Featured

ಕುಂದಾಪುರ : ಶವಸಂಸ್ಕಾರಕ್ಕೆ ವಿನೂತನ ದಹನ ಯಂತ್ರ : ಮುದೂರಿಗೆ ಬಂತು ‘ಸಂಚಾರಿ ಸ್ಮಶಾನ – Vishwanews24

ಕುಂದಾಪುರ : ಶವಸಂಸ್ಕಾರಕ್ಕೆ ವಿನೂತನ ದಹನ ಯಂತ್ರ : ಮುದೂರಿಗೆ ಬಂತು ‘ಸಂಚಾರಿ ಸ್ಮಶಾನ

ಕುಂದಾಪುರ: ಜಡ್ಕಲ್‌ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಮಶಾನದ ಕೊರತೆಗೊಂದು ಶಾಶ್ವತ ಪರಿಹಾರ ಈವರೆಗೆ ಲಭಿಸಿಲ್ಲ. ಗ್ರಾಮಸ್ಥರಿಗೆ ಶವಸಂಸ್ಕಾರಕ್ಕೆ ಅನನುಕೂಲವಾಗಿರುವ ಈ ದಿಸೆಯಲ್ಲಿ ಆರಂಭಗೊಂಡಿರುವ ಸಂಚಾರಿ ಸ್ಮಶಾನ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಅನುಕೂಲವಾಗಬಹುದೆಂಬ ನಿರೀಕ್ಷೆ ಜನಸಾಮಾನ್ಯರಲ್ಲಿ ಮೂಡಿದೆ.

ಅನೇಕ ಕಡೆ ಬಹುತೇಕ ಮಂದಿಗೆ ಎಕರೆಗಟ್ಟಲೆ ತೆಂಗು-ಕಂಗು, ಮಾವುಗಳ ಪ್ಲಾಂಟೇಶನ್‌ ಇದ್ದರೆ ಇನ್ನಿತರ ಕಡೆ ವಾಸವಾಗಿರುವವರಿಗೆ ಸೂರು ಕಟ್ಟಿಕೊಳ್ಳುವಷ್ಟು ಮಾತ್ರ ಜಾಗವಿದ್ದು ಮಿಕ್ಕುಳಿದ ಪ್ರದೇಶ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಸ್ವಾಮ್ಯದಲ್ಲಿದೆ, ಕೇವಲ 2-3 ಸೆಂಟ್ಸ್‌ ಜಾಗದಲ್ಲಿ ಮನೆ ಕಟ್ಟಿಕೊಂಡಿರುವವರು ಸಾವನ್ನಪ್ಪಿದವರ ಅಂತ್ಯಕ್ರಿಯೆಗೆ ವ್ಯವಸ್ಥೆಗೆ ಜಾಗವಿಲ್ಲದೆ ಮನೆಯಂಗಳವನ್ನೇ ಬಳಸಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗೊಂದು ಉದಾಹರಣೆ ಹಾಗೂ ಸಂದರ್ಭ ಮುದೂರು ಗ್ರಾಮದಲ್ಲಿ ನಡೆದ ಘಟನೆ ದೇಶವ್ಯಾಪ್ತಿ ಸುದ್ದಿಯಾಗಿತ್ತು.

ಸಂಚಾರಿ ಸ್ಮಶಾನ ಆರಂಭ
ಮರಣ ಹೊಂದಿದವರನ್ನು ದಹಿಸುವ ವಿನೂತನ ಮಾದರಿಯ ಯಂತ್ರ ಬಳಕೆಯ ಕ್ರಮ ಕೇರಳದಲ್ಲಿ ರೂಢಿಯಲ್ಲಿದ್ದು, ಇದೀಗ ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘವು ಇಲ್ಲಿ ಕೂಡ ಅದನ್ನು ಪರಿಚಯಿಸಿದೆ. 7 ಅಡಿ ಉದ್ದ , 2 ಅಡಿ ಅಗಲ, 4 ಅಡಿ ಎತ್ತರದ ಈ ಶವ ದಹನ ಯಂತ್ರವು ಗ್ರಾಸ್‌ ವಿದ್ಯುತ್‌ ಮೂಲಕ ಬಳಸಲಾಗುತ್ತಿದೆ.

ಯಂತ್ರದ ಒಳಭಾಗದಲ್ಲಿರುವ ಚೇಂಬರ್‌ ಮೇಲೆ ಶವ ಇಟ್ಟು ಕರ್ಪೂರವನ್ನು ಹಚ್ಚಿ ಮೇಲ್ಭಾಗವನ್ನು ಮುಚ್ಚಿ ಗ್ಯಾಸ್‌ ಸಂಪರ್ಕ ನೀಡಿದರೆ ಕ್ಷಣಾರ್ಧದಲ್ಲಿ ದಹನ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ವಾಯುಮಾಲಿನ್ಯ ರಹಿತವಾಗಿ ಪರಿಸರ ಸ್ನೇಹಿಯಾಗಿ ಈ ಯಂತ್ರ ಕಾರ್ಯಾಚರಿಸುತ್ತದೆ.

