Featured

ಕಿಡ್ನ್ಯಾಪ್‌ ಮಾಡಿ , ಬಲವಂತವಾಗಿ ಆಲ್ಕೋಹಾಲ್‌ ಕುಡಿಸಿ ನಾಲ್ವರು ಮಹಿಳೆಯರಿಂದ ಯುವಕನ ಅತ್ಯಾಚಾರ – Vishwanews24

ಪಂಜಾಬ್‌ : ಕಿಡ್ನ್ಯಾಪ್‌ ಮಾಡಿ , ಬಲವಂತವಾಗಿ ಆಲ್ಕೋಹಾಲ್‌ ಕುಡಿಸಿ ನಾಲ್ವರು ಮಹಿಳೆಯರಿಂದ ಯುವಕನ ಅತ್ಯಾಚಾರ

ಪಂಜಾಬ್‌  : ಮಹಿಳೆಯರಿಂದಲೇ ಪುರುಷನ ಅಪಹರಣ ಹಾಗೂ ಅತ್ಯಾಚಾರವಾಗಿದೆ.,ಪಂಜಾಬ್‌ನಲ್ಲಿ ಇಂತಹದ್ದೊಂದು ಅಪರೂಪದ ಕೇಸ್‌ ದಾಖಲಾಗಿದೆ. ಪಂಜಾಬ್‌ನ ಜಲಂಧರ್‌ (Jalandhar) ಮೂಲದ ವ್ಯಕ್ತಿಯೊಬ್ಬನನ್ನು ನಾಲ್ವರು ಮಹಿಳೆಯರು ಅಪಹರಿಸಿ ಅತ್ಯಾಚಾರ ಮಾಡಿರುವ ಬಗ್ಗೆ ವ್ಯಕ್ತಿ ಹೇಳಿಕೊಂಡಿದ್ದಾನೆ. ಈ ಸಂಬಂಧ ಪಂಜಾಬ್‌ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತನ್ನ ಕಣ್ಣಿಗೆ ಕೆಮಿಕಲ್‌ ಸ್ಪ್ರೇ ಮಾಡಿ, ತನ್ನನ್ನು ಬಿಳಿಯ ಕಾರಿನಲ್ಲಿ ಕಿಡ್ನ್ಯಾಪ್‌ ಮಾಡಲಾಯಿತು. ಹಾಗೂ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬಲವಂತವಾಗಿ ಆಲ್ಕೋಹಾಲ್‌ ಕುಡಿಸಿ ಅತ್ಯಾಚಾರ ಮಾಡಲಾಯಿತು ಎಂದು ಜಲಂಧರ್‌ ಮೂಲದ ಕಾರ್ಮಿಕ ಸ್ಥಳೀಯ ಮಾಧ್ಯಮವೊಂದಕ್ಕೆ ಹೇಳಿದ್ದಾನೆ. ತನ್ನ ಮೇಲೆ ಅತ್ಯಾಚಾರವೆಸಗಿದ ಎಲ್ಲ ಮಹಿಳೆಯರೂ 20 ರ ಆಸುಪಾಸಿನವರು ಎಂದೂ ಆತ ಹೇಳಿದ್ದಾನೆ. ಪಂಜಾಬ್‌ ಸ್ಥಳೀಯ ಮಾಧ್ಯಮದಲ್ಲಿ ಈ ಬಗ್ಗೆ ವರದಿಗಳು ಕೇಳಿಬಂದ ನಂತರ ಪಂಜಾಬ್‌ ಪೊಲೀಸ್‌ ಗುಪ್ತಚರ ವಿಭಾಗವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಮೈಸೂರು: ಕಾಡಾನೆ ದಾಳಿ – ದಸರಾ ಆನೆಗಳಲ್ಲಿ ಒಂದಾದ 39 ವರ್ಷದ ಗೋಪಾಲಸ್ವಾಮಿ ಆನೆ ದುರಂತ ಅಂತ್ಯ – Vishwanews24 

ಅತ್ಯಾಚಾರವೆಸಗಿದ ಬಳಿಕ ತನ್ನನ್ನು ನಿರ್ಜನ ಪ್ರದೇಶವೊಂದರಲ್ಲಿ ಬಿಡಲಾಯಿತು ಎಂದೂ ಆತ ಹೇಳಿಕೊಂಡಿದ್ದಾರೆ. ಆದರೆ, ಈ ವ್ಯಕ್ತಿ ಈವರೆಗೆ ಪೊಲೀಸರಿಗೆ ದೂರು ನೀಡಿಲ್ಲ ಎಂದು ತಿಳಿದುಬಂದಿದೆ. ತನಗೆ ಮದುವೆಯಾಗಿ ಮಕ್ಕಳಿದೆ. ತಾನು ಚರ್ಮದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಅಲ್ಲದೆ, ಲೈಂಗಿಕವಾಗಿ ತನ್ನನ್ನು ಬಳಸಿಕೊಳ್ಳಲೆಂದೇ ಅವರು ಕಿಡ್ನ್ಯಾಪ್‌ ಮಾಡಿದರು ಎಂದೂ ಆತ ಹೇಳಿಕೊಂಡಿದ್ದಾನೆ.

