Featured

ಕುಂದಾಪುರ: ಉದ್ಯಮಕ್ಕೆಂದು ಮಹಿಳೆಯಿಂದ 10 ಲಕ್ಷ ರೂ.ಹಣ ಪಡೆದು ವಂಚನೆ # ಪ್ರಕರಣ ದಾಖಲು – Vishwanews24

ಕುಂದಾಪುರ: ಉದ್ಯಮಕ್ಕೆಂದು ಮಹಿಳೆಯಿಂದ 10 ಲಕ್ಷ ರೂ.ಹಣ ಪಡೆದು ವಂಚನೆ- ಪ್ರಕರಣ ದಾಖಲು

ಕುಂದಾಪುರ: ಮಹಿಳೆಯೊಬ್ಬರಿಂದ ತನ್ನ ಉದ್ಯಮಕ್ಕೆಂದು ಒಟ್ಟು 10 ಲಕ್ಷ ರೂ.ಹಣ ಪಡೆದ ವ್ಯಕ್ತಿಯೊಬ್ಬ ಮೂರು ವರ್ಷ ಕಳೆದರೂ ಹಣ ಹಿಂದಿರುಗಿಸದೇ, ಕೇಳಿದಾಗ ಜೀವಬೆದರಿಕೆ ಒಡ್ಡಿದ ಕುರಿತು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆಗೊಳಗಾದ ಮಹಿಳೆ ಬೇಬಿ ಮೊಗವೀರ ಆಗಿದ್ದು ಪ್ರಕಾಶ್ ಎಚ್ ಎಂಬಾತ ವಂಚನೆ ಮಾಡಿರುವುದಾಗಿ ಆರೋಪಿಸಲಾಗಿದೆ.

3-4ವರ್ಷಗಳ ಹಿಂದೆ ಪರಿಚಯವಾದ ಪ್ರಕಾಶ್ ತಾನು ಕ್ಯಾಟರಿಂಗ್ ವ್ಯವಹಾರ ನಡೆಸುತಿದ್ದು ಹೊಸ ಉದ್ಯಮ ಪ್ರಾರಂಭಿಸಲು ತುರ್ತು ಹಣದ ಅಗತ್ಯವಿದೆ ಎಂದು ಬೇಬಿ ಮೊಗವೀರ ಅವರನ್ನು ನಂಬಿಸಿ 2020-21ರ ನಡುವೆ ಒಟ್ಟು 10 ಲಕ್ಷ ರೂ. ಹಣವನ್ನು ಪಡೆದುಕೊಂಡಿದ್ದನು. ತನಗೆ ಲೋನ್ ಸಿಕ್ಕ ನಂತರ ಹಣ ಹಿಂದಿರುಗಿಸುವುದಾಗಿ ಆಕೆಗೆ ಭರವಸೆ ನೀಡಿದ್ದ ಇದಕ್ಕಾಗಿ ಬೇಬಿ ಮೊಗವೀರ ಅವರು ತನ್ನ ಚಿನ್ನವನ್ನು ಕುಂದಾಪುರದ ಫೆಡರಲ್ ಬ್ಯಾಂಕ್ ಶಾಖೆಯಲ್ಲಿ ಅಡವಿಟ್ಟು ಒಟ್ಟು ಐದು ಕಂತುಗಳಲ್ಲಿ ಒಟ್ಟು 10 ಲಕ್ಷ ರೂ.ಗಳನ್ನು ಆರೋಪಿಗೆ ನೀಡಿದ್ದರು.

3 ವರ್ಷವಾದರೂ ಸಾಲ ಕಟ್ಟದಿದ್ದಾಗ ಚಿನ್ನವನ್ನು ಬ್ಯಾಂಕಿನವರು ಮುಟ್ಟುಗೋಲು ಹಾಕಿಕೊಂಡಿದ್ದರು. ತನ್ನ ಹಣ ಹಿಂದಿರುಗಿಸುವಂತೆ ಪದೇ ಪದೇ ಕೇಳಿದರೂ ಸುಳ್ಳು ಹೇಳುತಿದ್ದ ಪ್ರಕಾಶ್ ಕೊನೆಗೆ ನಾನು ಹಣ ಕೊಡುವುದಿಲ್ಲ ನಿನ್ನನ್ನು ಹಾಗೂ ಮಗನಿಗೆ ಗತಿ ಕಾಣಿಸುವುದಾಗಿ ಬೆದರಿಕೆ ಒಡ್ಡಿದ ಎಂದು ಬೇಬಿ ಮೊಗವೀರ ಕುಂದಾಪುರ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತಿದ್ದಾರೆ.

