Featured

ಕುಂದಾಪುರ : ಕಾಲೇಜು ಗೇಟ್ ಮುಚ್ಚಿ ವಿದ್ಯಾರ್ಥಿನಿಯರನ್ನು ಒಳಬರದಂತೆ ತಡೆದಿರುವುದು ತೀವ್ರ ಖಂಡನೀಯ : ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ  – Vishwanews24

ಮಾನವ ಹಕ್ಕು ಆಯೋಗ’ ಮಧ್ಯೆ ಪ್ರವೇಶಿಸಿ ವಿದ್ಯಾರ್ಥಿನಿಯರಿಗೆ ನ್ಯಾಯ ಕೊಡಿಸಿ ಅವರ ಶೈಕ್ಷಣಿಕ ಬದುಕು ಹಾಗೂ ಅವರ ಭವಿಷ್ಯ ಹಾಳಾಗದಂತೆ ನೋಡಿಕೊಳ್ಳಬೇಕು..

ವಿದ್ಯಾರ್ಥಿನಿಯರ ಶೈಕ್ಷಣಿಕ ಬದುಕಿಗೆ ವಿದ್ಯೆ ನೀಡಬೇಕಾದವರೆ ಅವರ ಭವಿಷ್ಯಕ್ಕೆ ಅಡ್ಡಗಾಲು ಹಾಕಬಾರದು..

ಕುಂದಾಪುರ: ಸರಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಙ ಇವರು ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಶಿರವಸ್ತ್ರ ಧರಿಸಿ ಬಂದರೆ ಕಾಲೇಜು ಒಳಗಡೆ ಬಿಡುವುದಿಲ್ಲ ಎಂದು ಹೇಳಿದ್ದಲ್ಲದೆ ಸ್ವತಃ ಗೇಟನ್ನು ಮುಚ್ಚಿ, ವಿದ್ಯಾರ್ಥಿನಿಯರನ್ನು ಒಳಬರದಂತೆ ತಡೆದಿರುವುದನ್ನು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಅಧ್ಯಕ್ಷರಾದ ಇಬ್ರಾಹೀಂ ಸಾಹೇಬ್ ಕೋಟ ಹೇಳಿದ್ದಾರೆ.

ಈ ಮುಸ್ಲಿಂ ವಿದ್ಯಾರ್ಥಿನಿಯರು ಶೈಕ್ಷಣಿಕ ವರ್ಷದ ಆರಂಭದಿಂದಲೂ ಮತ್ತು ಈ ಹಿಂದೆ ಇದೇ ಕಾಲೇಜಿನಿಂದ ಶಿಕ್ಷಣ ಪೂರ್ತಿಗೊಳಿಸಿದ ಮುಸ್ಲಿಮ್ ವಿದ್ಯಾರ್ಥಿನಿಯರು ಕೂಡಾ ಹಲವಾರು ವರ್ಷಗಳಿಂದ ನಿರಂತರವಾಗಿ ಸದರಿ ಕಾಲೇಜಿಗೆ ಶಿರವಸ್ತ್ರ ಧರಿಸಿಯೇ ಬಂದು ತಮ್ಮ ಒಂದು ಹಂತದ ಶಿಕ್ಷಣ ಪೂರ್ತಿಗೊಳಿಸಿ ತಮ್ಮ ಮುಂದಿನ ಜೀವನ ನಡೆಸುತ್ತಿದ್ದಾರೆ. ಈಗ ಏಕಾಏಕಿ ನಿನ್ನೆಯಿಂದ(03-02-2022) ಶಿರವಸ್ತ್ರ ಧರಿಸಿ ಬಂದಲ್ಲಿ ಕಾಲೇಜಿನ ಒಳಗಡೆ ಪ್ರವೇಶವಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಹೇಳುತ್ತಿದ್ದಾರೆ.

ಇದನ್ನೂ ಓದಿ :

ಕಾಲೇಜಿನ ಪ್ರಾಂಶುಪಾಲರ ಸದರಿ ಹೇಳಿಕೆ ಮತ್ತು ವಿದ್ಯಾರ್ಥಿನಿಯರನ್ನು ಶಿಕ್ಷಣ ಪಡೆಯಲು ತರಗತಿಗೆ ಬರದಂತೆ ತಡೆಹಿಡಿಯುತ್ತಿರುದರ ಹಿಂದೆ ಯಾರ ಹುನ್ನಾರವಿದೆ ? ಶಿಕ್ಷಣ ಪಡೆಯುವಲ್ಲಿ ಬರಬಹುದಾದ ಅಡೆತಡೆಗಳನ್ನು ನಿವಾರಿಸಿ ವಿದ್ಯೆ ನೀಡಬೇಕಾದ ಪ್ರಾಂಶುಪಾಲರೇ ವಿದ್ಯಾರ್ಥಿನಿಯರಿಗೆ ನ್ಯಾಯಯುತವಾಗಿ ಸಿಗಬೇಕಾದ ವಿದ್ಯೆಯ ಬಾಗಿಲನ್ನು ಏಕೆ ಮುಚ್ಚುತ್ತಿದ್ದಾರೆ ? ಮಾನ್ಯ ಪ್ರಾಂಶುಪಾಲರು ತಮ್ಮ ಕರ್ತವ್ಯ ನಿಷ್ಠೆಯನ್ನು ಏಕೆ ಮರೆತಿದ್ದಾರೆ ? ಇದು ಬೇಜವಾಬ್ದಾರಿತನದ ನಡವಳಿಕೆಯಲ್ಲವೆ ? ವಿದ್ಯಾರ್ಥಿಗಳ ಏಳಿಗೆ ಮತ್ತವರ ಯಶಸ್ಸನ್ನು ಬಯಸುವ ಒಬ್ಬ ನಿಜವಾದ ಗುರು ವಿದ್ಯೆಗಾಗಿ ಪರಿತಪಿಸುವ ತನ್ನ ವಿದ್ಯಾರ್ಥಿಗಳನ್ನು ವಿದ್ಯಾಮಂದಿರದ ಒಳಗಡೆ ಪ್ರವೇಶಿಸಲು ಬಿಡದೆ ಹೀಗೆ ಗಂಟೆಗಟ್ಟಲೆ ಬಿಸಿಲಲ್ಲಿ ಕೂರಿಸಿ ಕಾಯಿಸಬಲ್ಲನೆ ? ಇದು ಅಮಾನವೀಯ ನಡೆ ಅಲ್ಲವೇ? ಇದು ದೇಶದ ಸಂವಿಧಾನದ ಮೂಲತತ್ವಗಳ ಉಲ್ಲಂಘನೆ ಮತ್ತು ಶಿಕ್ಷಣದ ಹಕ್ಕಿನ ನಿರಾಕರಣೆಯಾಗಿದೆ. ಈ ಕುರಿತು ‘ಮಾನವ ಹಕ್ಕು ಆಯೋಗ’ ಮಧ್ಯೆ ಪ್ರವೇಶಿಸಿ ವಿದ್ಯಾರ್ಥಿನಿಯರಿಗೆ ನ್ಯಾಯ ಕೊಡಿಸಿ ಅವರ ಶೈಕ್ಷಣಿಕ ಬದುಕು ಹಾಗೂ ಅವರ ಭವಿಷ್ಯ ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಮುಸ್ಲಿಂ ಒಕ್ಕೂಟ ಒತ್ತಾಯಿಸಿದೆ.

