Featured

ಕುಂದಾಪುರ: ಈ ಬಾರಿ ಚುನಾವಣೆಯಲ್ಲಿ ನೂರಕ್ಕೆ ನೂರು ಗೆಲ್ಲುತ್ತೇನೆ ,  ಗೆದ್ದು ಮೋದಿ ಕೈ ಬಲ ಪಡಿಸುತ್ತೇನೆ :  ಈಶ್ವರಪ್ಪ – Vishwanews24

ಅಪ್ಪ ಮಕ್ಕಳ ಹಿಡಿತದಲ್ಲಿ ಬಿಜೆಪಿ ಇದೆ ಇದರ ವಿರುದ್ಧ ಹೋರಾಟ ಮಾಡಲು ಚುನಾವಣೆಗೆ ಸ್ಪರ್ಧೆ  ಮಾಡುತ್ತಿದ್ದೇನೆ : ಈಶ್ವರಪ್ಪ ಅಸಮಧಾನ

ಕುಂದಾಪುರ:  ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ ಕ್ಷೇತ್ರದ ಎಲ್ಲಾ ಕಡೆ ಪ್ರವಾಸ ಮಾಡಿ ಪ್ರಚಾರ ಮಾಡುತ್ತಿದ್ದೇನೆ ಶ್ರೀ ಸಾಮಾನ್ಯ ನನಗೆ ಬೆಂಬಲವಾಗಿ ನಿಂತಿರುವುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಜೆಡಿಎಸ್ ಪಕ್ಷದ ಕಾರ್ಯಕರ್ತರು ಬೆಂಬಲ ಕೊಡುವುದಾಗಿ ತೀರ್ಮಾನಿಸಿದಾಗ ಅವರ ಪಕ್ಷದವರು ಪ್ರಶ್ನೆ ಮಾಡಿದ್ದಾರೆ. ನಾವು ಈಶ್ವರಪ್ಪ ಪರವಾಗಿ ನಿಲ್ಲುತ್ತೇವೆ ಎಂದು ತಿಳಿಸಿದ್ದಾರೆ. ಈ ಚುನಾವಣೆಯಲ್ಲಿ ಗೆದ್ದು ಮೋದಿ ಕೈ ಬಲಪಡಿಸುತ್ತೇನೆ ಎಂದು ಸುದ್ದಿಗೋಷ್ಟಿಯಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದ ಈಶ್ವರಪ್ಪ ಹೇಳಿದ್ದಾರೆ.

