Featured

ಕುಂದಾಪುರ : ಜಿಲ್ಲೆಯಲ್ಲಿ ಎಲ್ಲೆಲ್ಲಿ ಕಾಲು ಸಂಕದ ಅವಶ್ಯಕತೆ ಅವಶ್ಯಕತೆ ಇದೆ ಎಂದು ಮಾಹಿತಿ ಸಂಗ್ರಹಿಸಿ : ಸಚಿವ ಅಂಗಾರ ಸೂಚನೆ – Vishwanews24

ಕುಂದಾಪುರ : ಜಿಲ್ಲೆಯಲ್ಲಿ ಎಲ್ಲೆಲ್ಲಿ ಕಾಲು ಸಂಕದ ಅವಶ್ಯಕತೆ ಅವಶ್ಯಕತೆ ಇದೆ ಎಂದು ಮಾಹಿತಿ

ಸಂಗ್ರಹಿಸಿ : ಸಚಿವ ಅಂಗಾರ ಸೂಚನೆ

ಕುಂದಾಪುರ: ಜಿಲ್ಲೆಯ ವಿವಿಧ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು ಮುಂದಿನ 15-20 ದಿನಗಳ ಒಳಗೆ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕಾಲು ಸಂಕದ ಅವಶ್ಯಕತೆ ಇದೆ ಎಂದು ಮಾಹಿತಿ ಸಂಗ್ರಹಿಸಿ, ಸರ್ಕಾರದ ನಿಯಮಾವಳಿಯಲ್ಲಿ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಅಂದಾಜು 4.5 ಲಕ್ಷ ಮೊತ್ತವನ್ನು ನರೇಗಾ ಯೋಜಜೆಯಡಿಯಲ್ಲಿ ಒದಗಿಸಲು ಅವಕಾಶವಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.

ಕುಂದಾಪುರ ಪ್ರವಾಸಿ ಮಂದಿರದಲ್ಲಿ ಬುಧವಾರ ಅಧಿಕಾರಿಗಳ ಸಭೆಯನ್ನು ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕಾಲು ಸಂಕಗಳ ಕುರಿತು ವರದಿ ನೀಡುವಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಬೈಂದೂರಿನ ಶಿರೂರು ಹಾಗೂ ಇತರ ಭಾಗಗಳಲ್ಲಿ ಪ್ರಾಕೃತಿಕ ವಿಕೋಪಗಳ ಕಾರಣದಿಂದ ಹಾನಿಗೊಳಗಾಗಿರುವ ನಾಡ ದೋಣೆಗಳಿಗೆ ಎನ್‍ಡಿಆರ್‍ಎಫ್ ಹಾಗೂ ಸರ್ಕಾರದ ಪ್ರಾಕೃತಿಕ ವಿಕೋಪ ನಿಧಿ ನಿಯಮಾವಳಿಗಳ ಅಡಿಯಲ್ಲಿ ಕೇವಲ 4,500 ರೂ. ಮಾತ್ರ ನೀಡಲು ಅವಕಾಶವಿದ್ದು, ಅಂದಾಜು 26 ಲಕ್ಷದ ಮಾರುಕಟ್ಟೆ ಬೆಲೆಯ ದೋಣಿ ಹಾಗೂ ಬಲೆಯ ವಾಸ್ತವ ಹಾನಿಯ ಒಟ್ಟು ವಿವರಗಳನ್ನು ಪಡೆದುಕೊಂಡು ಸದ್ಯದಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ವಿಷಯ ಮಂಡನೆ ಮಾಡಿ ನಾಡ ದೋಣಿ ಮೀನುಗಾರರಿಗೆ ಗರಿಷ್ಠ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.

ಪ್ರವೀಣ್​ ​ ಹತ್ಯೆ ಪ್ರಕರಣ – ಇಂದು ದಕ್ಷಿಣ ಕನ್ನಡ ಎಸ್ಪಿಯಿಂದ ಮಹತ್ವದ ಸುದ್ದಿಗೋಷ್ಟಿ – Vishwanews24

ದುರಂತ ಘಟನೆ ಸಂಭವಿಸಿದ ಬಳಿಕ ಇನ್ನೂ ಮುಂದೆ ಅದೇ ರೀತಿಯ ಘಟನೆಗಳು ಪುನರಾವರ್ತನೆ ಆಗಬಾರದು ಎನ್ನುವ ಕಾರಣಕ್ಕಾಗಿ ಉಡುಪಿ ಜಿಲ್ಲಾ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಣ್ಣ ಸಣ್ಣ ನದಿ, ತೋಡು ಹಾಗೂ ಹಳ್ಳಗಳನ್ನು ದಾಟಲು ಕಾಲು ಸಂಕದ ಅವಶ್ಯಕತೆ ಎಲ್ಲೆಲ್ಲಿ ಇದೆ ಎನ್ನುವುದನ್ನು ಪರಿಶೀಲನೆ ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದ್ದು, ನರೇಗಾ ಯೋಜನೆಯಡಿಯಲ್ಲಿ ತುರ್ತಾಗಿ ಕಾಲು ಸಂಕಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು.

ಮುಖ್ಯಮಂತ್ರಿಗಳೊಂದಿಗೆ ಕೇಂದ್ರದ ಮೀನುಗಾರಿಕಾ ಹಾಗೂ ಬಂದರು ಇಲಾಖೆಯ ಸಚಿವರನ್ನು ಭೇಟಿ ಮಾಡಿ ರಾಜ್ಯದ ಕರಾವಳಿ ಪ್ರದೇಶದ ಅಭಿವೃದ್ಧಿಗಾಗಿ ಪ್ರಾಸ್ತಾವನೆ ಮಾಡಿರುವ ಯೋಜನೆಗಳಲ್ಲಿ 381 ಕೋಟಿ ರೂಪಾಯಿಯ 9 ಯೋಜನೆಗಳಿಗೆ ಅನುಮೋದನೆ ದೊರೆಕಿದೆ. ಮೀನುಗಾರರಿಗೆ ಯಾವುದೇ ರೀತಿಯ ತೊಂದರೆಗಳನ್ನು ನೀಡದೆ, ಅಭಿವೃದ್ಧಿಯ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದ್ದ ಯೋಜನೆಯ ಅನುಷ್ಠಾನದ ವೇಳೆಯಲ್ಲಿ ಮೀನುಗಾರರು ಸಹಕಾರ ನೀಡಬೇಕು. ಸಮುದ್ರ ತೀರ ಪ್ರದೇಶಗಳ ರಸ್ತೆಗಳ ಅಭಿವೃದ್ಧಿ ಹಾಗೂ ಸಮುದ್ರ ತಡೆಗೋಡೆಗಳಿಗೆ ಕಲ್ಲು ಹಾಕುವ ಕಾಮಗಾರಿಗೆ ಗುರುವಾರದಿಂದಲೇ ಚಾಲನೆ ನೀಡಲಾಗುವುದು. ಪಂಜರ ಮೀನು ಕೃಷಿಗೆ ಸಂಬಂಧಿಸಿದಂತೆ ಸರ್ಕಾರದ ಕೆಲವು ನಿಯಮಗಳನ್ನು ಬದಲಾವಣೆ ಮಾಡಬೇಕು. ಕರಾವಳಿ ಹಾಗೂ ಒಳನಾಡು ಮೀನುಗಾರಿಕೆಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ರೂಪಿಸಲು ಕರಡು ಪ್ರತಿಯನ್ನು ತಯಾರಿಸಲಾಗಿದ್ದು, ಮೀನುಗಾರರ ಸಂಘಟನೆಯ ಪ್ರತಿನಿಧಿಗಳಿಂದ ಅಭಿಪ್ರಾಯ ಪಡೆದುಕೊಂಡು, ಸರ್ಕಾರದ ಬೊಕ್ಕಸಕ್ಕೆ ಆದಾಯ ಕ್ರೋಢಿಕರಣ ಆಗುವುದನ್ನು ಗಮನದಲ್ಲಿ ಇರಿಸಿಕೊಂಡು ನಿಯಮಾವಳಿಗಳನ್ನು ಜಾರಿಗೆ ತರಲಾಗುವುದು ಎಂದು ಸಚಿವರು ತಿಳಿಸಿದರು.

ತೀರ ಪ್ರದೇಶಗಳಲ್ಲಿ ನಡೆಸಲು ಉದ್ದೇಶಿಸಿರುವ ಯೋಜನೆಗಳಿಗೆ ಸಂಬಂಧಿಸಿದಂತೆ ಸಿಆರ್ ಝಡ್ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಪೂರ್ವಾನುಮತಿ ಪಡೆದುಕೊಳ್ಳದೆ ಇರುವುದರಿಂದ ಮಂಜೂರಾಗಿರುವ ಯೋಜನೆಗಳು ನಿರ್ದಿಷ್ಠ ಸಮಯದಲ್ಲಿ ಅನುಷ್ಠಾನಗೊಳ್ಳಲು ತೊಡಕಾಗುತ್ತಿದೆ. ನ್ಯಾಯಾಲಯದಲ್ಲಿ ಕೆಲವು ಪ್ರಕರಣಗಳು ಬಾಕಿ ಉಳಿದಿರುವುದರಿಂದ ಕೆಲವು ಯೋಜನೆಗಳು ಬಾಕಿ ಉಳಿದಿದೆ. ಮೀನುಗಾರರ ಹಾಗೂ ತೀರ ಪ್ರದೇಶವಾಸಿಗಳ ವಿಶ್ವಾಸ ತೆಗೆದುಕೊಂಡು ಅಭಿವೃದ್ಧಿ ಯೋಜನೆ ಹಾಗೂ ರಫ್ತು ಮಾರುಕಟ್ಟೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಮೀನುಗಾರಿಕಾ ಮನೆ ನೀಡುವುದು ಸೇರಿದಂತೆ ಮೀನುಗಾರರಿಗೆ ಇರುವ ಸಮಸ್ಯೆಗಳನ್ನು ಅರಿಯಲು ಅಧಿಕಾರಿಗಳೊಂದಿಗೆ ಮೀನುಗಾರರ ಬಳಿಗೆ ಬಂದು ಸಮಸ್ಯೆಯನ್ನು ಆಲಿಸಿ ಪರಿಹಾರ ಕ್ರಮ ಕೈಗೊಳ್ಳಲು ಗಮನ ಹರಿಸುತ್ತೇನೆ.

Vishwa News 24

Recent Posts

ಪಡುಬಿದ್ರಿ: ಹೆಜಮಾಡಿ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ; ಟೋಲ್ ಗೇಟನ್ನು ತಕ್ಷಣ ತೆರವುಗೊಳಿಸಬೇಕೆಂದು ಆಗ್ರಹ – vishwanews24

ಪಡುಬಿದ್ರಿ: ಹೆಜಮಾಡಿ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ .. ಟೋಲ್ ಗೇಟ ನ್ನು ತಕ್ಷಣ ತೆರವುಗೊಳಿಸಬೇಕು ಎಂದು ಆಗ್ರಹ 15…

1 day ago

ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ: ಹಿಜಾಬ್ ಧರಿಸಲು ಅವಕಾಶ ಇಲ್ಲ : ಧಾರ್ಮಿಕ ಉಡುಪುಗಳ ಗೊಂದಲ ಬಗ್ಗೆ ಪ್ರಿಯಾಂಕ ಖರ್ಗೆ ಸ್ಪಷ್ಟನೆ – vishwanews24

ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ: ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ : ಪ್ರಿಯಾಂಕ ಖರ್ಗೆ ಸ್ಪಷ್ಟನೆ ಬೆಂಗಳೂರು: ಕರ್ನಾಟಕದ ಪೊಲೀಸ್…

1 day ago

ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿ – vishwanews24

ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿ ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ವಿಶೇಷ ಸೇನಾ…

1 day ago

ಕಡಬ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ – vishwanews24

ಕಡಬ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ :ಭಕ್ತರಿಗೆ ಡ್ರಮ್‌ಗಳಲ್ಲಿ ಪರ್ಯಾಯ ಸ್ನಾನ ವ್ಯವಸ್ಥೆ ಕಡಬ:ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿರಂತರ ಸುರಿಯುತ್ತಿರುವ…

1 day ago

ಮೀನುಗಾರಿಕಾ ಋತು ಆರಂಭ ಹಿನ್ನೆಲೆ : ಮಲ್ಪೆ ಬಂದರಿಗೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ – vishwanews24

ಮೀನುಗಾರಿಕಾ ಋತು ಆರಂಭ ಹಿನ್ನೆಲೆ : ಮಲ್ಪೆ ಬಂದರಿಗೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ ಉಡುಪಿ: ಜೂನ್ ಮತ್ತು ಜುಲೈ…

1 day ago

ಕುಂದಾಪುರ ರಿಚರ್ಡ್‌ ಹತ್ಯೆ ಪ್ರಕರಣ : ಆರೋಪಿ ಭಟ್ಕಳದಲ್ಲಿ ಬಂಧನ – vishwanews24

ಕುಂದಾಪುರ ರಿಚರ್ಡ್‌ ಹತ್ಯೆ ಪ್ರಕರಣ : ಆರೋಪಿ ಭಟ್ಕಳದಲ್ಲಿ ಬಂಧನ ಕುಂದಾಪುರ: ಇಲ್ಲಿನ ಚರ್ಚ್ ರಸ್ತೆಯ ಸಮೀಪ ಗುರುವಾರ ತಡರಾತ್ರಿ…

1 day ago