Featured

ಕಿಂಗ್ ಮೇಕರ್ ತಿಂಗಳೆ ಉಡುಪಿಯಲ್ಲಿ ಕಿಂಗ್ ಆಗಲು ಹೊರಟರೇ..?? Vishwanews24

ಕಿಂಗ್ ಮೇಕರ್ ತಿಂಗಳೆ

ಉಡುಪಿಯಲ್ಲಿ ಕಿಂಗ್

ಆಗಲು ಹೊರಟರೇ..??

ಉಡುಪಿ:    ಹೌದು ಇನ್ನೇನೂ ಕೆಲವೇ ತಿಂಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯ ಕಾವು ರಂಗೇರಲಿದ್ದು ರಾಜ್ಯದೆಲ್ಲೆಡೆ ಚುನಾವಣೆಯ ಪೂರ್ವ ತಯಾರಿ ಜೋರಾಗಿಯೇ ನಡೆಯುತ್ತಿದೆ.


ಈ ನಡುವೆ ಇಡೀ ರಾಜ್ಯಕ್ಕೆ ಹಿಂದುತ್ವ ಮತ್ತು ಬಿಜೆಪಿಯ ಬೆಲ್ಟ್ ಅಥಾವ ಫ್ಯಾಕ್ಟರಿ ಅನಿಸಿಕೊಂಡಿರುವ ಉಡುಪಿ ಹಾಗೂ ದಕ ದಲ್ಲೂ ಕೂಡ ಚುನಾವಣೆಯ ಬಿಸಿ ಜೋರಾಗಿಯೇ ನಡೆಯುತ್ತಿದೆ.

ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಅತ್ಯಂತ ಚುಕುಕಾಗಿ ನಡೆಯುತ್ತಿದ್ದರೆ ಹಾಲಿ ಇರುವ ಶಾಸಕರ ಬುಡ ಕೂಡ ಅಲುಗಾಡಬಹುದೇ ಎಂಬ ವದಂತಿ ಕೂಡ ಕೇಳಿಬರುತ್ತಿದೆ.
ರಜತ ವರ್ಷದ ಸಂಭ್ರಮದಲ್ಲಿರುವ ಉಡುಪಿ ಜಿಲ್ಲೆಗೆ ಹೊಸ ಶಾಸಕರ ಎಂಟ್ರಿಯೂ ಆಗಲಿದೆಂಬ ಮಾತು ಕೇಳಿ ಬರುತ್ತಿದೆ.
ಸದ್ಯದ ಮಟ್ಟಿಗೆ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ರಘುಪತಿ ಭಟ್ ಶಾಸಕರಾಗಿದ್ದು ಇವರನ್ನು ಮೀರಿಸುವ ಮತ್ತೊಂದು ನಾಯಕ ಇಲ್ಲ ಎಂಬ ಕನಸಿಗೆ ತನ್ನೀರು ಬೀಳುವ ಸಾಧ್ಯತೆ ಹೆಚ್ಚಾಗಿಯೇ ಇದೆ ಎನ್ನಲಾಗುತ್ತಿದೆ. ಕಾರಣ ಇಷ್ಟೇ ಇಲ್ಲಿದೆ ನೋಡಿ. . . !


ಕಳೆದ 30 ವರ್ಷಗಳಲ್ಲಿ ಬಿಜೆಪಿ ಪಾರ್ಟಿಯಲ್ಲಿ ಸಕ್ರಿಯವಾಗಿದ್ದುಕೊಂಡು ಸಾಮಾಜಿಕ-ಧಾರ್ಮಿಕ-
ಸಾಹಿತ್ಯ=ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡು 26 ವರ್ಷಗಳ ಕಾಲ ಉಡುಪಿ ಜಿಲ್ಲಾ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದು ಮಾತ್ರವಲ್ಲದೆ ಪ್ರಸ್ತುತವಿರುವ ನಾಯಕರನ್ನು ಸೇರಿಸಿ ತನ್ನ ಗರಡಿಯಲ್ಲಿ ಬೆಳೆಸಿ ಬೆನ್ನುತಟ್ಟಿ ಸ್ಥಳೀಯಾಡಳಿತದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷದ ಟಿಕೆಟ್ ನೀಡಿ ಸ್ಥಳೀಯ ಸಂಸ್ಥೆಯಲ್ಲಿ ಮಾನ್ಯತೆ ದೊರಕುವಂತೆ ಮಾಡಿಸಿದ್ದ ಕಿಂಗ್ ಮೇಕರ್ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಈ ಬಾರಿ ಉಡುಪಿಯ ಬಿಜೆಪಿ ಟಿಕೆಟ್ ಆಕಾಂಕ್ಷಿ..!!