Vishwa News 24

Recent Posts

ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ NCERT ಸ್ಪಷ್ಟನೆ – vishwanews24

ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ NCERT ಸ್ಪಷ್ಟನೆ ನವದೆಹಲಿ: 6ನೇ ತರಗತಿಯ ಕನ್ನಡ ಪಠ್ಯಪುಸ್ತಕ ‘ಕೃಷ್ಣ’ ಕುರಿತು ಎದ್ದಿರುವ ವಿವಾದಕ್ಕೆ NCERT(ರಾಷ್ಟ್ರೀಯ…

9 minutes ago

ಮುಲ್ಕಿ : ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ ; 4 ಕೆ.ಜಿ ಗಾಂಜಾ ವಶ – vishwanews24

ಮುಲ್ಕಿ : ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ ; 4 ಕೆ.ಜಿ ಗಾಂಜಾ ವಶ ಮುಲ್ಕಿ:…

20 minutes ago

ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ – vishwanews24

ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ ಬೆಂಗಳೂರು: 6ನೇ ತರಗತಿಗಾಗಿ ಎನ್‌ಸಿಇಆರ್‌ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ…

27 minutes ago

ಉಡುಪಿ: ಎಸ್.ಟಿ ಮೋರ್ಚಾದ ನೂತನ ಪದಾಧಿಕಾರಿಗಳಿಗೆ ನಿಯುಕ್ತಿ ಪತ್ರ ವಿತರಣೆ – vishwanews24

ಉಡುಪಿ: ಎಸ್.ಟಿ ಮೋರ್ಚಾದ ನೂತನ ಪದಾಧಿಕಾರಿಗಳಿಗೆ ನಿಯುಕ್ತಿ ಪತ್ರ ವಿತರಣೆ ಉಡುಪಿ: ಭಾರತೀಯ ಜನತಾ ಪಾರ್ಟಿಯ ಎಸ್.ಟಿ ಮೋರ್ಚಾ ಜಿಲ್ಲಾ…

35 minutes ago

ಮೊದಲ ಬಾರಿಗೆ NCERT 9ನೇ ಕ್ಲಾಸ್‌ನಲ್ಲಿ ತುರ್ತು ಪರಿಸ್ಥಿತಿ ಪಠ್ಯ ಅಧಿಕೃತವಾಗಿ ಸೇರ್ಪಡೆ – vishwanews24

ದೇಶದ ಶೈಕ್ಷಣಿಕ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪಠ್ಯ ಪರಿಷ್ಕರಣೆ.. ಮೊದಲ ಬಾರಿಗೆ NCERT 9ನೇ ಕ್ಲಾಸ್‌ನಲ್ಲಿ ತುರ್ತು ಪರಿಸ್ಥಿತಿ ಪಠ್ಯ…

4 hours ago

ಮಂಗಳೂರು: ಜೂ.29ರಂದು ವಿಶೇಷ ಸಹಕಾರ ಸಪ್ತಾಹ ಉದ್ಘಾಟನೆ – vishwanews24

ಮಂಗಳೂರು:  ಜೂ.29ರಿಂದ ಜು.6ರವರೆಗೆ ದೇಶದಾದ್ಯಂತ ವಿಶೇಷ ಸಹಕಾರ ಸಪ್ತಾಹ ಆಚರಣೆ ಮಂಗಳೂರು: ಸುಮಾರು 122 ವರ್ಷಗಳ ಇತಿಹಾಸವಿರುವ ರಾಷ್ಟ್ರದ ಸಹಕಾರ…

4 hours ago