Featured

ಕುಂದಾಪುರ: ಬುಲ್‌ಟ್ರಾಲ್‌ ನಿಷೇಧ ಕಟ್ಟುನಿಟ್ಟು ಮಾಡಿ: ಮೀನುಗಾರಿಕೆ ಸಚಿವರಿಗೆ ಮನವಿ – vishwanews24

ಕುಂದಾಪುರ: ಬುಲ್‌ಟ್ರಾಲ್‌ ನಿಷೇಧ ಕಟ್ಟುನಿಟ್ಟು ಮಾಡಿ: ಮೀನುಗಾರಿಕೆ ಸಚಿವರಿಗೆ ಮನವಿ

ಕುಂದಾಪುರ: ಯಾಂತ್ರೀಕೃತ ಬೋಟ್‌ಗಳು ಸಮುದ್ರ ತೀರ ಪ್ರದೇಶದಲ್ಲಿ ಬುಲ್‌ಟ್ರಾಲ್‌ ಮೀನುಗಾರಿಕೆ ಮಾಡುತ್ತಿದ್ದು, ಇವುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮೀನುಗಾರಿಕೆ ಸಚಿವ ಎಸ್‌. ಮಂಕಾಳ ವೈದ್ಯ ಅವರಿಗೆ ರಾಜ್ಯ ಸಾಂಪ್ರದಾಯಿಕ ಮೀನುಗಾರರ ಒಕ್ಕೂಟ ಉಪ್ಪುಂದ ವತಿಯಿಂದ ಬೆಂಗಳೂರಿನಲ್ಲಿ ಮನವಿ ಸಲ್ಲಿಸಲಾಯಿತು.

ಬಳಿಕ ಸಚಿವರ ನಿವಾಸದಲ್ಲಿಯೇ ಮೀನುಗಾರರೊಂದಿಗೆ ಸಭೆ ನಡೆಸಿದ್ದು, ಬುಲ್‌ಟ್ರಾಲ್‌ ಮೀನುಗಾರಿಕೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಕರಾವಳಿ ಕಾವಲು ಪಡೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಿದ್ದೇನೆ. ಇನ್ನು ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಾಂತ್ರೀಕೃತ ಬೋಟುಗಳ ಮೀನುಗಾರರೊಂದಿಗೂ ಪ್ರತ್ಯೇಕ ಸಭೆ ಕರೆದು, ಮನವರಿಕೆ ಮಾಡಲಾಗುವುದು. ಈ ಬಗ್ಗೆ ಮೀನುಗಾರರ ನಡುವಿನ ಗೊಂದಲ ಸರಿಪಡಿಸಲು ಪ್ರಯತ್ನಿಸಲಾಗುವುದು. ಮೀನಿನ ಸಂತಾನೋತ್ಪತ್ತಿ ಹೆಚ್ಚಿಸುವ, ಸಂತತಿ ಉಳಿಸುವ ಕಾರ್ಯ ನಮ್ಮಿಂದ ಆಗಬೇಕಾಗಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.

ಮೀನು ಮರಿ ಸಂತತಿ ನಾಶವಾಗುವಂತಹ ಅವೈಜ್ಞಾನಿಕ ಬುಲ್‌ ಟ್ರಾಲ್‌ ಮೀನುಗಾರಿಕೆ ಮತ್ತು ಬೆಳಕು ಮೀನುಗಾರಿಕೆ (ಲೈಟ್‌ ಫಿಶಿಂಗ್‌) ನಿಷೇಧವಿದ್ದು, ಇದರ ಕಟ್ಟುನಿಟ್ಟಿನ ಜಾರಿಗೆ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರರು ಇದೇ ವೇಳೆ ಸಚಿವರಿಗೆ ಆಗ್ರಹಿಸಿದರು.ರಾಜ್ಯ ಸಾಂಪ್ರದಾಯಿಕ ಮೀನುಗಾರರ ಒಕ್ಕೂಟದ ಅಧ್ಯಕ್ಷ ನಾಗೇಶ ಖಾರ್ವಿ, ಪ್ರಧಾನ ಕಾರ್ಯದರ್ಶಿ ಯಶವಂತ ಗಂಗೊಳ್ಳಿ, ಗೌರವ ಸಲಹೆಗಾರರಾದ ಎಸ್‌. ಮದನ್‌ ಕುಮಾರ್‌ ಉಪ್ಪುಂದ, ನವೀನ್‌ಚಂದ್ರ ಉಪ್ಪುಂದ, ಚಂದ್ರಶೇಖರ ಶ್ರೀಯಾನ್‌ ಮಂಗಳೂರು, ಸುಧೀರ್‌ ಶ್ರೀಯಾನ್‌ ಮಂಗಳೂರು, ಮಂಜುನಾಥ ಜಿ. ಖಾರ್ವಿ ಉಪ್ಪುಂದ, ಕೃಷ್ಣ ಮುಡೇìಶ್ವರ, ಸದಸ್ಯರಾದ ವೆಂಕಟರಮಣ ಖಾರ್ವಿ ಉಪ್ಪುಂದ, ಸುರೇಶ ಖಾರ್ವಿ ಮರವಂತೆ, ಚಂದ್ರ ಡಿ. ಖಾರ್ವಿ ಕೊಡೇರಿ, ನಾಗರಾಜ ಹರಿಕಾಂತ ಕುಮಟ, ತಿಮ್ಮಪ್ಪ ಖಾರ್ವಿ ಉಪ್ಪುಂದ, ವಾಸುದೇವ ಖಾರ್ವಿ ಮರವಂತೆ, ಮಹೇಶ ಖಾರ್ವಿ ನಾವುಂದ, ಪ್ರವೀಣ ಹರಿಕಾಂತ ಕುಮಟ ಮೊದಲಾದವರು ಉಪಸ್ಥಿತರಿದ್ದರು.

