Featured

ಕುಂದಾಪುರ : ಗಿಫ್ಟ್‌ ಹೆಸರಿನಲ್ಲಿ ಮಹಿಳೆಗೆ ಆನ್‌ಲೈನ್ ಮೂಲಕ ಲಕ್ಷಾಂತರ ರೂ. ವಂಚನೆ ; ಪ್ರಕರಣ ದಾಖಲು – vishwanews24

ಕುಂದಾಪುರ : ಗಿಫ್ಟ್‌ ಹೆಸರಿನಲ್ಲಿ ಮಹಿಳೆಗೆ ಆನ್‌ಲೈನ್ ಮೂಲಕ ಲಕ್ಷಾಂತರ ರೂ. ವಂಚನೆ – ಪ್ರಕರಣ ದಾಖಲು

ಕುಂದಾಪುರ : ಸೈಬರ್ ವಂಚಕರು ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ಆನ್‌ಲೈನ್ ಮೂಲಕ ವಂಚಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟೇಶ್ವರ ಗ್ರಾಮದ ಹೊಸ ಬಡಾಕೇರಿಯ ಅಭಿನಯ(40) ಎಂಬವರು ಫೇಸ್‌ಬುಕ್‌ಗೆ ಡೆನಿಯಲ್ ಮೈಕಲ್ ಎಂಬ ಹೆಸರಿನ ವ್ಯಕ್ತಿ ಮೇ ತಿಂಗಳಲ್ಲಿ ಸಂದೇಶ ಕಳುಹಿಸಿ, ಒಂದು ಮೊಬೈಲ್ ಹಾಗೂ ಬ್ಯಾಗ್ ಮತ್ತು 50000 ಡಾಲರ್ ನೀಡುವುದಾಗಿ ತಿಳಿಸಿದ್ದನು. ಅದು ಇಂಡಿಯನ್ ಕರೆನ್ಸಿಯಲ್ಲಿ 56 ಲಕ್ಷ ರೂ. ಆಗುವುದಾಗಿ ಹೇಳಿ ಇದನ್ನು ಗಿಫ್ಟ್ ರೂಪದಲ್ಲಿ ಮನೆಗೆ ಕಳುಹಿಸುವುದಾಗಿ ಹೇಳಿದ್ದನು.

ಈ ಗಿಫ್ಟ್ ಮನೆಗೆ ಬರಬೇಕಾದರೆ ಹಣ ಹಾಕುವಂತೆ ಆತ ತಿಳಿಸಿದ್ದು, ಅದನ್ನು ನಂಬಿದ ಅಭಿನಯ, ವಿವಿಧ ಹಂತ ಗಳಲ್ಲಿ ಒಟ್ಟು 11,92,500ರೂ. ಹಣವನ್ನು ಹಾಕಿದ್ದರು. ಆದರೆ ಸೈಬರು ವಂಚಕರು ಗಿಫ್ಟ್ ನೀಡದೆ, ಹಣವನ್ನೂ ವಾಪಾಸ್ಸು ಮಾಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.

Vishwa News 24

Recent Posts

ಮಂಗಳೂರು: ಕರ್ನಾಟಕ ಬ್ಯಾಂಕ್ ನೂತನ ಎಂಡಿ, ಸಿಇಒ ಆಗಿ ಉದಯ ಕುಮಾರ್ ಹೆಬ್ಬಾರ್ ನೇಮಕ – vishwanews24

ಮಂಗಳೂರು: ಕರ್ನಾಟಕ ಬ್ಯಾಂಕ್ ನೂತನ ಎಂಡಿ, ಸಿಇಒ ಆಗಿ ಉದಯ ಕುಮಾರ್ ಹೆಬ್ಬಾರ್ ನೇಮಕ ಮಂಗಳೂರು : ಶತಮಾನಕ್ಕೂ ಅಧಿಕ…

2 minutes ago

ಭದ್ರತಾ ಪಡೆಗಳ ಎನ್‌ಕೌಂಟ್‌ಗೆ ಲಷ್ಕರ್‌ ಉಗ್ರ ಲತೀಫ್‌ ಭಟ್‌ ಬಲಿ – vishwanews24

ಭದ್ರತಾ ಪಡೆಗಳ ಎನ್‌ಕೌಂಟ್‌ಗೆ ಲಷ್ಕರ್‌ ಉಗ್ರ ಲತೀಫ್‌ ಭಟ್‌ ಬಲಿ ಶ್ರೀನಗರ: ಕುಲ್ಗಾಮ್‌ನ ಸಿಆರ್‌ಪಿಎಫ್‌ ಚೆಕ್‌ ಪೋಸ್ಟ್‌ ಮೇಲೆ ದಾಳಿ…

23 hours ago

ಎರಡನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಮುಷ್ಕರ  – vishwanews24

ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಎರಡನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಮುಷ್ಕರ  ಬೆಂಗಳೂರು: ಮಾಸಿಕ…

23 hours ago

ಹಿಂದೆ ಕುಳಿತುಕೊಳ್ಳಲು ತಡವಾಗಿ ಬಂದಿದ್ದೇ ಕಾರಣ : ಸಿದ್ದರಾಮಯ್ಯ ಸ್ಪಷ್ಟನೆ – vishwanews24

ಹಿಂದೆ ಕುಳಿತುಕೊಳ್ಳಲು ತಡವಾಗಿ ಬಂದಿದ್ದೇ ಕಾರಣ : ಸಿದ್ದರಾಮಯ್ಯ ಸ್ಪಷ್ಟನೆ ಸೋನಿಯಾ ಗಾಂಧಿ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ 5ನೇ…

24 hours ago

ಬ್ರಹ್ಮಾವರ: ವಿದ್ಯುತ್ ತಂತಿ ಸ್ಪರ್ಶಿಸಿ ಒಣ ಹುಲ್ಲು ಸಾಗಾಟದ ಲಾರಿಗೆ ಬೆಂಕಿ ; ಚಾಲಕ ಅಪಾಯದಿಂದ ಪಾರು – vishwanews24

ಬ್ರಹ್ಮಾವರ: ವಿದ್ಯುತ್ ತಂತಿ ಸ್ಪರ್ಶಿಸಿ ಒಣ ಹುಲ್ಲು ಸಾಗಾಟದ ಲಾರಿಗೆ ಬೆಂಕಿ ; ಚಾಲಕ ಅಪಾಯದಿಂದ ಪಾರು ಬ್ರಹ್ಮಾವರ,:ಒಣ ಹುಲ್ಲು…

24 hours ago

ಮಂಗಳೂರು: ಮೊಟ್ಟೆ ಸಾಗಣೆ ವಾಹನದಲ್ಲಿ ಅಕ್ರಮ ಜಾನುವಾರು ಸಾಗಟ ; ಇಬ್ಬರು ಬಂಧನ – vishwanews24

ಮಂಗಳೂರು: ಮೊಟ್ಟೆ ಸಾಗಣೆ ವಾಹನದಲ್ಲಿ ಅಕ್ರಮ ಜಾನುವಾರು ಸಾಗಟ ; ಇಬ್ಬರು ಬಂಧನ ಮಂಗಳೂರು: ನಗರದ ಪಂಪ್‌ವೆಲ್ ಬಳಿ ಮೊಟ್ಟೆ…

2 days ago