ಒಂದು ಶವಸಂಸ್ಕಾರಕ್ಕೆ 10 ಕಿಲೋ ಗ್ಯಾಸ್‌, 100 ಗ್ರಾಮ್‌ ಕರ್ಪೂರ ಬಳಕೆಯಾಗುತ್ತದೆ. ಸುಮಾರು 5 ಲಕ್ಷ 80 ಸಾವಿರ ರೂ. ವೆಚ್ಚದ ಸಂಚಾರಿ ಶವಪೆಟ್ಟಿಗೆಯನ್ನು ಕೇರಳದ ಖಾಸಗಿ ಕಂಪೆನಿಯೊಂದು ನಿರ್ಮಿಸಿದೆ. ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಈ ಭಾಗದ ಜನರ ಶವಸಂಸ್ಕಾರದ ಸಮಸ್ಯೆಗೊಂದು ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಘದ ಅಧ್ಯಕ್ಷ ಎಂ.ವಿಜಯಶಾಸ್ತ್ರೀ, ಉಪಾಧ್ಯಕ್ಷ ನಕ್ಷತ್ರ ಭೋವಿ, ನಿರ್ದೇಶಕರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ಸಕಾರಾತ್ಮಕ ಸ್ಪಂದನೆಯಿಂದಾಗಿ ಸಂಚಾರಿ ಶವಸಂಸ್ಕಾರ ಯಂತ್ರವನ್ನು ಮುದೂರಿಗೆ ಒದಗಿಸಿದೆ.

ಸೂಕ್ತ ಜಾಗ ಗುರುತು ಮಾಡಿ
ಮುದೂರು ಜಡ್ಕಲ್‌ ಗ್ರಾ.ಪಂ.ವ್ಯಾಪ್ತಿಯ ನಿವಾಸಿಗಳಿಗೆ ಸಂಚಾರಿ ಸ್ಮಶಾನ ಉಪಯೋಗಿಯಾಗಲಿದೆ. ಈ ಕ್ರಮಕ್ಕೆ ಜನ ಹೊಂದಿಕೊಳ್ಳಬೇಕಾಗಿದೆ. ಕಂದಾಯ
ಹಾಗೂ ಅರಣ್ಯ ಇಲಾಖೆ ಗ್ರಾ.ಪಂ.ಗೆ ಸೂಕ್ತ ಜಾಗ ಗುರುತು ಮಾಡಿ ಅವಕಾಶ ಕಲ್ಪಿಸಿದಲ್ಲಿ ಸಾರ್ವಜನಿಕ ರುದ್ರಭೂಮಿ ನಿರ್ಮಿಸಲು ಬದ್ಧರಾಗಿದ್ದೇವೆ.
-ವನಜಾಕ್ಷಿ ಶೆಟ್ಟಿ
ಅಧ್ಯಕ್ಷರು, ಗ್ರಾ.ಪಂ. ಜಡ್ಕಲ್‌

ರಾಜ್ಯದಲ್ಲೇ ಪ್ರಥಮ: ವ್ಯವಸಾಯ ಸೇವಾ ಸಹಕಾರಿ ಸಂಘವೊಂದು ತನ್ನೂರಿನ ಜನರ ಕಷ್ಟಕ್ಕೆ ಸ್ಪಂದಿಸಿ ಸಂಚಾರಿ ಸ್ಮಶಾನ ವ್ಯವಸ್ಥೆ ಮಾಡಿರುವುದು ರಾಜ್ಯದಲ್ಲೇ ಪ್ರಥಮ ಎನ್ನಲಾಗಿದೆ. ಸಂಘದ ಅಧ್ಯಕ್ಷ ಎಂ. ವಿಜಯ ಶಾಸ್ತ್ರಿ, ಉಪಾಧ್ಯಕ್ಷ ನಕ್ಷತ್ರ ಬೋವಿ ಸಹಿತ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಪೂಜಾರಿಯವರು ಜನರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಹಿಂದಿನ ಸಮಸ್ಯೆ ತಮ್ಮೂರಿನಲ್ಲಿ ಮರುಕಳಿಸಬಾರದೆಂಬ ಕಾಳಜಿಯಲ್ಲಿ ಸಂಘದ ಮರಣ ನಿಧಿಯಲ್ಲಿ ಇದರ ವೆಚ್ಚ ಭರಿಸಲಾಗಿದ್ದು ಶವ ಸಂಸ್ಕಾರಕ್ಕಾಗಿ ಯಂತ್ರದ ಸಾಗಾಟ, ಗ್ಯಾಸ್ ಸಹಿತ ಇತರೆ ಖರ್ಚನ್ನು ಕೂಡ ಮುದೂರು ಸೊಸೈಟಿ ಭರಿಸಲಿದೆ.

Vishwa News 24

Recent Posts

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ – vishwanews24

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…

2 hours ago

ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿ ಇತಿಹಾಸವನ್ನು ದೇಶ ಮರೆತಿಲ್ಲ : ಬಿ.ಕೆ.ಹರಿಪ್ರಸಾದ್ – vishwanews24

ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…

2 hours ago

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ – vishwanews24

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…

3 hours ago

ವಿವಾಹಿತ ಮಹಿಳೆ  ಜತೆ ಲಿವ್ ಇನ್ ರಿಲೇಶನ್‌ ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  – vishwanews24

ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…

3 hours ago

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ – vishwanews24

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…

3 hours ago

ಭಾರತೀಯ ಸೇನಾ ಪಡೆಗಳ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ರಾಜಾ ಸುಬ್ರಮಣಿ ನೇಮಕ – VISHWAEWS24

ಭಾರತೀಯ ಸೇನಾ ಪಡೆಗಳ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ರಾಜಾ ಸುಬ್ರಮಣಿ ನೇಮಕ ಹೊಸದಿಲ್ಲಿ: ಲೆಫ್ಟಿನೆಂಟ್ ಜನರಲ್ (ನಿವೃತ್ತ) ಎನ್.ಎಸ್.…

3 hours ago