ಕುಂದಾಪುರ: ಸುಮಾರು 2 ದಶಕಗಳ ಹಿಂದೆ ಮನೆ ತೊರೆದು, ನಕ್ಸಲ್ ಗುಂಪು ಸೇರಿಕೊಂಡಿದ್ದ ಮಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆಯ ಲಕ್ಷ್ಮೀ ತೊಂಬಟ್ಟು ಶರಣಾಗಿರುವುದು ಕುಟುಂಬದವರಲ್ಲಿ ಸಂತಸ ಮೂಡಿಸಿದೆ.
7ನೇ ತರಗತಿಯವರೆಗೆ ಓದಿದ್ದ ಲಕ್ಷ್ಮೀ ಸಂಡೂರು ನೀರಾವರಿ ಪ್ರಾಜೆಕ್ಟ್ ಕೆಲಸಕ್ಕೆ ಹೋಗುತ್ತಿದ್ದರು. 2006ರಲ್ಲಿ ಒಂದು ದಿನ ಸ್ನೇಹಿತರ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮತ್ತೆ ಬಂದಿರಲಿಲ್ಲ. ನಾವು 3-4 ಹುಡುಕಾಟ ನಡೆಸಿದರೂ ಸಿಗಲಿಲ್ಲ. ಆ ಬಳಿಕ ಆಕೆ ನಕ್ಸಲ್ ಗುಂಪಿಗೆ ಸೇರಿದ್ದಾಳೆಂದು ತಿಳಿಯಿತು. ಆಮೇಲೆ ಶಂಕರನಾರಾಯಣ ಠಾಣೆಗೆ ತಿಳಿಸಿದೆವು ಎಂದು ಅಣ್ಣ ವಿಠಲ ಪೂಜಾರಿ ಹಳೆಯ ನೆನಪುಗಳನ್ನು ಸ್ಮರಿಸಿಕೊಂಡರು.
ಮನೆ ಬಿಟ್ಟು ಹೋಗುವಾಗ ಈಕೆಗೆ 17-18 ವರ್ಷ ಆಗಿರಬಹುದು. ಈ ಹಿಂದೆ ಈಕೆ ಊರಿಗೆ ಬಂದಿರುವುದಾಗಿ ಕೆಲವರು ಹೇಳುತ್ತಾರೆ. ಆದರೆ ನಾವು 2006ರ ಬಳಿಕ ಆಕೆಯನ್ನು ನೋಡುತ್ತಿರುವುದು ಇವತ್ತೇ. ಆಕೆಯನ್ನು ನೋಡಿ ನಮಗೆಲ್ಲ ತುಂಬಾ ಖುಷಿಯಾಯಿತು. ಈಕೆಯ ಕಾರಣಕ್ಕೆ ಆರಂಭದ ದಿನಗಳಲ್ಲಿ ನಾವು ತುಂಬಾ ತೊಂದರೆ ಅನುಭವಿಸಿದ್ದೆವು. ಇನ್ನು ಆಕೆ ನಿಶ್ಚಿಂತೆಯಿಂದ ಮನೆಗೆ ಬರಬಹುದು. ಮನೆಯಲ್ಲಿ ಇರಬಹುದು ಎನ್ನುತ್ತಾರೆ ವಿಠಲ ಪೂಜಾರಿ.
ಮನೆಯಲ್ಲಿದ್ದ ಬಡತನ ಆಕೆ ನಕ್ಸಲ್ ಸೇರಲು ಕಾರಣ ಇರಬಹುದು. ಆಕೆ ನಕ್ಸಲ್ ಸೇರಿದ ಬಳಿಕ ನಾವು ಅರಣ್ಯ ಇಲಾಖೆ ಹಾಗೂ ಪೊಲೀಸರಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದೆವು. ನಮ್ಮ ಮದುವೆ, ಹೆತ್ತವರ ಸಾವಿನ ಸಂದರ್ಭದಲ್ಲೂ ಆಕೆ ಬರಬಹುದು ಎಂದು ಪೊಲೀಸರು ಕಾದಿದ್ದರು ಎಂದು ಅವರು ಹೇಳಿದರು.
ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ ಹಿಟ್ಲರ್ ಕಲ್ಯಾಣ’ ಧಾರವಾಹಿ ಖ್ಯಾತಿಯ ನಟ ದಿಲೀಪ್ ರಾಜ್ ಇಂದು ಬೆಳಗಿನ…
ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ ಉಡುಪಿ : ಮಲಬಾರ್…
ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕ, ನೂತನ ಮುಖ್ಯಮಂತ್ರಿ…
ಪ್ರಧಾನಿ ಮೋದಿಯವರು ತಮ್ಮ ಕುರ್ಚಿ ಗಟ್ಟಿಯಾಗಿದೆಯೇ ನೋಡಿಕೊಳ್ಳಲಿ .. ಪಂಚಾಯತಿ ಮೇಂಬರ್ ರೀತಿ ರಾಜಕಾರಣ ಮಾಡೋದು ಬಿಡಬೇಕು.. ಇಂದಿರಾ ಗಾಂಧಿ…
ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು, ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ: ಮಂಜುನಾಥ ಭಂಡಾರಿ ಮಂಗಳೂರು…
ಮೂಳೂರು: ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಪ್ರತಿಭಟನೆ.. STP ತಕ್ಷಣವೇ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಸಂಬಂದಿಸಿದ ಅಧಿಕಾರಿಗಳಿಗೆ…