ನಡೆಯುವಾಗ ಅಥವಾ ಓಡುವಾಗ ಕಾಲು ಉಳುಕುವುದು ಸಾಮಾನ್ಯ ಸಂಗತಿ. ನಾಲ್ಕೈದು ದಿನ ಬೆಂಬಿಡದೆ ಕಾಡುವ ಈ ನೋವನ್ನು ಮನೆ ಮದ್ದಿನ ಮೂಲಕ ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.
ಅರಿಶಿನ : ಅರಿಶಿನ ಹಚ್ಚುವುದರಿಂದ ಕಾಲು ಊದಿಕೊಳ್ಳುವುದಿಲ್ಲ. 2 ಚಮಚ ಅರಿಶಿನಕ್ಕೆ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ.ಇದನ್ನು ಸ್ವಲ್ಪ ಬಿಸಿ ಮಾಡಿ ಉಳುಕಿದ ಜಾಗಕ್ಕೆ ಹಚ್ಚಿಕೊಳ್ಳಿ. ಎರಡು ಗಂಟೆ ಬಿಟ್ಟು ಬಿಸಿ ನೀರಿನಲ್ಲಿ ಕಾಲನ್ನು ತೊಳೆದುಕೊಳ್ಳಿ.
ವೀಳ್ಯದೆಲೆ : ವೀಳ್ಯದೆಲೆ ಉಳುಕಿನ ಸಮಸ್ಯೆಗೆ ಬಹಳ ಉತ್ತಮ. ಹಾಗಾಗಿ ಸಾಸಿವೆ ಎಣ್ಣೆಗೆ ವೀಳ್ಯದೆಲೆ ಹಾಕಿ ಸ್ವಲ್ಪ ಬಿಸಿ ಮಾಡಿ ನಂತ್ರ ಉಳುಕಿದ ಜಾಗಕ್ಕೆ ಹಚ್ಚಿಕೊಳ್ಳಿ
ಜೇನು ತುಪ್ಪ ಹಾಗೂ ಸುಣ್ಣ : ಜೇನುತುಪ್ಪ ಹಾಗೂ ಸುಣ್ಣವನ್ನು ಸರಿ ಪ್ರಮಾಣದಲ್ಲಿ ತೆಗೆದುಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಉಳುಕಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಕೆಲವೇ ಗಂಟೆಯಲ್ಲಿ ನಿಮಗೆ ಆರಾಮ ಸಿಗುತ್ತದೆ.
ಅಲೋವೇರಾ : ಅಲೋವೇರಾದಲ್ಲಿ ಸಾಕಷ್ಟು ಔಷಧಿ ಗುಣಗಳಿವೆ. ಇದ್ರ ಪರಿಣಾಮ ಕೂಡ ಬೇಗ ಗೊತ್ತಾಗುತ್ತದೆ. ಉಳುಕಿದ ಜಾಗದಲ್ಲಿ ಅಲೋವೇರಾ ಹಚ್ಚಿ. ಸ್ವಲ್ಪ ಹೊತ್ತಿನಲ್ಲಿಯೇ ನೆಮ್ಮದಿ ಸಿಗಲಿದೆ.
ಮಂಜುಗಡ್ಡೆ : ಕಾಲು ಉಳುಕಿದ ತಕ್ಷಣ ಮಂಜುಗಡ್ಡೆಯನ್ನು ಕಾಲಿನ ಮೇಲೆ ಇಟ್ಟುಕೊಳ್ಳಿ. ಇದ್ರಿಂದ ಕಾಲು ಊದಿಕೊಳ್ಳುವುದಿಲ್ಲ. ಹಾಗೆ ನೋವು ಕಡಿಮೆಯಾಗುತ್ತದೆ. ಮಂಜುಗಡ್ಡೆಯನ್ನು 1-2 ಗಂಟೆ ಬಿಟ್ಟು 20 ನಿಮಿಷ ಇಟ್ಟುಕೊಳ್ಳಿ.
.
ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…
ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…
ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…
ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…
ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…
ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…