ಕುಂದಾಪುರ: ಗಾಂಜಾ ಅಮಲಿನಲ್ಲಿದ್ದ ಸುಮಾರು ಹತ್ತು ಮಂದಿ ದುಷ್ಕರ್ಮಿಗಳ ತಂಡವೊಂದು ನಡೆಸಿದ ತಲವಾರು ದಾಳಿಯಲ್ಲಿ ಆರು ಮಂದಿ ಗಾಯಗೊಂಡ ಘಟನೆ ಕುಂದಾಪುರದ ಸಮೀಪದ ವಕ್ವಾಡಿಯಲ್ಲಿ ನಡೆದಿದೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ತೀವ್ರ ಗಂಭೀರವಾಗಿದೆ ಎನ್ನಲಾಗಿದೆ.
ವಕ್ವಾಡಿಯ ಚಂದ್ರಶೇಖರ್ (27) ಹಾಗೂ ಅಶೋಕ್ ದೇವಾಡಿಗ (45) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣದ ಆರೋಪಿಗಳನ್ನು ವಕ್ವಾಡಿಯ ಆದರ್ಶ, ಎಡ್ವರ್ಡ್, ಗಣೇಶ್ ಕುಂಭಾಶಿ, ಗೋವರ್ಧನ್ ಹಾಗೂ ಇತರ ಎಂಟು ಜನರು ಎಂದು ಗುರುತಿಸಲಾಗಿದೆ. ಈ ಪೈಕಿ ಪೊಲೀಸರು ಆದರ್ಶ (33) ಹಾಗೂ ಗೋವರ್ಧನ್ (32) ಎಂಬುವವರನ್ನು ಬಂಧಿಸಿದ್ದಾರೆ. ಗಣೇಶ್ ಕುಂಭಾಶಿ (28) ಹಾಗೂ ಎಡ್ವರ್ಡ್ (25) ಸೇರಿದಂತೆ ಇತರರು ತಲೆಮರೆಸಿಕೊಂಡಿದ್ದು ಕುಂದಾಪುರ ನಗರ ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ವಕ್ವಾಡಿ, ಗೋಪಾಡಿ, ಕುಂಭಾಶಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ಗಾಂಜಾ ಮತ್ತು ಡ್ರಗ್ಸ್ ಚಟುವಟಿಕೆಗಳು ನಡೆಯುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿತ್ತು. ಈ ಬಗ್ಗೆ ಹಲವಾರು ಹಲ್ಲೆ, ಮಾರಣಾಂತಿಕ ದಾಳಿ, ಕೊಲೆ ಬೆದರಿಕೆ, ಅತ್ಯಾಚಾರ ಯತ್ನದಂತಹ ಕ್ರಿಮಿನಲ್ ಪ್ರಕರಣಗಳು ನಡೆದಿದ್ದು, ಇದೀಗ ಆರೋಪಿಗಳಾದ ಆದರ್ಶ, ಗೋವರ್ಧನ್, ಗಣೇಶ್, ಎಡ್ವರ್ಡ್ ಸೇರಿದಂತೆ 10 ಕ್ಕೂ ಮಿಕ್ಕಿ ಗಾಂಜಾ ನಶೆಯಲ್ಲಿದ್ದ ಯುವಕರ ತಂಡ ವಕ್ವಾಡಿಯಲ್ಲಿ ಮಹಿಳೆಯರನ್ನು ಅಡ್ಡಗಟ್ಟಿ ದಾಂಧಲೆ ನಡೆಸಿತ್ತು. ಬಳಿಕ ಅಲ್ಲಿಯೇ ನಿಲ್ಲಿಸಲಾಗಿದ್ದ ಆಟೋಗಳಿಗೆ ಮತ್ತು ಬೈಕುಗಳಿಗೆ ತಲವಾರ್ ಬಿಸಿ ಹಾನಿ ಉಂಟು ಮಾಡಿದ್ದರು ಎನ್ನಲಾಗಿದೆ.
ಅಲ್ಲದೆ ದುಷ್ಕರ್ಮಿಗಳು ಪಕ್ಕದಲ್ಲಿದ್ದ ಅಶೋಕ್ ದೇವಾಡಿಗ ಹಾಗೂ ಚಂದ್ರಶೇಖರ್ ಸೇರಿದಂತೆ ಐದಾರು ಜನರ ಮೇಲೆ ತಲವಾರು ಬೀಸಿ ಕೊಲೆಗೆ ಯತ್ನಿಸಿದ್ದಾರೆ. ಘಟನೆಯ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಲೋಕೇಶ್ ಅಂಕದಕಟ್ಟೆ ಹಾಗೂ ವಕ್ವಾಡಿಯ ನಿವಾಸಿಗಳು ಘಟನೆಯನ್ನು ಖಂಡಿಸಿದ್ದು ಪೊಲೀಸರು ತಪ್ಪಿತಸ್ಥರನ್ನು ಬಂಧಿಸಿ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಾಂಜಾ, ಡ್ರಗ್ಸ್ ಹಾಗೂ ಅನೈತಿಕ ಚಟುವಟಿಕೆಗಳನ್ನು ತಡೆಯಬೇಕು ಎಂದು ಆಗ್ರಹಿಸಿದ್ದಾರೆ. ಕುಂದಾಪುರ ನಗರ ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಉಡುಪಿ:ಅಕ್ರಮವಾಗಿ ದಂಪತಿಗೆ ಮಗು ಪೂರೈಕೆ : ವೈದ್ಯ ಸಹಿತ ಮೂವರ ಬಂಧನ ಉಡುಪಿ: ಮಗುವಿಲ್ಲದ ದಂಪತಿಗೆ ಕಾನೂನು ಬಾಹಿರವಾಗಿ ಒಂದು…
ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…
ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…
ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…
ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ…
ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…