Featured

ಕುಂದಾಪುರ: ವಿಧಾನ ಪರಿಷತ್ ಚುನಾವಣೆ : ಬಹುಮತದೊಂದಿಗೆ ಆಯ್ಕೆಯಾಗುವ ವಿಶ್ವಾಸವಿದೆ : ಕೋಟ ಶ್ರೀನಿವಾಸ ಪೂಜಾರಿ – Vishwanews24

ಕುಂದಾಪುರ: ವಿಧಾನ ಪರಿಷತ್ ಚುನಾವಣೆ : ಬಹುಮತದೊಂದಿಗೆ ಆಯ್ಕೆಯಾಗುವ ವಿಶ್ವಾಸವಿದೆ ..

ಬಿಜೆಪಿಗೆ 3500 ಕ್ಕೂ ಅಧಿಕ ಮತವಿದ್ದು ಎಲ್ಲಾ ಮತ ನಮಗೆ ಸಿಗಲಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ.. : ಕೋಟ ಶ್ರೀನಿವಾಸ ಪೂಜಾರಿ – Vishwanews24

ಕುಂದಾಪುರ:  ಹಾಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ದ.ಕ ಹಾಗೂ ಉಡುಪಿ ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದು ಮತದಾನ ಪೂರ್ವ ಬಿಜೆಪಿ ಮುಖಂಡ ರಾಜೇಶ್ ಉಡುಪ ಅವರ ಕೋಟೇಶ್ವರದ ನಿವಾಸಕ್ಕೆ ಶುಕ್ರವಾರ ಬೆಳಿಗ್ಗೆ ಆಗಮಿಸಿದ ಅವರು ಕೋಟೇಶ್ವರ ಗ್ರಾಮಪಂಚಾಯತ್’ನಲ್ಲಿ ಬಿಜೆಪಿ‌ ಬೆಂಬಲಿಸುವ 22 ಮತದಾರರನ್ನು ಭೇಟಿ ಮಾಡಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಕಾರ್ಯಕರ್ತರು, ಪಕ್ಷವನ್ನು ಬೆಂಬಲಿಸುವ ಪಕ್ಷೇತರರು, ಇತರ ಪಕ್ಷದ ಸದಸ್ಯರ ಕೂಡ ಬೆಂಬಲಿಸುವ ನಿರೀಕ್ಷೆಯಿದ್ದು ಬಹುಮತದೊಂದಿಗೆ ಆಯ್ಕೆಯಾಗುವ ವಿಶ್ವಾಸವಿದೆ. ಬಿಜೆಪಿಗೆ 3500 ಕ್ಕೂ ಅಧಿಕ ಮತವಿದ್ದು ಎಲ್ಲಾ ಮತ ನಮಗೆ ಸಿಗಲಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದರು.

ಪಂಚಾಯತ್ ದಿನಾಚರಣೆಯನ್ನು ಆಚರಿಸುವ ಚಿಂತನೆಯಿದ್ದರೂ ಕೂಡ ಕೋವಿಡ್ ಕಾರಣಕ್ಕಾಗಿ ಎರಡು ವರ್ಷದಿಂದ ಆಗಿರಲಿಲ್ಲ. ಆದರೆ ಪಂಚಾಯತ್ ಸಬಲೀಕರಣಕ್ಕಾಗಿ ಗ್ರಾ.ಪಂ ಸದಸ್ಯರ ಗೌರವ, ಗೌರವ ಧನವನ್ನು ಹೆಚ್ಚಿಸಲು, ಗ್ರಾಮಪಂಚಾಯತ್ ಗೆ ಸಂಬಂಧಿಸಿದ ಆಡಳಿತಾತ್ಮಕ‌ ನಿರ್ಧಾರಗಳನ್ನು‌ ಕೈಗೊಳ್ಳಲು ಬೇಕಾದ ಕ್ರಮಕೈಗೊಳ್ಳಲಾಗುತ್ತದೆ. ಜನನ ಮರಣ ದೃಢೀಕರಣ ಪತ್ರ, ಸಂಧ್ಯಾಸುರಕ್ಷಾ, ಮನಸ್ವಿನಿ, ಅಂಗವಿಕಲ, ವೃದ್ಧಾಫ್ಯ ವೇತನ ಮೊದಲಾದವುಗಳನ್ನು ಗ್ರಾಮಪಂಚಾಯತಿಯಲ್ಲೇ ಮಾಡಲು ವ್ಯವಸ್ಥೆ ಅನುಷ್ಟಾನಗೊಳಸಲು ಸಾಧಕ ಬಾಧಕ ಪರಾಮರ್ಷಿಸಿ ಸರಕಾರದ ಗಮನಕ್ಕೆ ತರುವ ಅನಿವಾರ್ಯತೆಯಿದೆ. ಸಿಬ್ಬಂದಿಗಳ ದರ್ಜೆಗಳ ಬಗ್ಗೆಯೂ ಜಿಜ್ಞಾಸೆಯಿದ್ದು ಮುಂದಿನ ದಿನಗಳಲ್ಲಿ ಗ್ರಾ.ಪಂ ಸರಕಾರದಂತೆ ಕಾರ್ಯ ನಿರ್ವಹಿಸುವಂತೆ ಮಾಡುವ ಇರಾದೆಯಿದೆ ಎಂದರು.

ಈ ಸಂದರ್ಭ ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಸತೀಶ್ ಪೂಜಾರಿ ವಕ್ವಾಡಿ, ಕೋಟೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷ ಕೃಷ್ಣ ಗೊಲ್ಲ, ಉಪಾಧ್ಯಕ್ಷೆ ರಾಗಿಣಿ, ಮಾಜಿ ಅಧ್ಯಕ್ಷ ಉದಯ ನಾಯಕ್, ಮುಖಂಡ ನಾಗರಾಜ ಆಚಾರ್ ಕೋಣಿ ಮೊದಲಾದವರಿದ್ದರು.

Vishwa News 24

Recent Posts

ಎಂಆರ್‌ಪಿಎಲ್‌ ನಲ್ಲಿ ಭಾರೀ ಸ್ಫೋಟ : ಓರ್ವನ ಮೃತದೇಹ ಪತ್ತೆ -vishwanews24

ಎಂಆರ್‌ಪಿಎಲ್‌ ನಲ್ಲಿ ಭಾರೀ ಸ್ಫೋಟ : ಸುಟ್ಟು ಕರಕಲಾದ ಸ್ಥಿತಿಯಲ್ಲಿ ಓರ್ವನ ಮೃತದೇಹ ಪತ್ತೆ ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಬುಧವಾರ ಮಧ್ಯಾಹ್ನದ…

12 hours ago

MRPLನಲ್ಲಿ ಭಾರೀ ಸ್ಫೋಟ : ಎಂಟು ಮಂದಿಗೆ ಗಾಯ: ಪೊಲೀಸ್ ಕಮಿಷನರ್ -vishwanews24

MRPLನಲ್ಲಿ ಭಾರೀ ಸ್ಫೋಟ : ಎಂಟು ಮಂದಿಗೆ ಗಾಯ ಘಟನಾ ಸ್ಥಳದಲ್ಲಿ ಮಹಿಳಾ ಸಿಬ್ಬಂದಿ ಹಾಜರಿರಲಿಲ್ಲ ಹಾಗೂ ಗಾಯಗೊಂಡಿಲ್ಲ :…

19 hours ago

ಬಂಟ್ವಾಳ: ದನಗಳನ್ನು ಸಾಗಿಸುತ್ತಿದ್ದ ಲಾರಿ ವಶಕ್ಕೆ  -vishwanews24

ಬಂಟ್ವಾಳ: ದನಗಳನ್ನು ಸಾಗಿಸುತ್ತಿದ್ದ ಲಾರಿ ವಶಕ್ಕೆ  ಬಂಟ್ವಾಳ: ಕಲ್ಲಡ್ಕ ಫ್ಲೈಓವರ್ ಮೇಲೆ ದನಗಳನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು…

19 hours ago

ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ; -vishwanews24

ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ.. ಬೈಕಂಪಾಡಿ, ಸುರತ್ಕಲ್, ಜೋಕಟ್ಟೆಯಲ್ಲಿ ಕಂಪಿಸಿದ ಕಟ್ಟಡಗಳು ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ…

19 hours ago

ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ -vishwanews24

ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಕುಂದಾಪುರ : ಪತ್ನಿಗೆ…

21 hours ago

ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು -vishwanews24

ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು ಕಾಪು : ಕಾಪು ಫ್ಲೈಓವರ್ ಬಳಿ ಶನಿವಾರ…

21 hours ago