Vishwa News 24

Recent Posts

ಕಾಪು ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದ ದೋಣಿ ಸ್ಥಳೀಯ ನಾಡದೋಣಿ ಗೆ ಡಿಕ್ಕಿ ಪ್ರಕರಣ: SDPI ಖಂಡನೆ -vishwanews24

ಕಾಪು ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದ ದೋಣಿ ಸ್ಥಳೀಯ ನಾಡದೋಣಿ ಗೆ ಡಿಕ್ಕಿ ಪ್ರಕರಣ: ಎಸ್‌ ಡಿ ಪಿ ಐ ಖಂಡನೆ…

1 hour ago

ಕಾರ್ಕಳ : ಮಹಾಮಸ್ತಕಾಭಿಷೇಕಕ್ಕೆ 1.59 ಕೋಟಿ ರೂ. ಅನುದಾನ: ರಾಜ್ಯ ಸರ್ಕಾರಕ್ಕೆ ಉದಯ ಶೆಟ್ಟಿ ಮುನಿಯಾಲು ಧನ್ಯವಾದ ಸಲ್ಲಿಕೆ – vishwanews24

ಕಾರ್ಕಳ : ಮಹಾಮಸ್ತಕಾಭಿಷೇಕಕ್ಕೆ 1.59 ಕೋಟಿ ರೂಪಾಯಿ ಅನುದಾನ: ರಾಜ್ಯ ಸರ್ಕಾರಕ್ಕೆ ಉದಯ ಶೆಟ್ಟಿ ಮುನಿಯಾಲು ಧನ್ಯವಾದ ಸಲ್ಲಿಕೆ ಕಾರ್ಕಳದಲ್ಲಿ…

1 hour ago

ಉಡುಪಿ: ಮೀನುಗಾರಿಕ ದೋಣಿಗಳಿಗೆ ಅಗತ್ಯ ಪ್ರಮಾಣದ ಡೀಸೆಲ್ ಪೂರೈಕೆಗೆ  ಕೇಂದ್ರ ಸಚಿವರಿಗೆ ಮನವಿ – vishwanews24

ಉಡುಪಿ: ಮೀನುಗಾರಿಕ ದೋಣಿಗಳಿಗೆ ಅಗತ್ಯ ಪ್ರಮಾಣದ ಡೀಸೆಲ್ ಪೂರೈಕೆಗೆ  ಕೇಂದ್ರ ಸಚಿವರಿಗೆ ಮನವಿ ಉಡುಪಿ: ಮೀನುಗಾರಿಕ ದೋಣಿಗಳಿಗೆ ಅಗತ್ಯ ಪ್ರಮಾಣದ…

1 hour ago

ಕಟಪಾಡಿ ಅಂಡರ್‌ಪಾಸ್ : ವಾರದೊಳಗೆ ವಾಹನ ಸಂಚಾರಕ್ಕೆ ಮುಕ್ತ – vishwanews24

ಕಟಪಾಡಿ ಅಂಡರ್‌ಪಾಸ್  ವಾರದೊಳಗೆ ವಾಹನ ಸಂಚಾರಕ್ಕೆ ಮುಕ್ತ ಕಟಪಾಡಿ: ರಾ. ಹೆ. 66ರ ಕಟಪಾಡಿ ಜಂಕ್ಷನ್‌ನಲ್ಲಿ ಅಂಡರ್‌ಪಾಸ್ ಮತ್ತು ವೆಹಿಕಲ್…

1 hour ago

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಸೇವಾ ಸಮಿತಿ ಬೊಳ್ಜೆ ಉದ್ಯಾವರ : ಅಧ್ಯಕ್ಷರಾಗಿ ಪ್ರಕಾಶ್ ಟಿ. ಕೋಟ್ಯಾನ್ ಆಯ್ಕೆ – vishwanews24

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಸೇವಾ ಸಮಿತಿ ಬೊಳ್ಜೆ ಉದ್ಯಾವರ : ಅಧ್ಯಕ್ಷರಾಗಿ ಪ್ರಕಾಶ್ ಟಿ. ಕೋಟ್ಯಾನ್ ಆಯ್ಕೆ ಉಡುಪಿ…

2 hours ago

ಕುಂದಾಪುರ: ಡಿವೈಡರ್ ಏರಿ ಹೊಂಡಕ್ಕೆ ಬಿದ್ದ ಲಾರಿ; ಚಾಲಕ ಗಂಭೀರ – vishwanews24

ಕುಂದಾಪುರ: ಡಿವೈಡರ್ ಏರಿ ಹೊಂಡಕ್ಕೆ ಬಿದ್ದ ಲಾರಿ; ಚಾಲಕ ಗಂಭೀರ ಕುಂದಾಪುರ: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿ,…

2 hours ago