ಕುಂದಾಪುರ : ವಾರದ ಹಿಂದೆ ಬೀಜಾಡಿಯಲ್ಲಿ ಸಮುದ್ರಪಾಲಾಗಿದ್ದ ತುಮಕೂರು ತಿಪಟೂರು ಮೂಲದ ಟಿ.ಆರ್.ಯೋಗೀಶ್(23) ಎಂಬ ಯುವಕನ ಮೃತದೇಹವು ಇಂದು ಬೆಳಗ್ಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
ಜೂ.20ರಂದು ನಡೆಯಲಿದ್ದ ವಿವಾಹ ಕಾರ್ಯಕ್ರಮಕ್ಕೆ ಸ್ನೇಹಿತನ ಆಮಂತ್ರಣದಂತೆ ಯೋಗೀಶ್ ಹಾಗೂ ಸಂದೀಪ್ ಎಂಬವರು ತಿಪಟೂರಿನಿಂದ ಬೈಕಿನಲ್ಲಿ ಬೀಜಾಡಿಗೆ ಜೂ.19ರಂದು ಆಗಮಿಸಿದ್ದರು. ಸಂಜೆ ವೇಳೆ ಸಮುದ್ರದ ಬಳಿ ತೆರಳಿದ್ದ ಇವರು ನೀರಿಗಿಳಿದು ಆಡುತ್ತಿದ್ದರು. ಈ ವೇಳೆ ಇವರಿಬ್ಬರು ಅಲೆಗಳ ಅಬ್ಬರಕ್ಕೆ ಸಿಲುಕಿ ಕೊಚ್ಚಿಕೊಂಡು ಹೋದರು. ಇವರಲ್ಲಿ ಸಂದೀಪ್ ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು. ಆದರೆ ಯೋಗೀಶ್ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಆತನ ಸ್ನೇಹಿತನನ್ನು ಸ್ಥಳೀಯರು ಬಚಾವ್ ಮಾಡಿದ್ದರು. ಯೋಗೀಶ್ ಐಟಿಐ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.
ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಪ್ರೇತ ಮದುವೆ : ಸತ್ತು 25 ವರ್ಷ ಆದ್ಮೇಲೆ ಒಂದಾದ ಜೋಡಿ ತುಳುನಾಡಿನ ಸಾಂಪ್ರದಾಯಿಕ…
ಮಂಗಳೂರಿಗೆ ಆಗಮಿಸಿದ ಬಾಲಿವುಡ್ ನಟ ಶಾರುಖ್ ಖಾನ್ ಮಂಗಳೂರು: ನಗರದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಾಲಿವುಡ್ ನಟ ಶಾರುಖ್ ಖಾನ್…
ರಾಜ್ಯದ 13 ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ.. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಉಸ್ತುವಾರಿಯಾಗಿ…
ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ NCERT ಸ್ಪಷ್ಟನೆ ನವದೆಹಲಿ: 6ನೇ ತರಗತಿಯ ಕನ್ನಡ ಪಠ್ಯಪುಸ್ತಕ ‘ಕೃಷ್ಣ’ ಕುರಿತು ಎದ್ದಿರುವ ವಿವಾದಕ್ಕೆ NCERT(ರಾಷ್ಟ್ರೀಯ…
ಮುಲ್ಕಿ : ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ ; 4 ಕೆ.ಜಿ ಗಾಂಜಾ ವಶ ಮುಲ್ಕಿ:…
ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ ಬೆಂಗಳೂರು: 6ನೇ ತರಗತಿಗಾಗಿ ಎನ್‌ಸಿಇಆರ್‌ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ…