ಕುಂದಾಪುರ : ಕಳೆದ ಮೂರು ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆ ಒಂದು ಕಡೆಯಾದರೆ, ಹೆದ್ದಾರಿಯಲ್ಲಿನ ದಾರಿ ದೀಪಗಳಿಗೆ ಸಂಪರ್ಕಿಸಲಾದ ವಿದ್ಯುತ್ ಹೆದ್ದಾರಿ ಮೇಲೆ ಪ್ರವಹಿಸಿರುವುದನ್ನು ಟೆಸ್ಟರ್ ಮೂಲಕ ತೋರಿಸಿದ ವಿಡಿಯೋವೊಂದು ವೈರಲ್ ಆಗಿ ಆತಂಕಕ್ಕೆಡೆಮಾಡಿಕೊಟ್ಟ ಘಟನೆ ಕುಂದಾಪುರದ ಹೃದಯಭಾಗದಲ್ಲಿರುವ ಫ್ಲೈ ಓವರ್ ನಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಇಬ್ಬರು ವ್ಯಕ್ತಿಗಳು ಈ ಪ್ರಾತ್ಯಕ್ಷಿಕೆ ಮಾಡಿ, ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ನವಯುಗ ಕನ್ ಸ್ಟ್ರಕ್ಷನ್ ನವರು ಹಲವಾರು ಸಮಸ್ಯೆಗಳ ನಡುವೆಯೇ ಫ್ಲೈ ಓವರ್ ನಿರ್ಮಿಸಿದ್ದರೂ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಬಳಿಕವೂ ದಾರಿದೀಪಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರಲಿಲ್ಲ. ಸಾರ್ವಜನಿಕರ ಹೋರಾಟದ ಬಳಿಕ ತರಾತುರಿಯಲ್ಲಿ ನಾಲ್ಕು ತಿಂಗಳ ಹಿಂದಷ್ಟೇ ವಿದ್ಯುತ್ ಸಂಪರ್ಕ ನೀಡಲಾಗಿತ್ತು.
ಇದೀಗ ವಿದ್ಯುತ್ ಸಂಪರ್ಕದಲ್ಲಿನ ಸಮಸ್ಯೆಯಿಂದಾಗಿ ಫ್ಲೈ ಓವರ್ ಮೇಲೆ ವಿದ್ಯುತ್ ಪ್ರವಹಿಸುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಹೆಚ್ಚಿನ ಅನಾಹುತ ಸಂಭವಿಸುವ ಮೊದಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತಕ್ಷಣ ಗಮನಹರಿಸಿ, ಸಮಸ್ಯೆ ಪರಿಹರಿಸಬೇಕಾಗಿದೆ.
ಸಶಕ್ತ ಬೂತ್’ ಸಂಕಲ್ಪದೊಂದಿಗೆ ಪಕ್ಷ ಸಂಘಟನೆಗೆ ವೇಗ ನೀಡಲು ಕುಯಿಲಾಡಿ ಕರೆ – Vishwanews24
ಉಡುಪಿ : ನೇರ ಸಂದರ್ಶನ ಉಡುಪಿ : ನಗರದ ಮಣಿಪಾಲದ ಮನೋಹರ್ ಭವನ್ ಹೋಟೆಲ್ ಮುಂಭಾಗದ ಮಣಿಪಾಲ್ ಪೇಮೆಂಟ್ ಐಡೆಂಟಿಟಿ…
ಚಾ.ನಗರ: ಗ್ರೈಂಡರ್‌ನಿಂದ ವಿದ್ಯುತ್ ಶಾಕ್ – ನಾಲ್ಕು ವರ್ಷದ ಬಾಲಕಿ ದುರ್ಮರಣ ಚಾಮರಾಜನಗರ: ಗ್ರೈಂಡರ್‌ನಿಂದ ವಿದ್ಯುತ್ ಶಾಕ್ ಹೊಡೆದು ನಾಲ್ಕು…
ಉಡುಪಿ : ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ: ಜೂ. 23ರಿಂದ ಜಿಲ್ಲೆಯ ಮನೆಮನೆಗೆ ತೆರಳಿ ಜನಜಾಗೃತಿ: ಕೆ.ಜಯಪ್ರಕಾಶ್ ಹೆಗ್ಡೆ ಉಡುಪಿ:…
ಆರ್ಎಸ್ಎಸ್ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ ಮೈಸೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಂತರ ಸಚಿವ ಯತೀಂದ್ರ…
ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ ಮಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಎಸ್ಪಿ ಪ್ರಯಾಣಿಸುತ್ತಿದ್ದ…
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ ನವದೆಹಲಿ:…