ಕುಂದಾಪುರ: ಕಳೆದ ನಲವತ್ತು ವರ್ಷಗಳಿಂದ ಹಾಲಾಡಿ ಶ್ರೀನಿವಾಸ ಶೆಟ್ಟರು ಮತ್ತು ನಾನು ಸ್ನೇಹಿತರು. ಈ ನಲವತ್ತು ವರ್ಷಗಳಲ್ಲಿ ಸಣ್ಣ ಅಸಹನೆಯೂ ನಮ್ಮಿಬ್ಬರಲ್ಲಿ ಬಂದಿಲ್ಲ. ಚುನಾವಣೆಯಿಂದ ಹಿಂದೆ ಸರಿಯುವ ಅವರ ಈ ನಿರ್ಧಾರವನ್ನು ನಾನು ನಿರೀಕ್ಷೆಯೇ ಮಾಡಿರಲಿಲ್ಲ ಎಂದು ಶಾಸಕ ಹಾಲಾಡಿಯವರ ಆಪ್ತ, ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿಯವರು ಹೇಳಿದರು.
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.
ಹಾಲಾಡಿಯವರು ಸ್ಪರ್ಧೆಯಿಂದ ಹಿಂದೆ ಸರಿದಿರುವ ಬಗ್ಗೆ ನಮ್ಮೊಳಗೆ ಯಾವುದೇ ಗೊಂದಲಗಳಿಲ್ಲ. ಅವರು ಭಾರತೀಯ ಜನತಾ ಪಾರ್ಟಿಯಲ್ಲಿಯೇ ಇದ್ದಾರೆ. ಭಾಜಪಕ್ಕಾಗಿಯೇ ಕೆಲಸ ಮಾಡುತ್ತಾರೆ. ಚುನಾವಣೆಗೆ ಸ್ಪರ್ಧೆ ಮಾತ್ರ ಇಲ್ಲ ಎಂದರು.
ಹಾಲಾಡಿಯವರು ಇದ್ದ ಚುನಾವಣೆಯೇ ಬೇರೆ. ಅವರ ಸ್ಪರ್ಧೆ ಇಲ್ಲದೇ ಇರುವ ಚುನಾವಣೆಯೇ ಬೇರೆ. ಎರಡೂ ವಿಭಿನ್ನ. ಅವರಿರುವಾಗ ನಮಗೆ ಮತ್ತು ಕಾರ್ಯಕರ್ತರಿಗೆ ಕೆಲಸ ಮಾಡುವ ಹುಮ್ಮಸ್ಸೇ ಬೇರೆ. ಇದೀಗ ನಮಗೆ ಹೊಸ ಸವಾಲು. ಹಾಲಾಡಿಯವರು ಸ್ಪರ್ಧೆಯಿಂದ ಹಿಂದೆ ಸರಿದಾಗ ನನಗೆ ನಿಜವಾಗಿಯೂ ನೋವಾಯಿತು. ಈ ಬಾರಿಯೂ ಅವರೇ ಸ್ಪರ್ಧಿಸುತ್ತಾರೆಂದು ನಾವು ತಯಾರಿ ಕೂಡ ಮಾಡಿಕೊಂಡಿದ್ದೆವು. ಹಾಲಾಡಿಯವರ ಐದು ಚುನಾವಣೆಯಲ್ಲಿ ನಾನು ಜೊತೆಗೆ ಇದ್ದವನು. ಐದು ಚುನಾವಣೆಯಲ್ಲಿ ಅವರ ಪರ ಕೆಲಸ ಮಾಡುವುದು ನಮಗೆ ಅತ್ಯಂತ ಸುಲಭವಾಗಿತ್ತು. ಐದು ವರ್ಷ ಅವರು ಜನರ ಕೆಲಸ ಮಾಡುತ್ತಾರೆ. ನಾವು ಅವರಿಗಾಗಿ ಚುನಾವಣೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇವೆ ಎಂದರು.
ಬೆಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಗೆ ಇಬ್ಬರೂ ಜೊತೆಯಾಗಿಯೇ ಹೋಗಿದ್ದೇವೆ. ಹನ್ನೊಂದು ಗಂಟೆಯ ರಾತ್ರಿಯವರೆಗೂ ಜೊತೆಯಾಗಿಯೇ ಇದ್ದೆವು. ಚುನಾವಣೆಯ ನಿರ್ಧಾರದ ಕುರಿತು ಏನು ಹೇಳಿರಲಿಲ್ಲ. ಬೆಳಿಗ್ಗೆ ಬನ್ನಿ ಎಂದು ತಿಳಿಸಿದ್ದರು. ಈ ನಿರ್ಧಾರದ ಬಗ್ಗೆ ಆಗಾಗೆ ನಮ್ಮೊಳಗೆ ಚರ್ಚೆಗಳು ನಡೆಯುತ್ತಿತು. ನಾವೆಲ್ಲರೂ ಈ ಬಾರಿ ನೀವೇ ನಿಲ್ಲಬೇಕು ಎಂದು ಒತ್ತಾಯಿಸಿದ್ದೆವು. ನನ್ನ ಸ್ಪರ್ಧೆ ಪಕ್ಷದ ತೀರ್ಮಾನಕ್ಕೆ ಬಿಟ್ಟಿದ್ದು. ಪಕ್ಷ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರೆ ತೆಗೆದುಕೊಳ್ಳುವೆ. ಕಾರ್ಯಕರ್ತನಾಗಿ ಕೆಲಸ ಮಾಡಲಿ ಎಂದರೂ ಮಾಡುವೆ ಎಂದರು.
ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…
ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…
ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…
ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…
ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…