಂದಾಗ ಯಾವುದೇ ಜಾತಿ, ಧರ್ಮ ಎಂಬ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನ ನ್ಯಾಯ ನೀಡಿದ್ದೇವೆ. ಇದನ್ನು ಕ್ಷೇತ್ರದ ಮತದಾರರು ಖಂಡಿತ ಅರ್ಥ ಮಾಡಿಕೊಳ್ಳುತ್ತಾರೆ.

ಈ ಚುನಾವಣೆಯಲ್ಲಿ ಅಪಪ್ರಚಾರ ನಡೆಸುವವರನ್ನು, 5 ವರುಷಕ್ಕೆ ಒಮ್ಮೆ ಮನೆಗಳಿಗೆ ಬರುವವರನ್ನು ತಿರಸ್ಕರಿಸಿ ಜನರ ಜತೆಗೆ ಸದಾ ಕಾಲವು ಇದ್ದ ಬಿಜೆಪಿ ಶಾಸಕನಾದ ನನ್ನನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿದರು. ಪ್ರಮುಖರಾದ ಸಂತೋಷ್ ಶೆಟ್ಟಿ, ಶಂಭು ಹೆಗ್ಡೆ, ಹರಿಶ್ಚಂದ್ರ ಕುಲಾಲ್ ಸಹಿತ ಅನೇಕ ಮಂದಿ ಗಣ್ಯರು, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Vishwa News 24

Recent Posts

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ -vishwanews24

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ ಉಡುಪಿ: ಉದ್ಯಾವರ…

9 hours ago

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ -vishwanews24

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ…

9 hours ago

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ -vishwanews24

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ…

10 hours ago

ಕಾರ್ಕಳ : ಯಕ್ಷರಂಗಾಯಣದ ಹೆಸರನ್ನು ಬದಲಾಯಿಸಿರುವುದು ಅತ್ಯಂತ ಬೇಜವಾಬ್ದಾರಿ ಹಾಗೂ ಏಕಪಕ್ಷೀಯ ನಿರ್ಧಾರ : ಸುನಿಲ್‌ ಕುಮಾರ್‌ ಆಕ್ರೋಶ -vishwanews24

ಕಾರ್ಕಳ :ಯಕ್ಷರಂಗಾಯಣ ದ ಹೆಸರು ಬದಲಾವಣೆಗೆ ಶಾಸಕ ಸುನಿಲ್‌ ಕುಮಾರ್‌ ಆಕ್ರೋಶ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ ಕಾರ್ಕಳ:…

13 hours ago

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ -vishwanews24

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…

13 hours ago

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ -vishwanews24

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ ಉಡುಪಿ :…

14 hours ago