ಕುಂದಾಪುರದಲ್ಲಿ ಮಾತನಾಡಿದ ಅವರು, “ರಾಜ್ಯದ ಹಿಂದುತ್ವದ ಹೋರಾಟಗಾರರು ಹಿರಿಯರು ನನ್ನ ಜೊತೆ ಇರುವುದಾಗಿ ಹೇಳಿ ಆಶೀರ್ವಾದ ಮಾಡಿದ್ದಾರೆ. ಎಲ್ಲಾ ನೊಂದ ಕಾರ್ಯಕರ್ತರು ನನಗೆ ಬೆಂಬಲವಾಗಿದ್ದಾರೆ ಇಷ್ಟೆಲ್ಲಾ ಬೆಂಬಲ ಪಡೆದಿರುವ ನಾನು ಈ ಬಾರಿ ಚುನಾವಣೆಯಲ್ಲಿ ನೂರಕ್ಕೆ ನೂರು ಗೆಲ್ಲುತ್ತೇನೆ. ರಾಜ್ಯದಲ್ಲಿ ಹಿಂದುತ್ವದ ಹೋರಾಟಗಾರರಾದ ಸಿ.ಟಿ.ರವಿ, ಪ್ರತಾಪ್ ಸಿಂಹ, ಬಸವನ ಗೌಡ ಪಾಟೀಲ್ ಯತ್ನಾಳ್ ರನ್ನು ಮೂಲೆಗೆ ಸೇರಿಸಲಾಗಿದೆ ಇದರ ಜೊತೆಗೆ ಕಾರ್ಯಕರ್ತರು ನೊಂದಿದ್ದಾರೆ ಎಲ್ಲಾ ಅಂಶಗಳನ್ನು ಅಮಿತ್ ಶಾ ಅವರಿಗೆ ಫೋನ್ ಮೂಲಕ ತಿಳಿಸಿದೆ ಅವರು ದೆಹಲಿಗೆ ಮಾತನಾಡಲು ಕರೆದರು ನಾನು ಹಿರಿಯರ ಮಾತಿಗೆ ಗೌರವ ಕೊಟ್ಟು ಹೋದೆ. ಭೇಟಿಯಾಗದೆ ಇರವುದಕ್ಕೆ ಕಾರಣ ನನ್ನ ಮೇಲಿನ ಅಸಮಾಧಾನವಲ್ಲ ಬಹುಶಃ ಮೋದಿ ಅಮಿತ್ ಶಾ ಚರ್ಚಿಸಿ ಈಶ್ವರಪ್ಪ ಚುನಾವಣೆಯಲ್ಲಿ ನಿಂತು ಗೆದ್ದು ಬರಲಿ ಎಂದು ತೀರ್ಮಾನಿಸಿರಬಹುದು ಎಂಬುದು ನನ್ನ ಅಭಿಪ್ರಾಯ” ಎಂದು ಹೇಳಿದರು.

“ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆರಂಭಿಸಿದಾಗ ಯಡಿಯೂರಪ್ಪ ದೆಹಲಿಗೆ ತೆರಳಿ ಅಮಿತ್ ಶಾ ಬಳಿ ದೂರು ನೀಡಿದರು. ನನಗೆ ದೆಹಲಿಗೆ ಕರೆಸಿದರು ನಾನು ಹೋಗಿದ್ದೆ ಅಲ್ಲಿ ಮೂರು ಗಂಟೆಗಳ ಕಾಲ ಚರ್ಚೆ ನಡೆಯಿತು‌‌ ನಾನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಲ್ಲಿ ಹಿಂದುಳಿದ ವರ್ಗದವರು ಇದ್ದಾರೆ ನಿಮಗೆ ಹಿಂದುಳಿದ ವರ್ಗದವರು ಬೇಡವಾ ಎಂದು ಪ್ರಶ್ನೆ ಮಾಡಿದೆ ಯಡಿಯೂರಪ್ಪ ಯಾವುದೇ ಕಾರಣಕ್ಕೂ ಒಪ್ಪಲಿಲ್ಲ ಅಮಿತ್ ಶಾ ನಿಲ್ಲಿಸಲು ಸೂಚಿಸಿದರು. ನಾನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲಿಸಿದೆ. ಕಳೆದ ಚುನಾವಣೆಯಲ್ಲಿ ಚುನಾವಣೆ ಯಿಂದ ಹಿಂದೆ ಸರಿಯಲು ಹೇಳಿದರು ತಕ್ಷಣ ಕೇಂದ್ರದವರಿಗೆ ಪತ್ರ ಬರೆದು ಹಿಂದೆ ಸರಿದೆ. ಕಾಂತೇಶ್ ಗೆ ಹಾವೇರಿಯಲ್ಲಿ ಟಿಕೆಟ್ ಕೊಡುವುದಾಗಿ ಹೇಳಿ ನಂಬಿಸಿ ಮೋಸ ಮಾಡಿದರು ಅಪ್ಪ ಮಕ್ಕಳ ಹಿಡಿತದಲ್ಲಿ ಬಿಜೆಪಿ ಇದೆ ಇದರ ವಿರುದ್ಧ ಹೋರಾಟ ಮಾಡಲು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ” ಎಂದು ತಮ್ಮ ಅಸಮಧಾನ ವ್ಯಕ್ತಪಡಿಸಿದರು.