ಹೌದು ಇದುವರೆಗೆ ತನ್ನ ಗರಡಿಯಲ್ಲಿದ್ದ ನಾಯಕರನ್ನು ಬೆಳೆಸಿ ಕಿಂಗ್ ಮೇಕರ್ ಆಗಿದ್ದ ತಿಂಗಳೆ ಈ ಸಲ ಕಿಂಗ್ ಆಗಲು ಹೊರಟಿದ್ದಾರೆಂಬ ಸುದ್ದಿ ಜೋರಾಗಿಯೇ ರಾಜ್ಯ ನಾಯಕರ ವಲಯದಲ್ಲಿಯೂ ಕೇಳಿ ಬರುತ್ತಿದೆ.

ಸಂಘದ ತಳಪಾಯ ತಂದೆಯಿಂದಲೆ ರಕ್ತಗತ ಮಾಡಿಕೊಂಡಿರುವ ಇವರದು ಸಂಘದ ಮನೆ ಕೂಡ. ತುರ್ತುಪರಿಸ್ಥಿತಿಯ ಸಮಯದಲ್ಲಿ ಸಂಘದ ಬಹುತೇಕ ಹಿರಿಯರು ಇವರ ತಿಂಗಳೆ ಮನೆಯಲ್ಲೇ ಬೀಡು ಬಿಟ್ಟಿರುವುದು ಅಂದಿನ ಸಂಘದ ಸಂಪರ್ಕ ಇರುವವರಿಗೆ ತಿಳಿದಿದೆ.


ಇತ್ತೀಚೆಗೆ ಅಂದಿನ ಕಹಳೆ ಪತ್ರಿಕೆಯನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿ ಸಂಘದ ಹಿರಿಯರಿಂದ ಪ್ರಶಂಸೆ ಪಡೆದುಕೊಂಡಿದ್ದರು. ಮೂರು ರಂಗದಲ್ಲಿಯೂ ತನ್ನದೆ ಆದ ಛಾಪನ್ನು ಇಟ್ಟುಕೊಂಡಿರುವ ಈ ವ್ಯಕ್ತಿ ತನ್ನ ಕಾರ್ಯಕರ್ತರಿಗೆ ತೊಂದರೆ ಆದಾಗ ತಕ್ಷಣ ಸ್ಪಂದಿಸಿ ಬಿಜೆಪಿ ಕಾರ್ಯಕರ್ತರ ಪಕ್ಷ ಎನ್ನುವುದನ್ನು ಸಾಬೀತು ಪಡಿಸಿದ್ದರು . ಆದರೆ ಪಕ್ಷ ಸಂಘಟನೆಯ ವಿಚಾರವಾಗಿ ಬಿಸಿ ಮುಟ್ಟಿಸಿಯೇ ಕೆಲಸ ಕಾರ್ಯ ಮಾಡಿಸಿಕೊಂಡ ಒಬ್ಬ ನಿಷ್ಠಾವಂತ ಬಿಜೆಪಿಗ ಎಂಬುದು ಕೇಸರಿ ಪಾರ್ಟಿಯ ಮೂಲ ಕಾರ್ಯಕರ್ತರಿಗೆ ತಿಳಿದಿರುವ ವಿಚಾರ ಅದೇ ವ್ಯಕ್ತಿ ಈ ಬಾರಿ ಉಡುಪಿಯ ಬಿಜೆಪಿ ಟಿಕೆಟ್ ಆಕಾಂಕ್ಷಿ.


ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಜತೆ ನಿಕಟಸಂಪರ್ಕ ಹೊಂದಿರುವ ತಿಂಗಳೆಯ ವರ್ಚಸ್ಸಿನ ನಾಯಕರು ಸದ್ಯ ಉಡುಪಿಗೆ ಅಗತ್ಯವಾಗಿ ಬೇಕಿದೆ ಎಂಬ ಮಾತು ಕೆಲವು ವರ್ಷಗಳ ಹಿಂದೆಯೇ ಕೇಳಿ ಬಂದಿತ್ತು ಆದರೇ ಪಕ್ಷದ ಚಟುವಟಿಕೆ ಹೊರತುಪಡಿಸಿ ಬೇರೆ ಯಾವುದೇ ವಿಚಾರದಲ್ಲಿ ಮೂಗು ತೂರಿಸದ ತಿಂಗಳೆಯ ಈ ಸಲದ ಗ್ರ್ಯಾಂಡ್ ಎಂಟ್ರಿ ಮಾತ್ರ ಕಾಂಗ್ರೇಸ್‍ಗೆ ನುಂಗಲಾರದ ತುತ್ತಾಗಿ ಪರಿಣಮಿಸಲಿದೆ.


ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಜಿಲ್ಲಾಧ್ಯಕ್ಷ ಆಗಿದ್ದ ಅವಧಿಯನ್ನು ಕಾರ್ಯಕರ್ತರು ಇಂದಿಗೂ ಸ್ಮರಿಸಿಕೊಂಡು ಪ್ರಸ್ತುತ ವ್ಯವಸ್ಥೆಯ ಬಗ್ಗೆ ಹಿರಿಯ ಮುಖಂಡರಿಗೆ ಪತ್ರ ಚಳುವಳಿ ನಡೆಸಿರುವುದು ಗುಟ್ಟಾಗಿ ಉಳಿದಿಲ್ಲ ಬಿಡಿ ಕಾರಣ ಇಷ್ಟೇ ಜಿಲ್ಲಾಧ್ಯಕ್ಷ ಆಗಿದ್ದ ಅವಧಿಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಮಾಡಿ ಕಾರ್ಯಕರ್ತರ ಹಾಗೂ ಸಾರ್ವಜನಿಕರ ಕೆಲಸ ಮಾಡಿಸಿಕೊಟ್ಟ ಬಗ್ಗೆ ಕೆಲವು ತಿಂಗಳ ಹಿಂದೆಯಷ್ಟೆ ಮಾಜಿ ಸರ್ಕಾರಿ ಅಧಿಕಾರಿ ಖಾಸಗಿ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದರು ಅಂದರೆ ಒಂದರ್ಥದಲ್ಲಿ ತಿಂಗಳೆ ಎಂದರೆ ಅದೊಂದು ದಕ್ಷತೆ ಎಂಬ ಮಾತಿದೆ.


ಅದೆಷ್ಟೋ ಸಲ ಒಂದು ಸಲ ಚುನಾವಣೆ ಗೆದ್ದರೆ ಸಾಕು ಮತ್ತೆ ಪಕ್ಷ-ಸಂಘಟನೆ-ಕಾರ್ಯಕರ್ತರ ಕಡೆ ಗಮನ ಹಾಕದ ಅದೆಷ್ಟೋ ನಾಯಕರನ್ನು ಹಿಡಿದೆಳೆದು ಕೆಲಸ ಮಾಡಿಸುವ ತಾಕತ್ತಿದ್ದ ತಿಂಗಳೆ ಈ ಬಾರಿ ಉಡುಪಿಗೆ ಶಾಸಕರಾಗಲು ಹೊರಟ್ಟಿದ್ದಾರೆಂಬ ಸುದ್ದಿ ಹೊರ ಬರುತ್ತಿದ್ದಂತೆ ಅನ್ಯಾಯವಾಗಿ ಹುತ್ತ ಸೇರಿದ್ದ ನಿಯತ್ತಿನ ಬಿಜೆಪಿ ಕಾರ್ಯಕರ್ತರ ಪಡೆ ಮತ್ತೆ ಯುದ್ದಕ್ಕೆ ಸಜ್ಜಾಗಿದೆ.
ಬೈಟಕ್ ಸಂಖ್ಯೆ ಕೂಡ ಜಾಸ್ತಿಯಾಗುತ್ತಿದೆ ಪರಿವಾರ ಸಂಘಟನೆಯ ಕಾರ್ಯಕರ್ತರೂ ಕೂಡ ಫೈಲೆಟ್‍ಗಳಂತೆ ಕೆಲಸ ನಿರ್ವಹಿಸಲು ಸನ್ನದ್ಧರಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.


