ಕುಂದಾಪುರ: ಗುರುವಾರ ಸಂಜೆ ಕೊಲ್ಲೂರಿನಿಂದ ಉಡುಪಿಗೆ ಬರುತ್ತಿದ್ದ ಬಸ್ಸಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ ಪೈಕಿಪತಿ ರಾಜ್‌ಕುಮಾರ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿಯೇ ನಿಧನ ಹೊಂದಿದ್ದು, ಆತನ ಪತ್ನಿ ಸಂಗೀತಾ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಗುರುವಾರ ತಮಿಳುನಾಡು ಮೂಲದ ಪ್ರಸ್ತುತ ಉಡುಪಿ ಅಂಬಲಪಾಡಿ ಸಮೀಪ ಟೆಂಟಿನಲ್ಲಿ ವಾಸಮಾಡುತ್ತಿರುವ ರಾಜ್‌ಕುಮಾರ್(35) ಹಾಗೂ ಆತನ ಪತ್ನಿ ಸಂಗೀತಾ(28) ವಿಷ ಸೇವಿಸಿದ ಬಳಿಕ ತಮ್ಮ ಒಂದೂವರೆ ವರ್ಷದ ಪುಟ್ಟ ಮಗುವಿಗೂ ವಿಷ ಕುಡಿಸಿದ್ದರು. ವಿಷದ ಅಂಶ ಬಾಲಕನ ಬಾಯಿಯಲ್ಲಿಯೂ ಇತ್ತೆನ್ನಲಾಗಿದ್ದು, ಮಗುವಿನ ಆರೋಗ್ಯ ಸಮಸ್ಥಿತಿಯಲ್ಲಿ ಇರುವುದರಿಂದ ಖಾಲಿ ಬಾಟಲಿಯನ್ನು ಮಗುವಿನ ಬಾಯಿಗೆ ಬಗ್ಗಿಸಿರಬಹುದು ಎಂದು ಅಂದಾಜಿಸಲಾಗಿದೆ.
ಕಾರ್ಕೋಟಕ ವಿಷ: ಆತ್ಮಹತ್ಯೆಗಾಗಿ ದಂಪತಿ ಸೇವಿಸಿದ ವಿಷಕ್ಕೆ ಆಂಟಿಟಾಕ್ಸಿನ್ ಇಲ್ಲ ಎನ್ನಲಾಗಿದ್ದು, ಇದನ್ನು ಅರೋಮೈನ್ ಅಥವಾ ಯೆಲ್ಲೋ ಕೌ ಡಂಗ್ ಪೌಡರ್ ಎಂದು ಕರೆಯಲಾಗುತ್ತದೆ. ಫ್ಲೋರೋಸೆಂಟ್ ಹಳದಿ ಬಣ್ಣ ಹೊಂದಿರುವ ವಾಸನೆಯಿಲ್ಲದ, ರುಚಿಯೂ ಇಲ್ಲದ ಆದರೆ ಕಾರ್ಕೋಟಕ ವಿಷವಾಗಿರು ಈ ಅರೋಮೈನ್ ದ್ರಾವಣನ್ನು ತಮಿಳುನಾಡು, ಈರೋಡ್, ಕೊಯಮುತ್ತೂರು, ತಿರಪ್ಪೂರು ಮೊದಲಾದೆಡೆ ಬಹುತೇಕ ಮಂದಿ ಆತ್ಮಹತ್ಯಗೆ ಬಳಸಿದ ಬಗ್ಗೆ ದಾಖಲೆಗಳಿವೆ, ಬಹುಷಃ ರಾಜ್‌ಕುಮಾರ್ ದಂಪತಿ ಈ ಹಿಂದೆಯೇ ಈ ವಿಷವನ್ನು ತಮಿಳುನಾಡಿನಿಂದ ತಂದಿದ್ದು, ಬ್ಯಾಗಿನಲ್ಲಿಟ್ಟುಕೊಂಡಿರಬೇಕು ಎಂದು ಅಂದಾಜಿಸಲಾಗಿದೆ.
ಕುಂದಾಪುರದಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಉಡುಪಿ ಅಜ್ಜರಕಾಡಿಗೆ ಸಾಗಿಸಲಾಯಿತಾದರೂ ಗಂಭೀರಗೊಂಡಿದ್ದ ಅವರನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ರಾಜ್‌ಕುಮಾರ್ ಗುರುವಾರ ರಾತ್ರಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…