“ಮೋದಿ ಫೋಟೊ ಯಾರಪ್ಪಂದು ರಾಘವೇಂದ್ರ ಒಬ್ಬನಿಗೆ ಮೋದಿ ಸೀಮಿತ ಆಗಿದ್ದಾರೆಯೇ? ಕೋರ್ಟ್ ಗೆ ಹೋಗಲಿ ನೋಡೋಣ ಏನು ತೀರ್ಮಾನ ಆಗುತ್ತದೆ ಎಂದು ನೋಡೋಣ..ಯಡಿಯೂರಪ್ಪ ಸುಳ್ಳು ಹೇಳಿ ಮೋಸ ಮಾಡಿದ್ದಾರೆ. ಹಿಂದುತ್ವದ ಹೋರಾಟಗಾರರು ಎಲ್ಲಿದ್ದಾರೋ ಅದೆಲ್ಲಾ ನನ್ನ ಕರ್ಮಭೂಮಿ. ಹಿಂದುತ್ವದಕ್ಕಾಗಿ ನೊಂದ ಕಾರ್ಯಕರ್ತರಿಗಾಗಿ ಕುಟುಂಬ ರಾಜಕಾರಣ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇನೆ ಗೆದ್ದೇ ಗೆಲ್ಲುತ್ತೇನೆ.ಸಿದ್ದಾಂತ ಇದ್ದ ಪಕ್ಷ ಒಂದು ಕುಟುಂಬದ ಹಿಡಿತಕ್ಕೆ ಹೋಗುತ್ತಿದೆ. ಸಿದ್ದಾಂತದ ಉಳಿವಿಗಾಗಿ ಕುಟುಂಬದ ಕೈಯಲ್ಲಿ ಇರುವ ಪಕ್ಷ ಶುದ್ಧ ಮಾಡಲು ಸ್ಪರ್ಧೆ ಮಾಡುತ್ತಿದ್ದೇನೆ. ಕೆಜೆಪಿ ಪಕ್ಷ ಕಟ್ಟಿದಾಗ ನಾನು ಯಡಿಯೂರಪ್ಪರವರಿಗೆ ಸಲಹೆ ನೀಡಿದೆ ಬೇರೆ ಪಕ್ಷ ಕಟ್ಟಬೇಡಿ ಎಂದು ನನಗೆ ಯಾರ ಸಲಹೆ ಬೇಡ ಎಂದು ಕೆಜೆಪಿ ಕಟ್ಟಿದರು ಎಷ್ಟು ಸೀಟು ಗೆದ್ದರು. ನಮ್ಮ ಕೈ ಕಾಲು ಹಿಡಿದು ಮತ್ತೆ ಪಕ್ಷಕ್ಕೆ ಬಂದರು. ಮುಂದೆ ಹೊಸ ಯಡಿಯೂರಪ್ಪ ನೋಡುತ್ತೀರಿ ಎಂದು ಹೇಳಿದ್ದರು ಇವರೆನಾ ಹೊಸ ಯಡಿಯೂರಪ್ಪ. ಕೇಂದ್ರದವರಿಗೆ ಮಂಕು ಬೂದಿ ಎರಚಲಾಗಿದೆ ಇದನ್ನ ಸರಿ ಪಡಿಸಲು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಬ್ರಹ್ಮ ಬಂದರೂ ಸ್ಪರ್ಧೆ ಯಿಂದ ಹಿಂದೆ ಸರಿಯಲ್ಲ ಸ್ಪರ್ಧೆ ಮಾಡಿ ಗೆದ್ದು ಮೋದಿ ಕೈ ಬಲ ಪಡಿಸುತ್ತೇನೆ” ಎಂದು ಹೇಳಿದರು.

Vishwa News 24

Recent Posts

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

23 hours ago

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ – vishwanews24

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…

23 hours ago

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

1 day ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

1 day ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

1 day ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

1 day ago