Featured

ಕುಂದಾಪುರ ಕೋಡಿ ಕಡಲ ಕಿನಾರೆಯಲ್ಲಿ ರಾಶಿ ರಾಶಿ ಬೂತಾಯಿ ಮೀನು ; ಸ್ಥಳೀಯರಿಗೆ ಮೀನೂಟದ ಹಬ್ಬ

ಉಡುಪಿ, : ಉಡುಪಿಯಲ್ಲಿ ಈ ಬಾರಿ ಮೀನುಗಾರರು ಬಂಪರ್ ಲಾಟರಿ ಹೊಡೆದಿದ್ದಾರೆ. ಎಲ್ಲಿ ನೋಡಿದರೂ ಬರಿ ಮೀನಿನ ರಾಶಿಯೇ ಈ ಬಾರಿ ಉಡುಪಿ ಮೀನುಗಾರರಿಗೆ ದೊರೆಯುತ್ತಿದ್ದು, ಮೀನಿನ ಸುಗ್ಗಿಯಾಗಿದೆ.

ಉಡುಪಿ ಜಿಲ್ಲೆ ಕುಂದಾಪುರದ ಕೋಡಿ ಬೀಚಲ್ಲಿ ಈ ಘಟನೆ ನಡೆದಿದೆ. ಕೋಡಿಯ ಮೀನುಗಾರರು ಅರಬ್ಬೀ ಸಮುದ್ರದ ದಡದಲ್ಲಿ ಕೈರಂಪಣಿ ಎಂಬ ಬಲೆ ಹಾಕಿದ್ದರು. ಎಲ್ಲಾ ಮೀನುಗಾರರು ಸಾಲಾಗಿ ನಿಂತು ದಡದ ಕಡೆ ಬಲೆ ಎಳೆಯುವಾಗ ನಿರೀಕ್ಷೆ ಮೀರಿ ನೂರು ಪಟ್ಟು ಹೆಚ್ಚು ಮೀನು ಬಲೆಗೆ ಬಿದ್ದಿದೆ.

ಕಣ್ಣು ಹಾಯಿಸಿದಲ್ಲೆಲ್ಲಾ ಬಲೆಯ ವ್ಯಾಪ್ತಿಯಿಂದ ಹಾರುವ ಮೀನು ಕಾಣುತ್ತಿದ್ದು, ವೀಡಿಯೋ ಬಹಳ ಕುತೂಹಲ ಹುಟ್ಟಿಸುತ್ತದೆ. ಸಮುದ್ರದ ಮಧ್ಯೆಯಲ್ಲಿ ಮೀನಿನ ಬುಗ್ಗೆ ಕಾಣಿಸೋದು ಸಾಮಾನ್ಯ, ಆದ್ರೆ ಕಡಲ ಬದಿಯಲ್ಲಿ ಇಷ್ಟೊಂದು ಗಾತ್ರದಲ್ಲಿ ಮೀನು ಸಿಕ್ಕಿದ್ದು ಮೀನುಗಾರರಿಗೆ ಆಶ್ಚರ್ಯ ತಂದಿದೆ.

ಸಮುದ್ರ ತೀರದಲ್ಲಿ ಮೀನುಗಾರರು ಎರಡು ನಾಡದೋಣಿಗಳಿಗೆ ಜೋಡು ಬಲೆ ಕಟ್ಟಿ ಮೀನುಗಾರಿಕೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಸಂಚಾರ ಹೊರಟ ಮೀನಿನ ಬುಗ್ಗೆ ನಾಡದೋಣಿಗಳ ಬಲೆಗೆ ಸಿಲುಕಿದೆ. ಇಡೀ ದೋಣಿಯ ಸುತ್ತಲೂ ರಾಶಿ ರಾಶಿ ಮೀನು ಸೆರೆ ಸಿಕ್ಕಿದ ವೀಡಿಯೋ ಲಭ್ಯವಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಶಿ ರಾಶಿ ಮೀನುಗಳು ದಡಕ್ಕೆ ಅಪ್ಪಳಿಸಿದೆ. ಕರಾವಳಿ ಫ್ರೆಂಡ್ಸ್ ಬಲೆಗೆ ಮೂರು ಸಾವಿರ ಕೆಜಿಯಷ್ಟು ಬೂತಾಯಿ ಸಿಕ್ಕಿದೆ. ಮೀನುಗಳು ಒದ್ದಾಡುವ ರಭಸಕ್ಕೆ ಬಲೆಯೇ ಹರಿದು 10 ಸಾವಿರ ಕೆಜಿಯಷ್ಟು ಮೀನು ಮತ್ತೆ ಸಮುದ್ರ ಪಾಲಾಗಿದೆ ಅಂತ ಸ್ಥಳೀಯರು ಹೇಳಿದ್ದಾರೆ.

ಕೈರಂಪಣಿ ಬಲೆಯಲ್ಲಿ 16 ಮಂದಿ ಮೊದಲು ಬಲೆ ಬೀಸಿದ್ದು, ಮೀನಿನ ರಾಶಿಯನ್ನು ಕಂಡು ಸ್ಥಳೀಯ 50ಕ್ಕು ಹೆಚ್ಚು ಯುವಕರನ್ನು ಕರೆಸಲಾಯ್ತು. ಸ್ಥಳೀಯರಂತೂ ಬಲೆಯಿಂದ ಜಿಗಿದು ದಡ ಸೇರಿದ್ದ ಮೀನನ್ನು ಹಿಡಿಯಲು ಬೀಚ್ ಬದಿ ಮುಗಿಬಿದ್ದರು.

ಮೀನುಗಾರರ ಪ್ರಕಾರ ಇದೆ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಬೂತಾಯಿ ಮೀನುಗಳು ದಡಕ್ಕೆ ಬಂದಿದೆ. ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವ ದೋಣಿಗಾರಿಕೆ, ದೋಣಿಗಳ ಎಂಜಿನ್ ಶಬ್ದಕ್ಕೆ ಹೆದರಿ ಮೀನುಗಳು ಗಂಪಾಗಿ ಹೋಗುತ್ತಿದ್ದು, ಅದೇ ವೇಳೆ ಅಲೆಗಳ ಅಬ್ಬರದಿಂದ ದಡದತ್ತ ತೇಲಿಬಂದಿರಬಹುದು ಎನ್ನುತ್ತಾರೆ ಮೀನುಗಾರರು.

 

vishwanews24
vishwanews24

vishwanews24

Vishwa News 24

Recent Posts

ಎಸ್‌ಟಿಪಿಯನ್ನು ಮೂಳೂರಿನಿಂದ ಬೆಳಪು ಪ್ರದೇಶಕ್ಕೆ ಸ್ಥಳಾಂತರ ಮಾಡಿದರೆ ಕಾಪು ಪುರಸಭೆಗೆ ಸಂಪೂರ್ಣ ಸ್ವಾಗತ : ದೇವಿಪ್ರಸಾದ್ ಶೆಟ್ಟಿ – vishwanews24

ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…

1 day ago

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ – vishwanews24

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…

1 day ago

ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿ ಇತಿಹಾಸವನ್ನು ದೇಶ ಮರೆತಿಲ್ಲ : ಬಿ.ಕೆ.ಹರಿಪ್ರಸಾದ್ – vishwanews24

ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…

1 day ago

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ – vishwanews24

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…

1 day ago

ವಿವಾಹಿತ ಮಹಿಳೆ  ಜತೆ ಲಿವ್ ಇನ್ ರಿಲೇಶನ್‌ ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  – vishwanews24

ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…

1 day ago

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ – vishwanews24

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…

2 days ago