ಮಂಗಳೂರು,: ಕಿನ್ನಿಗೋಳಿಯಲ್ಲಿ ಮುಚ್ಚಿ ಹೋದ ಬಾವಿ ಉತ್ಖನನದ ವೇಳೆ 300 ವರ್ಷಗಳ ಹಿಂದಿನ ದೈವಗಳ ಪರಿಕರ ಪತ್ತೆಯಾದ ಘಟನೆ ನಡೆದಿದೆ.
ಕಾಲ ಕ್ರಮೇಣ ಜೀರ್ಣಾವಸ್ಥೆಗೆ ತಲುಪಿದ್ದ ದೇವಸ್ಥಾನ ಇದೀಗ ಜೀರ್ಣೋದ್ಧಾರದ ಮೂಲಕ ಬೆಳಕಿಗೆ ಬಂದಿದ್ದು, ಈ ಜೀರ್ಣೋದ್ಧಾರದ ಸಂದರ್ಭದಲ್ಲಿ ದೈವ ನೀಡಿದ್ದ ನುಡಿ ಸತ್ಯವಾಗಿದೆ. ಈ ಘಟನೆ ಕಿನ್ನಿಗೋಳಿ ಸಮೀಪದ ಬಳ್ಕುಂಜೆಯ ಮೂಡಾಯಿಗುತ್ತು ಮನೆಯಲ್ಲಿ ನಡೆದಿದ್ದು, ಮುಚ್ಚಿ ಹೋದ ಬಾವಿಯಲ್ಲಿ ದೈವಗಳ ಪರಿಕರ ಪತ್ತೆಯಾಗಿದೆ.
ಹಲವಾರು ತೊಂದರೆ ಎದುರಿಸುತ್ತಿದ್ದ ಈ ಕುಟುಂಬದವರು ಕೊನೆಗೆ ದೈವ – ದೇವರುಗಳ ಮೊರೆ ಹೋಗಿದ್ದು, ದೈವ ದರ್ಶನದ ವೇಳೆ ‘ಹಿಂದೆ ಮುಚ್ಚಿ ಹೋಗಿರುವ ಬಾವಿ ಅಗೆದು ನೋಡಿ’ ಎಂದು ನುಡಿ ನೀಡಿದೆ.
ಮೂಡಾಯಿಗುತ್ತು ಮನೆಯವರು, ಸತ್ಯ ದೇವತೆ, ಅಣ್ಣಪ್ಪ ಪಂಜುರ್ಲಿ ಜೀರ್ಣೋದ್ಧಾರ ಮಾಡಿದ್ದು, ಈ ವೇಳೆ ದಿವಾಕರ ಪೂಜಾರಿ ಅವರ ದರ್ಶನದಲ್ಲಿ ದೈವದ ನುಡಿಯಲ್ಲಿ ಬಾವಿ ತೋಡುವಂತೆ ಹೇಳಿದ್ದಾರೆ. ಇದರಂತೆ ಮುಚ್ಚಿ ಹೋದ ಬಾವಿಯನ್ನು ಮತ್ತೆ ತೋಡಿದಾಗ ಬಾವಿಯಲ್ಲಿ ಲ್ಲಿ 300 ವರ್ಷಗಳ ಹಿಂದಿನ ದೈವದ ಮೂರ್ತಿ, ಆಭರಣ, ಕತ್ತಿ ದೊರಕಿದೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…