ಅತ್ಯಾಚಾರದ ವಿವರ ಹೀಗಿದೆ..
ಸೋಮವಾರ ತಾನು ಮನೆಗೆ ಹೋಗುತ್ತಿದ್ದಾಗ ಬಿಳಿಯ ಕಾರಿನಲ್ಲಿದ್ದ ನಾಲ್ವರು ಮಹಿಳೆಯರು ತನ್ನನ್ನು ಜಲಂಧರ್‌ನ ಕಪುರ್ಥಲಾ ರಸ್ತೆಯಲ್ಲಿ ನಿಲ್ಲಿಸಿದರು. ಬಳಿಕ, ವಾಹನ ಓಡಿಸುತ್ತಿದ್ದ ಮಹಿಳೆ, ಚೀಟಿಯಲ್ಲಿ ಬರೆದಿದ್ದ ಅಡ್ರೆಸ್‌ ಕೇಳಿದರು. ನಾನು ಅದನ್ನು ಓದುತ್ತಿದ್ದಾಗ ನನ್ನ ಕಣ್ಣಿಗೆ ಯಾವುದೋ ಕೆಮಿಕಲ್‌ ಸ್ಪ್ರೇ ಮಾಡಿದರು. ಇದರಿಂದ ತನ್ನ ಕಣ್ಣು ಕಾಣದಂತಾಯಿತು ಹಾಗೂ ತನಗೆ ತಲೆ ಸುತ್ತು ಬಂತು. ನಂತರ, ನನಗೆ ಪ್ರಜ್ಞೆ ಬಂದಾಗ ನಾನು ಕಾರಿನಲ್ಲಿದ್ದೆ, ನನ್ನ ಕಣ್ಣಿಗೆ ಹಾಗೂ ಕೈಗಳಿಗೆ ಕಟ್ಟಲಾಗಿತ್ತು. ನಂತರ, ಅವರು ನನಗೆ ಮದ್ಯ ಕುಡಿಸಿ ಅರಣ್ಯ ಪ್ರದೇಶವೊಂದಕ್ಕೆ ಕರೆದುಕೊಂಡು ಹೋದರು ಎಂದು ಆತ ಹೇಳಿದ್ದಾನೆ.

ಇದನ್ನೂ ಓದಿ: ಮಂಗಳೂರು :ಮೂರು ದಿನಗಳಲ್ಲಿ ಸುರತ್ಕಲ್ ಟೋಲ್ ಗೇಟ್ ಸ್ಥಗಿತ : ಜಿಲ್ಲಾಧಿಕಾರಿ – Vishwanews24 

ಎಲ್ಲ ಮಹಿಳೆಯರೂ ಮದ್ಯಪಾನ ಮಾಡುತ್ತಿದ್ದರು, ತನಗೂ ಸಹ ಬಲವಂತವಾಗಿ ಕುಡಿಸಿ, ನಾಲ್ವರು ಮಹಿಳೆಯರೂ ತನಗೆ ಅತ್ಯಾಚಾರ ಮಾಡಿದರು. ಬಳಿಕ ನಸುಕಿನ ಜಾವ 3 ಗಂಟೆ ವೇಳೆಗೆ ತನಗೆ ಕಣ್ಣಿಗೆ ಕಟ್ಟಿ ಕೈಯನ್ನು ಕಟ್ಟಿ ಹಾಕಿಯೇ ತನ್ನನ್ನು ಬಿಡಲಾಯಿತು ಎಂದೂ ಆತ ಮಾಧ್ಯಮವೊಂದಕ್ಕೆ ಹೇಳಿದ್ದಾನೆ.

ಆ ಮಹಿಳೆಯರು ಇಂಗ್ಲೀಷ್‌ನಲ್ಲಿ ಮಾತನಾಡಿಕೊಳ್ಳುತ್ತಿದ್ದರು. ತನ್ನ ಜತೆಗೆ ಮಾತ್ರ ಪಂಜಾಬಿ ಭಾಷೆಯಲ್ಲಿ ಮಾತನಾಡಿದರು. ಎಲ್ಲರೂ ಶ್ರೀಮಂತರಿದ್ದರು ಎಂದೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಹೇಳಿಕೊಂಡಿದ್ದಾನೆ.

Vishwa News 24

Recent Posts

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ -vishwanews24

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…

10 hours ago

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ -vishwanews24

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…

10 hours ago

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ -vishwanews24

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…

10 hours ago

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ -vishwanews24

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…

11 hours ago

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ -vishwanews24

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…

11 hours ago

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ -vishwanews24

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…

11 hours ago