Featured

ಕುಂದಾಪುರ : ಹೆದ್ದಾರಿ ಹೊಂಡಗಳ ಪರಿಣಾಮ ; ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿದ ಬಸ್  – Vishwanews24

ಕುಂದಾಪುರ : ಹೆದ್ದಾರಿ ಹೊಂಡಗಳ ಪರಿಣಾಮ ; ಚಾಲಕನ ನಿಯಂತ್ರಣ ತಪ್ಪಿ  ಡಿವೈಡರ್ ಏರಿದ ಬಸ್

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯ ಹೊಂಡಗಳ ಪರಿಣಾಮವಾಗಿ ಬಸ್ ಒಂದು ಹೊಂಡಕ್ಕಿಳಿದು ಚಾಲಕನ ನಿಯಂತ್ರಣ ತಪ್ಪಿ ಸೀದಾ ಡಿವೈಡರ್ ಮೇಲೆ ಏರಿದ ಘಟನೆ ನಡೆದಿದೆ.

ಕರಾವಳಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಇದರ ಬೆನ್ನಲ್ಲೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೊಂಡಗಳು ಇದೀಗ ಯಮಸ್ವರೂಪಿಯಾಗಲಾರಂಭಿಸಿವೆ. ಸುಮಾರು ಎರಡು ಅಡಿ ಹೊಂಡಕ್ಕೆ ಬಸ್‌ ಇಳಿದ ಪರಿಣಾಮ ಬಸ್‌ ಚಾಲಕನ ನಿಯಂತ್ರಣ ಕಳೆದುಕೊಂಡು 300 ಮೀಟರ್ ದೂರ ಡಿವೈಡರ್ ಮೇಲೆ ಚಲಿಸಿದ ಘಟನೆ ತಾಲೂಕಿನ ಕುಂಭಾಸಿ ಸಮೀಪದ ಕೊರವಡಿ ಕ್ರಾಸ್ ಬಳಿ ಶನಿವಾರ ನಡೆದಿದೆ.

ಮುಂಬೈನಿಂದ ಮಂಗಳೂರಿನತ್ತ ಸಾಗುತ್ತಿದ್ದ ಆನಂದ್ ಹೆಸರಿನ ಖಾಸಗಿ ಬಸ್ ಕುಂಭಾಸಿ ಸಮೀಪದ ಕೊರವಡಿ ಕ್ರಾಸ್ ಬಳಿ ಹೆದ್ದಾರಿ ಹೊಂಡಕ್ಕೆ ಬಸ್‌ ಟಯರ್ ಇಳಿದಾಗ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಸುಮಾರು 300 ಮೀಟರ್ ದೂರ ಡಿವೈಡರ್ ಏರಿ ಸಾಗಿದ್ದು, ಚಾಲಕನ ಜಾಗರುಕತೆಯಿಂದಾಗಿ ಪಲ್ಟಿಯಾಗುವುದು ತಪ್ಪಿದಂತಾಗಿದೆ. ಹೀಗೆ ಅಪಾಯದಲ್ಲಿ ಸಾಗಿದ ಬಸ್ ಕನ್ನುಕರೆ ಮಸೀದಿ ಎದುರು ಡಿವೈಡರ್ ಏರಿ ನಿಂತಿದೆ. ಬಸ್ಸಿನಲ್ಲಿ 40ಕ್ಕೂ ಅಧಿಕ ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.

Vishwa News 24

Recent Posts

ಮಂಗಳೂರು: ಕರಾವಳಿಯ ಮೀನುಗಾರ ಮುಖಂಡ , ಬಿಜೆಪಿ ಹಿರಿಯ ನಾಯಕ ರಾಮಚಂದ್ರ ಬೈಕಂಪಾಡಿ ನಿಧನ – vishwanews24

ಮಂಗಳೂರು: ಕರಾವಳಿಯ ಮೀನುಗಾರ ಮುಖಂಡ , ಬಿಜೆಪಿ ಹಿರಿಯ ನಾಯಕ ರಾಮಚಂದ್ರ ಬೈಕಂಪಾಡಿ ನಿಧನ ಮಂಗಳೂರು : ಕರಾವಳಿಯ ಪ್ರಭಾವಿ…

8 hours ago

ಮಂಗಳೂರು: ಯುವತಿ ನಾಪತ್ತೆ ; ಪ್ರಕರಣ ದಾಖಲು – vishwanews24

ಮಂಗಳೂರು: ಯುವತಿ ನಾಪತ್ತೆ ; ಪ್ರಕರಣ ದಾಖಲು ಮಂಗಳೂರು: ಮುಲ್ಕಿ ತಾಲೂಕು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಬಿಜಾಪುರ ಕಾಲನಿ ನಿವಾಸಿ…

8 hours ago

ಜೋಕಾಲಿ ಹಾಕಿದ್ದ ಸೀರೆ ಕೊರಳಿಗೆ ಸುತ್ತಿಕೊಂಡು 10 ವರ್ಷದ ಬಾಲಕಿ ಸಾವು – vishwanews24

ಮನೆಯಲ್ಲಿ ಜೋಕಾಲಿ ಹಾಕಿದ್ದ ಸೀರೆ ಕೊರಳಿಗೆ ಸುತ್ತಿಕೊಂಡು 10 ವರ್ಷದ ಬಾಲಕಿ ಸಾವು ಚಿಕ್ಕಮಗಳೂರು: ಮನೆಯಲ್ಲಿ ಜೋಕಾಲಿ ಹಾಕಿದ್ದ ಸೀರೆ…

8 hours ago

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ನಜೀರ್ ಅಹ್ಮದ್ – vishwanews24

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ನಜೀರ್ ಅಹ್ಮದ್ ಬೆಂಗಳೂರು : ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎಂಎಲ್‌ಸಿ…

8 hours ago

ಉಡುಪಿ: ಹೃದಯಾಘಾತದಿಂದ ಲೆಕ್ಕಪರಿಶೋಧಕ ನಿಧನ – vishwanews24

ಉಡುಪಿ: ಹೃದಯಾಘಾತದಿಂದ ಲೆಕ್ಕಪರಿಶೋಧಕ ನಿಧನ ಉಡುಪಿ: ಕುಕ್ಕಿಕಟ್ಟೆಯ ದಿನಸಿ ವ್ಯಾಪಾರಿ ದಿ. ಮರ್ತಪ್ಪ ಶೆಣೈ ಅವರ ಪುತ್ರ, ಲೆಕ್ಕಪರಿಶೋಧಕ ದೀಪಕ್…

8 hours ago

ಶಿರ್ವ : ಮಾನಸಿಕ ಖಿನ್ನತೆ ಹಿನ್ನೆಲೆ : ವ್ಯಕ್ತಿ ಆತ್ಮಹತ್ಯೆ – vishwanews24

ಶಿರ್ವ : ಮಾನಸಿಕ ಖಿನ್ನತೆ ಹಿನ್ನೆಲೆ : ವ್ಯಕ್ತಿ ಆತ್ಮಹತ್ಯೆ… ಶಿರ್ವ: ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರ್ವ ಗ್ರಾಮದ…

9 hours ago