Featured

ಕಾರ್ಪೊರೇಟ್ ಕಂಪನಿಗಳಿಗೆ ರೈತರನ್ನು ಜೀತದಾಳುಗಳನ್ನಾಗಿಸಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ : ರಾಕೇಶ್ ಟಿಕಾಯತ್ -Vishwanews24

ಕಾರ್ಪೊರೇಟ್ ಕಂಪನಿಗಳಿಗೆ ರೈತರನ್ನು ಜೀತದಾಳುಗಳನ್ನಾಗಿಸಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ : ರಾಕೇಶ್ ಟಿಕಾಯತ್ -Vishwanews24

ಧಾರವಾಡ: ‘ರೈತರು ಹಾಗೂ ಗ್ರಾಹಕರಿಗೆ ಸಿಗಬೇಕಾದ ಆಹಾರ ಧಾನ್ಯಗಳನ್ನು ತಮ್ಮ ಖಾಸಗಿ ಗೋದಾಮಿನಲ್ಲಿಟ್ಟು ಕಾರ್ಪೊರೇಟ್ ಕುಳಗಳು ಹಸಿವನ್ನು ಮಾರಾಟ ಮಾಡಲು ಹೊರಟಿವೆ. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಕಾನೂನು ಜಾರಿಗೆ ತರುವ ಮೂಲಕ ನೀಡುತ್ತಿರುವ ಸಹಕಾರದ ವಿರುದ್ಧ ಹೋರಾಟ ಆರಂಭವಾಗಿದೆ’ ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಟಿಕಾಯತ್ ಹೇಳಿದರು.

ವಿವಿಧ ಕೃಷಿ ಹಾಗೂ ಸಾಮಾಜಿಕ ಹೋರಾಟ ಸಂಘಟನೆಗಳು ಇಲ್ಲಿನ ಕಡಪಾ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಸದ್ಯಕ್ಕೆ ರೈತ ವಿರೋಧಿ ಮೂರು ಕಾನೂನುಗಳನ್ನು ಸರ್ಕಾರ ಜಾರಿಗೆ ತಂದಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಕಾಯ್ದೆ ಹಾಗೂ ಬೀಜದ ಕಾಯ್ದೆಯನ್ನು ತರಲಿದೆ. ಇವುಗಳ ಮೂಲಕ ಕಾರ್ಪೊರೇಟ್ ಕಂಪನಿಗಳಿಗೆ ರೈತರನ್ನು ಜೀತದಾಳುಗಳನ್ನಾಗಿಸಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ. ಇದರ ವಿರುದ್ಧ 125 ದಿನಗಳಿಂದ ದೆಹಲಿಯ ಹೊರವಲಯದಲ್ಲಿ ಹೋರಾಟ ನಡೆದಿದೆ. ದೇಶದ ಯುವ ಜನತೆ ಈಗ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಜಮೀನು ಕಳೆದುಕೊಂಡು ಪರಿತಪಿಸಬೇಕಾಗಬಹುದು’ ಎಂದು ಎಚ್ಚರಿಸಿದರು.

ಇದನ್ನೂ ಓದಿ :ತಂದೆ-ತಾಯಿ ಆರಾಮಗಿದ್ದಾರೆ. ಆತಂಕ ಪಡುವ ಆಗತ್ಯವಿಲ್ಲ : ಹೆಚ್.‌ ಡಿ ಕುಮಾರಸ್ವಾಮಿ -Vishwanews24

‘ಮಂಡಿ ಹೊರಗೆ ಬೆಳೆಗಳನ್ನು ಮಾರಾಟ ಮಾಡಬಹುದು ಎಂದು ಇವರು ಹೇಳುತ್ತಿದ್ದಾರೆ. ಈಗಾಗಲೇ ಮಧ್ಯಪ್ರದೇಶ ಹಾಗೂ ಇನ್ನಿತರ ಉತ್ತರ ಭಾರತ ರಾಜ್ಯಗಳಲ್ಲಿ ಮಂಡಿ ಹೊರಗೆ ಮಾರಾಟ ಮಾಡಿದ ರೈತರನ್ನು ಕೆಲವರು ವಂಚಿಸಿದ ಉದಾಹರಣೆಗಳಿವೆ. ರೈತರ ಪರ ಕಾನೂನು ಎನ್ನುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಈ ಕುರಿತು ಎಲ್ಲಿಯೂ ಮಾತನ್ನಾಡದಿರುವುದು ಇವರ ಷಡ್ಯಂತ್ರವನ್ನು ತಿಳಿಸುತ್ತದೆ’ ಎಂದರು.

