Featured

ಕುಂದಾಪುರ : ಯಾವುದೇ ಪಕ್ಷದವರು ಯಾವುದೇ ಜಾತಿಯವರು ಆಗಿದ್ದರು ಕೂಡ ಮನೆಯಲ್ಲೊಂದು ಭಗವಧ್ವಜ ಇರಲಿ, ಹೆಗಲ ಮೇಲೆ ಕೇಸರಿ ಶಾಲಿರಲಿ.. : ವಾಗ್ಮಿ ಚೈತ್ರಾ ಕುಂದಾಪುರ – Vishwanews24

ಧರ್ಮರಕ್ಷಣೆಗಾಗಿ ಪ್ರಾಣ ಕೊಟ್ಟ ಪ್ರತಿ ಹಿಂದೂ ಕಾರ್ಯಕರ್ತರ ಬದಲಿಗೆ ಸಾವಿರಾರು ಕಾರ್ಯಕರ್ತರು ಹುಟ್ಟಿಕೊಂಡಿದ್ದಾರೆ..

ನಾವು ಜೈ ಶ್ರೀರಾಮ್ ಹೇಳುವ ಬಾಯಲ್ಲಿಯೇ ಜೈ ಭೀಮ್ ಎಂದು ಗರ್ವದಿಂದ ಹೇಳುತ್ತೇವೆ..

ಜಾತಿ ಹೆಸರಲ್ಲಿ ಹಿಂದೂ ಸಮಾಜವನ್ನು ವಿಭಜಿಸಲು ಆಗಲ್ಲ..

ಕುಂದಾಪುರ : ಧರ್ಮರಕ್ಷಣೆಗಾಗಿ ಪ್ರಾಣ ಕೊಟ್ಟ ಪ್ರತಿ ಹಿಂದೂ ಕಾರ್ಯಕರ್ತರ ಬದಲಿಗೆ ಸಾವಿರಾರು ಕಾರ್ಯಕರ್ತರು ಹುಟ್ಟಿಕೊಂಡಿದ್ದಾರೆ. ಕೈಯಲ್ಲಿರುವ ಪಂಜು ಆರಿದರೂ ಹೃದಯದಲ್ಲಿನ ಕಿಚ್ಚು ಆರುವುದಿಲ್ಲ. ಹಿಂದುತ್ವಕ್ಕಾಗಿ ನಡೆದ ಬಲಿದಾನ ವ್ಯರ್ಥವಾಗಲ್ಲ. ನಮ್ಮನ್ನು ಜೈ ಭೀಮ್ ಹೆಸರಿನಲ್ಲಿ ಒಡೆಯಲು ಸಾಧ್ಯವಿಲ್ಲ. ನಾವು ಜೈ ಶ್ರೀರಾಮ್ ಹೇಳುವ ಬಾಯಲ್ಲಿಯೇ ಜೈ ಭೀಮ್ ಎಂದು ಗರ್ವದಿಂದ ಹೇಳುತ್ತೇವೆ. ನಮಗೆ ರಾಮ, ಭೀಮರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ರಾಮನು ನಮ್ಮವನೆ ಭೀಮನು ನಮ್ಮವನೆ ಎಂಬ ಕಲ್ಪನೆಯನ್ನು ಸಮಾಜಕ್ಕೆ ತಿಳಿಸಿದ್ದೇವೆ. ಜಾತಿ ಹೆಸರಲ್ಲಿ ಹಿಂದೂ ಸಮಾಜವನ್ನು ವಿಭಜಿಸಲು ಆಗಲ್ಲ ಎಂದು ವಾಗ್ಮಿ ಚೈತ್ರಾ ಕುಂದಾಪುರ ಹೇಳಿದರು.

ಭಜರಂಗದಳ ಕಾರ್ಯಕರ್ತ ಹರ್ಷ ಹಿಂದೂ ಹತ್ಯೆ ಖಂಡಿಸಿ, ಮತ್ತು ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ಹಿಂದೂ ಬಳಗ ನಾವುಂದ, ಮರವಂತೆ, ಕಿರಿಮಂಜೇಶ್ವರ, ನಾಡ ವಲಯದ ವತಿಯಿಂದ ಬೈಂದೂರು ತಾಲೂಕಿನ ಮರವಂತೆ ಶ್ರೀ ರಾಮಮಂದಿರ ಮರವಂತೆಯಿಂದ ಅರೆಹೊಳೆ ಕ್ರಾಸ್ ನಂದಿಕೇಶ್ವರ ದೇವಸ್ಥಾನದವರೆಗೆ ಬೃಹತ್ ಪಂಜಿನ ಮೆರವಣಿಗೆ ಜರುಗಿದ್ದು ಬಳಿಕ ನಡೆದ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದರು.

ನಾವು ಆರಾಧಿಸುವ ದೇವದೇವತೆಗಳ ಕೈಯಲ್ಲಿ ಶಸ್ತ್ರವಿದೆ. ಧರ್ಮದ ರಕ್ಷಣೆಗೆ ಶಾಸ್ತ್ರ ಓದುವ ಜೊತೆಗೆ ಶಸ್ತ್ರ ಹಿಡಿಯುವ ಅನಿವಾರ್ಯತೆಯಿದೆ. ಕೆಲವರ ಸಾವುಗಳು ಇನ್ನು ಸಾವಿರ ಮಂದಿ ಹುಟ್ಟಲು ಕಾರಣವಾಗುತ್ತದೆ. ಹಿಂದೂ ಸಮಾಜ ನಾಶ ಮಾಡಲು ಜಿಹಾದಿಗಳು ಮುಂದಾಗಿದ್ದಾರೆ. ಹೆದರಿಸುವ ಮಂದಿಗೆ ತಕ್ಕ ಉತ್ತರ ಕೊಡಲು ಸಿದ್ಧರಾಗಬೇಕು. ಯಾವುದೇ ಪಕ್ಷದವರು ಯಾವುದೇ ಜಾತಿಯವರು ಆಗಿದ್ದರು ಕೂಡ ಮನೆಯಲ್ಲೊಂದು ಭಗವಧ್ವಜ ಇರಲಿ. ಹೆಗಲ ಮೇಲೆ ಕೇಸರಿ ಶಾಲಿರಲಿ. ಇದರಿಂದ ಧರ್ಮ ರಕ್ಷಣೆ ಸಾಧ್ಯ ಎಂದು ಅವರು ಕರೆಕೊಟ್ಟರು.

ನಿವೃತ್ತ ಶಿಕ್ಷಕ ಸುಬ್ಬಣ್ಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮರವಂತೆ ರಾಮಮಂದಿರದಲ್ಲಿ ವಾಸು ಖಾರ್ವಿ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದರು. ನಿತ್ಯಾನಂದ ಉಪ್ಪುಂದ, ಅಕ್ಷಯ್ ತೆಗ್ಗರ್ಸೆ ಪ್ರಾರ್ಥಿಸಿದರು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago