ಕುಂದಾಪುರ : ಚಲಿಸುತ್ತಿದ್ದ ಕಾರೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಹೆಮ್ಮಾಡಿ-ಕೊಲ್ಲೂರು ರಾಜ್ಯ ಹೆದ್ದಾರಿಯ ವಂಡ್ಸೆ ಗ್ರಾಮದ ಶಾರ್ಕೆ ಕ್ರಾಸ್ ಬಳಿ ಶನಿವಾರ ನಡೆದಿದೆ.
ಬೀಜಾಡಿ ನಿವಾಸಿ ಭಾಸ್ಕರ್ ಆಚಾರ್ ಎಂಬುವರಿಗೆ ಸೇರಿದ ಕಾರು ಇದಾಗಿದೆ. ಅವರು ಕೆಲಸದ ನಿಮಿತ್ತ ಆಲೂರಿಗೆ ತೆರಳಿ ವಾಪಸ್ ಕುಂದಾಪುರದ ಕಡೆಗೆ ಬರುತ್ತಿದ್ದಾಗ, ಬೆಳಿಗ್ಗೆ ಸುಮಾರು 10 ಗಂಟೆಯ ಸುಮಾರಿಗೆ ಕಾರಿನ ಮುಂಭಾಗದಲ್ಲಿ ದೊಡ್ಡ ಶಬ್ದದೊಂದಿಗೆ ಹೊಗೆ ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಭಾಸ್ಕರ್ ಆಚಾರ್ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿದ್ದಾರೆ.
ಭಾಸ್ಕರ್ ಅವರು ಕಾರಿನಿಂದ ಕೆಳಗಿಳಿಯುತ್ತಿದ್ದಂತೆಯೇ ಬೆಂಕಿಯು ಹರಡಿದೆ. ಸ್ಥಳೀಯರು ತಕ್ಷಣ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಕೆಲವೇ ಕ್ಷಣಗಳಲ್ಲಿ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಚಾಲಕ ಸಮಯಪ್ರಜ್ಞೆಯಿಂದ ಕೂಡಲೇ ಕೆಳಗಿಳಿದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾರಿನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದ ಈ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕೊಲ್ಲೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉಡುಪಿ : ಮೇ 5 ರಂದು ನೇರ ಸಂದರ್ಶನ ಉಡುಪಿ : ಉದ್ಯೋಗ ಆಕಾಂಕ್ಷಿಗಳಿಗೆ ಮೇ 5 ರಂದು ಬೆಳಗ್ಗೆ…
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ ಉಡುಪಿ : ಮಾಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯ…
ಮೋದಿ ದುರಾಡಳಿತದ ವಿರುದ್ಧ ಮಾತಾಡಲು ಬಿಜೆಪಿಗರಿಗೆ ಸವಾಲು.. ಬಿಜೆಪಿಯ ಬಡಜನ ವಿರೋಧಿ ಬಣ್ಣ ಮತ್ತೆ ಬಯಲು.. ವಾಣಿಜ್ಯ ಸಿಲಿಂಡರ್ ದರ…
ಪತ್ನಿಯ ಅಕ್ರಮ ಸಂಬಂಧ, ಕಿರುಕುಳಕ್ಕೆ ಬೇಸತ್ತು ಗಂಡ ನೇಣಿಗೆ ಶರಣು ಕಾರವಾರ: ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡ…
ಮನೆಯಲ್ಲಿದ್ದ ಚಿನ್ನಾಭರಣ ಸಮೇತ ಪತ್ನಿ ಪರಾರಿ: ಮಕ್ಕಳಿಬ್ಬರನ್ನು ಕೊಲೆಗೈದು ನೇಣಿಗೆ ಶರಣಾದ ಪತಿ ಕುಣಿಗಲ್ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ…
NDMAಯಿಂದ ಬರುತ್ತೆ ತುರ್ತು ಎಚ್ಚರಿಕೆ ಸಂದೇಶ.. ನಿಮ್ಮ ಮೊಬೈಲ್‌ನಲ್ಲಿ ಅಲರ್ಟ್ ಸಂದೇಶ, ಸೈರನ್ ಮೊಳಗಿದ್ರೆ ಭಯಪಡಬೇಡಿ.. ನಿಮ್ಮ ಮೊಬೈಲ್ ಫೋನ್…