ವೈಯಕ್ತಿಕ ಜೀವನದಲ್ಲಿಯೂ ಕೂಡ ಯಾವುದೇ ಕಪ್ಪು ಚುಕ್ಕೆಯಿಲ್ಲದ ತಿಂಗಳೆಗೆ ಬೆಂಬಲಿಸುವ ದೊಡ್ಡ ಮಟ್ಟದ ಸಮುದಾಯ ಉಡುಪಿ ಕ್ಷೇತ್ರದಲ್ಲಿದೆ ಅದರಲ್ಲೂ ವಿಶೇಷವಾಗಿ ಸದ್ಯದ ಬೆಳವಣಿಗೆಯಿಂದ ಬೇಸತ್ತು ಹಿಂದೇಟು ಹಾಕಿದ್ದ ಕಾರ್ಯಕರ್ತರ ಪಡೆಯಂತೂ ವಿಕ್ರಮಾರ್ಜುನ ಹೆಗ್ಡೆ ಟಿಕೆಟ್ ಆಕಾಂಕ್ಷಿ ಎಂಬ ಸುದ್ದಿ ಸದ್ದು ಮಾಡುತ್ತಿರುವಾಗಲೇ ಈ ಸಲ ಏನಾದರೂ ಆಗಬಹುದೆಂಬ ನಿರೀಕ್ಷಯಿಂದ ಮತ್ತೆ ಬಿಜೆಪಿ ಜತೆ ಹೆಜ್ಜೆ ಹಾಕಲು ಮುಂದಾಗಿದ್ದಾರೆ.

ನೇರ ನಡೆ ನುಡಿ ವ್ಯಕ್ತಿತ್ವದ ಈ ವ್ಯಕ್ತಿಯ ಬಗ್ಗೆ ನೆಗೆಟಿವ್ ಪಾಯಿಂಟ್ ಅಳೆದು ತೂಗಿ ಲೆಕ್ಕ ಹಾಕಿದರೂ ಅತ್ಯಂತ ಕಡಿಮೆಯೇ ಆಗಿದೆ ಕಾರಣ ಇಷ್ಟೇ ಅದೇನೂ ಮಾಡಿದ್ದರೂ ಕೂಡ ಪಕ್ಷದ ಬೆಳವಣಿಗೆಯೇ ದೃಷ್ಟಿಯೇ ಆಗಿದೆ ಹೊರತು ಮನೆಯ ಬೆಳವಣಿಗೆಗಲ್ಲ ಎಂಬ ಮಾತು ಹಿರಿಯರಿಂದಲೂ ಕೇಳಿ ಬಂದಿತ್ತು.

ಕಾದು ನೋಡ ಬೇಕಾಗಿದೆ ಉಡುಪಿ ಎಂದರೆ ಅದೂ ಕೃಷ್ಣ ನಗರಿ ಎಂದೇ ವಿಶ್ವವಿಖ್ಯಾತಿ “ ಇಲ್ಲಿ ಕಾರ್ಯಕರ್ತರ ಪಾಲಿಗೆ ಯಾವಾಗ ಅಧರ್ಮ ತಾಂಡವಾಡುತ್ತೋ ಆವಾಗ ಕೃಷ್ಣನಂತೆ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಬರ್ತಾರೋ ಎಂಬುದು ಕಾದು ನೋಡಬೇಕಾಗಿದೆ”
ಪೊಲಿಟಿಕಲ್ ಬ್ಯುರೋ ಉಡುಪಿ.

 

Vishwa News 24

Recent Posts

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

2 days ago

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ : ಬೆಸ್ಕಾಂ ಸ್ಪಷ್ಟನೆ – vishwanews24

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…

2 days ago

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ – vishwanews24

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…

2 days ago

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಆರೋಪ – vishwanews24

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಗಂಭೀರ…

2 days ago

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ: ಸಂಸದ ಯದುವೀರ್ ಒಡೆಯರ್ ಆಕ್ಷೇಪ – vishwanews24

ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…

2 days ago

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ – vishwanews24

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…

2 days ago