Featured

ಕುಂದಾಪುರ: ಮಾರಣಕಟ್ಟೆ –ಹಾಲಾಡಿ KSRTC ಬಸ್‌ ಸಂಚಾರ ಆರಂಭ ; ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ – Vishwanews24

ಕುಂದಾಪುರ: ಮಾರಣಕಟ್ಟೆ –ಹಾಲಾಡಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭ  ; ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ

ಕುಂದಾಪುರ: ಮಾರಣಕಟ್ಟೆ ಕಡೆಯಿಂದ ಶಂಕರನಾರಾಯಣ ಕಾಲೇಜಿಗೆ ಹೋಗುವ ಮಕ್ಕಳಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಬಹು ಬೇಡಿಕೆಯ ಮಾರಣಕಟ್ಟೆ – ಹಾಲಾಡಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಜ. 14ರಂದು ಆರಂಭ ಗೊಳ್ಳಲಿದೆ. ಇದರಿಂದ ಈ ಭಾಗದ ನೂರಾರು ಮಂದಿ ಶಾಲಾ – ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಮಾರಣಕಟ್ಟೆ ಹಾಗೂ ಸುತ್ತಮುತ್ತಲಿನ ಊರಿನ ನೂರಾರು ವಿದ್ಯಾರ್ಥಿಗಳು ಶಂಕರನಾರಾಯಣ ಕಾಲೇಜಿಗೆ ತೆರಳಲು ಬಸ್‌ ಇಲ್ಲದೆ ಸಮಸ್ಯೆ ಅನುಭವಿಸುತ್ತಿರುವ ಕುರಿತು ಶಾಸಕ ಸುಕುಮಾರ್‌ ಶೆಟ್ಟರಲ್ಲಿ ಬಸ್‌ಆರಂಭಿಸಲು ಆಗ್ರಹಿಸಿದ್ದರು. ಈ ಕುರಿತಂತೆ ಕಾರ್ಯಪ್ರವೃತ್ತರಾದ ಶಾಸಕರು, ಕೆಎಸ್‌ಆರ್‌ಟಿಸಿ ಡಿಸಿ, ಪ್ರಾದೇಶಿಕ ಸಾರಿಗೆ ಆಯುಕ್ತ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತುರ್ತಾಗಿ ಬಸ್‌ ಆರಂಭಿಸಲು ಸೂಚಿಸಿದರು. ಅದರಂತೆ ಜ. 14ರಿಂದ ಮಾರಣಕಟ್ಟೆ- ಶಂಕರ ನಾರಾಯಣ – ಹಾಲಾಡಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭಗೊಳ್ಳಲಿದ್ದು ದಿನ ಗಳಲ್ಲಿ 4 ಟ್ರಿಪ್‌ ಗಳಲ್ಲಿ ಬಸ್‌ ಸಂಚರಿಸಲಿದೆ.

ಮಾರಣಕಟ್ಟೆಯಿಂದ ಬೆಳಗ್ಗೆ 8ಕ್ಕೆ ಬಸ್‌ ಹೊರಟು, ವಂಡ್ಸೆ, ನೆಂಪು, ನೇರಳಕಟ್ಟೆ, ಅಂಪಾರು, ಕ್ರೋಢಬೈಲೂರು, ಶಂಕರನಾರಾಯಣ ಆಗಿ ಹಾಲಾಡಿಯವರೆಗೆ ಸಂಚರಿಸಲಿದೆ. ಮಧ್ಯದ ಅವಧಿಯಲ್ಲಿ ಒಂದೆರಡು ಟ್ರಿಪ್‌ ಹಾಗೆಯೇ ಸಂಜೆ ಹಾಲಾಡಿಯಿಂದ ಶಂಕರನಾರಾಯಣ ಮೂಲಕ ಮಾರಣಕಟ್ಟೆಯವರೆಗೆ ಸಂಚರಿಸಲಿದೆ. ಇದರಿಂದ ಕ್ರೋಢ ಬೈಲೂರಿನ ಮಕ್ಕಳು, ಸಾರ್ವಜನಿಕರಿಗೂ ಅನುಕೂಲವಾದಂತಾಗಿದೆ.