‘2021 ಆಂದೋಲನದ ವರ್ಷವಾಗಿದ್ದು, ಈ ವರ್ಷದ ಅಂತ್ಯದ ವರೆಗೂ ಈ ಹೋರಾಟ ಮುಂದುವರೆಯಲಿದೆ. ನಂತರದ ಹೋರಾಟದ ರೂಪುರೇಷೆ ಕುರಿತು ಮುಂದೆ ತಿಳಿಸಲಾಗುವುದು. ಇದಕ್ಕಾಗಿ ದೆಹಲಿಯ ಹೊರವಲಯದಲ್ಲಿ ಮನೆಗಳು ನಿರ್ಮಾಣವಾಗಿವೆ. ನೀರು, ಶೌಚಾಲಯ, ವಿದ್ಯುತ್ ಪ್ರತಿಯೊಂದರ ವ್ಯವಸ್ಥೆಯೂ ಆಗಿದೆ. ಪ್ರತಿ ಗ್ರಾಮದಿಂದ ಒಂದು ಟ್ರ್ಯಾಕ್ಟರ್‌ನೊಂದಿಗೆ 15 ಜನರು ಹತ್ತು ದಿನಗಳ ಕಾಲ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಇದೊಂದು ಸುದೀರ್ಘ ಹೋರಾಟವಾಗಿರುವುದರಿಂದ ರೈತರು, ಕಾರ್ಮಿಕರು ಸಜ್ಜಾಗಬೇಕು. ಇಲ್ಲಿ ಜಾತಿ ಹಾಗೂ ಧರ್ಮವನ್ನೂ ಮೀರಿ ರೈತಧರ್ಮವೇ ಶ್ರೇಷ್ಠ ಎಂಬ ಭಾವನೆ ಎಲ್ಲರಲ್ಲೂ ಇರಬೇಕು’ ಎಂದು ಟಿಕಾಯತ್ ಹೇಳಿದರು.

ಇದನ್ನೂ ಓದಿ :“ನಾವು ಬಿಜೆಪಿಯವರ ರೀತಿಯಲ್ಲ , ಚುನಾವಣೆಯ ಸಂದರ್ಭ ನೀಡಿದ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೇವೆ : ರಾಹುಲ್‌ ಗಾಂಧಿ -Vishwanews24

 

 

Vishwa News 24

Recent Posts

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ -vishwanews24

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ ಮಂಗಳೂರು ಉಚ್ಚಿಲ ದಸರಾ ನವರಾತ್ರಿ ಮಹೋತ್ಸವ ದಲ್ಲಿ ಭಾಗಿ…

12 hours ago

ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್‌ಟ್ರಿಮ್ ಡ್ಯಾನ್ಸ್ ಅಕಾಡೆಮಿ – vishwanews24

ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್‌ಟ್ರಿಮ್ ಡ್ಯಾನ್ಸ್ ಅಕಾಡೆಮಿ…

21 hours ago

ಉಡುಪಿ: ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮಕ್ಕೆ ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹ – vishwanews24

ಉಡುಪಿ: ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ…

21 hours ago

ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು – vishwanews24

ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು: ದಸರಾ…

21 hours ago

`ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ – vishwanews24

`ಬ್ರೇಕಿಂಗ್ ಬ್ಯಾಡ್' ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ ಅಮೆರಿಕದ ಜನಪ್ರಿಯ ಟಿವಿ ಸರಣಿ `ಬ್ರೇಕಿಂಗ್ ಬ್ಯಾಡ್’ನಲ್ಲಿ ವಾಲ್ಟರ್…

21 hours ago

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ – vishwanews24

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ…

2 days ago