ಇದನ್ನೂ ಓದಿ :

ಈ ಮುಂಚೆ ಹೇಗೆ ಮುಸ್ಲಿಂ ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸಿ ತರಗತಿಗೆ ಹೇಗೆ ಹಾಜರಾಗುತ್ತಿದ್ದರೋ ಅದೇ ರೀತಿಯಲ್ಲಿ ಇನ್ನು ಮುಂದೆಯೂ ತರಗತಿಗೆ ಹಾಜರಾಗಲು ಅವಕಾಶ ಒದಗಿಸಬೇಕು. ವಿದ್ಯಾರ್ಥಿನಿಯರ ಶೈಕ್ಷಣಿಕ ಬದುಕಿಗೆ ವಿದ್ಯೆ ನೀಡಬೇಕಾದವರೆ ಅವರ ಭವಿಷ್ಯಕ್ಕೆ ಅಡ್ಡಗಾಲು ಹಾಕಬಾರದು ಎಂದು ಒಕ್ಕೂಟದ ಅಧ್ಯಕ್ಷರು ಕಾಲೇಜು ಆಡಳಿತ ಮಂಡಳಿ ಮತ್ತು ಕಾಲೇಜಿನ ಪ್ರಾಂಶುಪಾಲರನ್ನು ಆಗ್ರಹಿಸಿದ್ದಾರೆ.

ಇದನ್ನೂ ಓದಿ :

Vishwa News 24

Recent Posts

ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಪ್ರೇತ ಮದುವೆ : ಸತ್ತು 25 ವರ್ಷ ಆದ್ಮೇಲೆ ಒಂದಾದ ಜೋಡಿ – vishwanews24

ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಪ್ರೇತ ಮದುವೆ : ಸತ್ತು 25 ವರ್ಷ ಆದ್ಮೇಲೆ ಒಂದಾದ ಜೋಡಿ ತುಳುನಾಡಿನ ಸಾಂಪ್ರದಾಯಿಕ…

13 hours ago

ಮಂಗಳೂರಿಗೆ ಆಗಮಿಸಿದ ಬಾಲಿವುಡ್ ನಟ ಶಾರುಖ್ ಖಾನ್ – vishwanews24

ಮಂಗಳೂರಿಗೆ ಆಗಮಿಸಿದ ಬಾಲಿವುಡ್ ನಟ ಶಾರುಖ್ ಖಾನ್ ಮಂಗಳೂರು: ನಗರದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಾಲಿವುಡ್ ನಟ ಶಾರುಖ್ ಖಾನ್…

14 hours ago

ರಾಜ್ಯದ 13 ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಉಸ್ತುವಾರಿಯಾಗಿ ಯು.ಟಿ ಖಾದರ್ – vishwanews24

ರಾಜ್ಯದ 13 ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ.. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಉಸ್ತುವಾರಿಯಾಗಿ…

14 hours ago

ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ NCERT ಸ್ಪಷ್ಟನೆ – vishwanews24

ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ NCERT ಸ್ಪಷ್ಟನೆ ನವದೆಹಲಿ: 6ನೇ ತರಗತಿಯ ಕನ್ನಡ ಪಠ್ಯಪುಸ್ತಕ ‘ಕೃಷ್ಣ’ ಕುರಿತು ಎದ್ದಿರುವ ವಿವಾದಕ್ಕೆ NCERT(ರಾಷ್ಟ್ರೀಯ…

14 hours ago

ಮುಲ್ಕಿ : ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ ; 4 ಕೆ.ಜಿ ಗಾಂಜಾ ವಶ – vishwanews24

ಮುಲ್ಕಿ : ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ ; 4 ಕೆ.ಜಿ ಗಾಂಜಾ ವಶ ಮುಲ್ಕಿ:…

14 hours ago

ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ – vishwanews24

ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ ಬೆಂಗಳೂರು: 6ನೇ ತರಗತಿಗಾಗಿ ಎನ್‌ಸಿಇಆರ್‌ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ…

14 hours ago