ಇಲ್ಲಿಗೆ ಯಾವುದೇ ಬಸ್‌ ಸಂಚಾರವಿರಲಿಲ್ಲ. ಇದರಿಂದ ಶಂಕರ ನಾರಾಯಣ ಪ್ರಥಮ ದರ್ಜೆ ಕಾಲೇಜಿಗೆ ಹೋಗುವ 170 ಮಂದಿ ಮಕ್ಕಳು, ಮದರ್‌ ಥೆರೆಸಾ ಶಿಕ್ಷಣ ಸಂಸ್ಥೆಗೆ ತೆರಳುವ 90 ಮಂದಿ ಮಕ್ಕಳು, ಇನ್ನುಳಿದ ಶಿಕ್ಷಣ ಸಂಸ್ಥೆಗಳಿಗೆ ತೆರಳುವ ಮಕ್ಕಳಿಗೂ ಅನುಕೂಲವಾಗಲಿದೆ. ಕೆಲವರು ನಿಗದಿತ ಸಮಯಕ್ಕೆ ಬಸ್‌ ಇಲ್ಲದೆ ಕುಂದಾಪುರಕ್ಕೆ ಹೋಗಿ ಶಂಕರನಾರಾಯಣಕ್ಕೆ, ಮತ್ತೆ ಕೆಲವರು ಸಿದ್ದಾಪುರಕ್ಕೆ ತೆರಳಿ ಶಂಕರನಾರಾಯಣಕ್ಕೆ ಸುತ್ತು ಬಳಸಿ ಬರುತ್ತಿದ್ದರು.

Join our Whatsapp group by clicking the below link 👇👇

https://chat.whatsapp.com/KfUmhXQKZb114i4QHNvqEK 

Vishwa News 24

Recent Posts

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ – vishwanews24

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ ಸುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು…

19 hours ago

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆಯನ್ನು ತಿರುಚಲಾಗಿದೆ : ಸಿಎಂ  – vishwanews24

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆ ತಿರುಚಲಾಗಿದೆ : ಸಿಎಂ  ಬೆಂಗಳೂರು: ನನಗೆ ಮದ…

19 hours ago

ಎಚ್ಚರ ತಪ್ಪಿದರೆ ಎಂಆರ್‌ಪಿಎಲ್ ಯಾವತ್ತಿಗೂ ಜೀವಂತ ಜ್ವಾಲಾಮುಖಿ: ಸತ್ಯಜಿತ್ ಸುರತ್ಕಲ್ – vishwanews24

ಎಂಆರ್‌ಪಿಎಲ್‌ ಜೀವಂತ ಜ್ವಾಲಾಮುಖಿಯಾಗದಂತೆ ಎಚ್ಚರ ವಹಿಸಿ: ಸತ್ಯಜಿತ್ ಸುರತ್ಕಲ್ ಮಂಗಳೂರು: ಎಂಆರ್‌ಪಿಎಲ್‌ನಂತಹ ಸಂಸ್ಥೆ ಕರಾವಳಿಯಲ್ಲಿರುವುದು ಹೆಮ್ಮೆಯ ವಿಚಾರವಾದರೂ, ಆಡಳಿತ ವರ್ಗ…

20 hours ago

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ – vishwanews24

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ…

20 hours ago

ಕಾರ್ಕಳ: ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ – vishwanews24

ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ನೇಣು ಬಿಗಿದು ಆತ್ಮಹತ್ಯೆ ಕಾರ್ಕಳ: ಜೋಡು ರಸ್ತೆಯ ಅಪಾರ್ಟ್‌ಮೆಂಟ್ ಕಟ್ಟಡದ ಕೆಳಭಾಗದಲ್ಲಿ ಉದ್ಯಮಿ ಮಂಜುನಾಥ್…

21 hours ago

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ – vishwanews24

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ ಬೆಂಗಳೂರು:…

21 hours ago