Featured

ಕಾರ್ಮಿಕ ಸಂಘಟನೆಗಳಿಂದ ಜ.8 ಹಾಗೂ 9 ಭಾರತ್ ಬಂದ್ ಗೆ ಕರೆ..

ಬೆಂಗಳೂರು : ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆ ವಿರೋಧಿಸಿ ಸಾರಿಗೆ ಇಲಾಖೆ ಕಾರ್ಮಿಕ ಸಂಘಟನೆಗಳು ಮಂಗಳವಾರ ಹಾಗೂ ಬುಧವಾರ ಎರಡು ದಿನ ಕೇಂದ್ರ ಸರ್ಕಾರದ ವಿರುದ್ಧ ಭಾರತ್ ಬಂದ್ ಗೆ ಕರೆ ನೀಡಿದೆ.

ಜನವರಿ 8 ಹಾಗೂ 9 ರಂದು ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ ನೀಡಿದೆ. ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಬುಧವಾರ ಸಂಜೆ 5 ಗಂಟೆಯವರಗೆ ಬಂದ್ ನಡೆಯಲಿದೆ.

ಬಂದ್ ದಿನ ಬಿಎಂಟಿಸಿ, ಕೆಎಸ್‌ಆರ್ ಟಿಸಿ ಬಸ್ ಸೇವೆ ಇರಲ್ಲ, ಆಟೋ ಓಲಾ ಕ್ಯಾಬ್ ಕೂಡ ಬಂದ್ ಗೆ ಬೆಂಬಲ ಸೂಚಿಸಿದೆ. ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಬಸ್ ಇರಲ್ಲ, ಆಟೋ, ಓಲಾ ಮತ್ತು ಜೊತೆಗೆ ಮುಷ್ಕರದಲ್ಲಿ ಬ್ಯಾಂಕ್ ನೌಕರರು ಪಾಲ್ಗೊಳ್ಳಲಿದ್ದು, ಬ್ಯಾಂಕ್ ಸೇವೆಗಳಲ್ಲೂ ವ್ಯತ್ಯಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಆಸ್ಪತ್ರೆ. ಮೆಡಿಕಲ್. ಶಾಪ್ ಅಂಗಡಿ ಮುಗ್ಗಟ್ಟುಗಳು ಇರುತ್ತದೆ. ಜೊತೆಗೆ ಆಯಂಬುಲೆನ್ಸ್ ಸೇವೆ, ಮೆಟ್ರೋ ಇರಲಿದೆ. ಇನ್ನೂ ಶಾಲೆ ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ಆಯಾಯ ಜಿಲ್ಲಾಧಿಕಾರಿಗಳು ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

ಕೆಲ ಟ್ಯಾಕ್ಸಿ ಮತ್ತು ಆಟೋ ಸಂಘಟನೆಗಳು ಬಂದ್ ಗೆ ಕೇವಲ ನೈತಿಕ ಬೆಂಬಲ ವ್ಯಕ್ತಪಡಿಸಿದ್ದು, ಕೆಲ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದ್ದರೂ ಮತ್ತೆ ಕೆಲವು ಸಂಘಟನೆಗಳು ನೈತಿಕ ಬೆಂಬಲ ಮಾತ್ರ ಘೋಷಣೆ ಮಾಡಿವೆ. ಟ್ಯಾಕ್ಸಿ ಮತ್ತು ಆಟೋ ಸೇವೆ ಎಂದಿನಂತೆ ಇರಲಿವೆ ಎಂದು ಘೋಷಣೆ ಮಾಡಿವೆ. ಹೀಗಾಗಿ ಆಟೋ ಮತ್ತು ಟ್ಯಾಕ್ಸಿ ಸೇವೆ ಸಂಪೂರ್ಣ ಬಂದ್ ಆಗಿದಿದ್ದರೂ ಸಂಚಾರ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎಐಟಿಯುಸಿ, ಸಿಐಟಿಯು, ಐಎನ್ ಟಿಯುಸಿ, ಎಲ್ ಪಿಎಫ್ ಕಾರ್ಮಿಕ ಸಂಘಟನೆಗಳು ಜನವರಿ 8 ಹಾಗೂ 9 ರಂದು ಭಾರತ್ ಬಂದ್ ಗೆ ಕರೆ ಕೊಟ್ಟಿದೆ.

Vishwa News 24

Recent Posts

ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ ದುರುಪಯೋಗ : ದಿನೇಶ್ ಗುಂಡೂರಾವ್ -vishwanews24

ಇ.ಡಿ, ಐಟಿಯವರು ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ : ದಿನೇಶ್ ಗುಂಡೂರಾವ್ ಆರೋಪ  ಮಂಗಳೂರು: ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ…

3 days ago

ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ -vishwanews24

ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ ತಿರುವನಂತಪುರಂ : ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಎಂಟು…

3 days ago

ಕಟಪಾಡಿಯಲ್ಲಿ ಮೇ.22 ,23, 24 ರಂದು ಹಲಸು ಮೇಳ – 2026 -vishwanews24

ಕಟಪಾಡಿಯಲ್ಲಿ ಮೇ.22 ,23, 24 ರಂದು ಹಲಸು ಮೇಳ - 2026 ಕಟಪಾಡಿಯ SVS ಕ್ರೀಡಾಂಗಣದಲ್ಲಿ ಮೇ 22 ರಿಂದ…

3 days ago

ವಿಟ್ಲ : ಅಕ್ರಮ ಗೋ ಸಾಗಾಟ ಆರೋಪ: ಗೋವು ಸಹಿತ ವಾಹನ ಚಾಲಕ ವಶಕ್ಕೆ -vishwanews24

ವಿಟ್ಲ : ಅಕ್ರಮ ಗೋ ಸಾಗಾಟ ಆರೋಪ: ಗೋವು ಸಹಿತ ವಾಹನ ಚಾಲಕ ವಶಕ್ಕೆ ಕೊಳ್ನಾಡು: ಪಂಜರಕೋಡಿ ಎಂಬಲ್ಲಿ ಪಿಕಪ್…

3 days ago

ಉಡುಪಿ : ಮೀನು ಮಾರಾಟ ಫೆಡರೇಶನ್ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಯಶ್ಪಾಲ್ ಸುವರ್ಣ -vishwanews24

ಉಡುಪಿ : ಮೀನು ಮಾರಾಟ ಫೆಡರೇಶನ್ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಯಶ್ಪಾಲ್ ಎ ಸುವರ್ಣ ಉಡುಪಿ:…

3 days ago

ಉಡುಪಿ: ಜೂ.1ರಿಂದ ಡಾ.ಟಿಎಂಎ ಪೈ ಆಸ್ಪತ್ರೆ ಸ್ಥಳಾಂತರ -vishwanews24

ಉಡುಪಿ: ಜೂ.1ರಿಂದ ಡಾ.ಟಿಎಂಎ ಪೈ ಆಸ್ಪತ್ರೆ ಸ್ಥಳಾಂತರ ಉಡುಪಿ : ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯು ಉಡುಪಿ ಸ್ವಾಗತ…

3 days ago