ಬೆಂಗಳೂರು: ಕಿರುತೆರೆಯಲ್ಲಿ ಮನೆಮಾತಾಗಿರುವ ‘ಕಮಲಿ’ ಧಾರಾವಾಹಿಯ ನಿರ್ದೇಶಕನ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.
ಕಮಲಿ ನಿರ್ಮಾಪಕ ರೋಹಿತ್ ಅವರಿಗೆ ನಿರ್ದೇಶಕ ಅರವಿಂದ್ ಕೌಶಿಕ್ ಎಂಬುವರು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ, ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಕಮಲಿ ಧಾರಾವಾಹಿಗೆ ನಿರ್ಮಾಪಕ ರೋಹಿತ್, 73 ಲಕ್ಷ ಬಂಡವಾಳ ಹೂಡಿಕೆ ಮಾಡಿಸಿದ್ದಾರಂತೆ. ಹೂಡಿಕೆಯ ನಂತರ ಲಾಭಾಂಶ ಹಾಗೂ ಬಂಡವಾಳ ವಾಪಸ್ ನೀಡಿಲ್ಲವೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೇ 28 , 2018 ರಂದು ಕಮಲಿ ಧಾರಾವಾಹಿ ಶುರುವಾಗಿತ್ತು. ಸುಮಾರು 287 ಸಂಚಿಕೆಗಳ ಕಾಲ ರೋಹಿತ್ರನ್ನು ನಿರ್ಮಾಪಕನೆಂದು ತೋರಿಸಲಾಗಿತ್ತು. ನಂತರ ಧಾರವಾಹಿಯ ಟೈಟಲ್ ಕಾರ್ಡ್ನಿಂದ ರೋಹಿತ್ ಹೆಸರನ್ನು ಧಾರಾವಾಹಿ ತಂಡ ತೆಗೆದಿದೆ. ಈ ಮಧ್ಯೆ ನಿರ್ದೇಶಕ ಕೌಶಿಕ್, ತನ್ನ ಪತ್ನಿ ಶಿಲ್ಪಾ ಹಾಗೂ ನವೀನ್ ಸಾಗರ್ ಹೆಸರಿನಲ್ಲಿ ಸತ್ವ ಮೀಡಿಯಾ ಎಂದು ಅಗ್ರಿಮೆಂಟ್ ಮಾಡಿಕೊಂಡು ಲಾಭ ಪಡೆದಿದ್ದಾರೆ. ಧಾರವಾಹಿಗೆ 73 ಲಕ್ಷ ರೂ. ಹಣ ಹೂಡಿಕೆ ಮಾಡಿದ ನನ್ನ ಗಮನಕ್ಕೆ ತರದೇ ವಂಚನೆ ಮಾಡಿದ್ದಾರೆ ಎಂದು ರೋಹಿತ್ ಆರೋಪಿಸಿದ್ದಾರೆ.
ಸದ್ಯ ಕಮಲಿ ಧಾರಾವಾಹಿ 500 ಸಂಚಿಕೆಗಳನ್ನು ಪೂರೈಸಿದೆ. ಅಸಲಿಗೆ ಧಾರಾವಾಹಿ ನಿರ್ಮಾಣಕ್ಕೆ ಲಕ್ಷಗಟ್ಟಲೇ ಹಣ ಹೂಡಿಕೆ ಮಾಡಿದ್ದು ನಾನು. ಆದರೆ, ಲಾಭಾಂಶ ಹಾಗೂ ಹೂಡಿಕೆ ಮಾಡಿದ ಹಣ ವಾಪಸ್ ನೀಡದೇ ವಂಚಿಸುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತರಿಗೆ ರೋಹಿತ್ ದೂರು ದಾಖಲಿಸಿದ್ದಾರೆ
ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ :…
ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…
ಉಡುಪಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…
ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ…