ಕುಂದಾಪುರ: ಮುಂಬೈಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಉದ್ಯಮಿಯೋರ್ವರು ಕುಂದಾಪುರ ಹೇರಿಕುದ್ರು ಸೇತುವೆಯ ಮೇಲಿನಿಂದ ಪಂಚಗಂಗಾವಳಿ ಹೊಳೆಗೆ ಹಾರಿದ್ದು, ಇವರಮೃತದೇಹ ಹೆಮ್ಮಾಡಿ ಸಮೀಪದ ಬುಗ್ರಿಕುಡು ಎಂಬಲ್ಲಿ ಸೋಮವಾರಾರ ಮುಂಜಾನೆ ಪತ್ತೆಯಾಗಿದೆ.
ಮೃತರನ್ನು ಸ್ಥಳಿಯ ಚಿಕನ್‌ಸಾಲ್ ರಸ್ತೆಯ ನಿವಾಸಿ ಕೆ.ಜಿ. ಗಣೇಶ್(೪೯) ಗುರ್ತಿಸಲಾಗಿದೆ. ಭಾನುವಾರ ಸಂಜೆ ಸುಮಾರಿಗೆ ರಿಕ್ಷಾದಲ್ಲಿ ಬಂದ ಅವರು ಸೇತುವೆ ಮೇಲೆ ಇಳಿದಿದ್ದರು. ತನ್ನ ಆಧಾರ್ ಕಾರ್ಡ್ ಮತ್ತು ಪರ್ಸನ್ನು ಸೇತುವೆ ದಂಡೆ ಮೇಲಿರಿಸಿ ಏಕಾಏಕಿ ನದಿಗೆ ಧುಮುಕ್ಕಿದ್ದರು. ಇದನ್ನು ಕಂಡ ಸಾರ್ವಜನಿಕರ್‍ಯಾರೋ ಬೊಬ್ಬಿರಿದಿದ್ದು, ಕೂಡಲೇ ಸೇರಿದ ಸಾರ್ವಜನಿಕರು ಅವರ ಹುಡುಕಾಟಕ್ಕೆ ತೊಡಗಿದ್ದರು. ಮಾಹಿತಿ ಪಡೆದು ಆಗಮಿಸಿದ ಅಗ್ನಿಶಾಮಕ ದಳದವರೂ ಸಹಾ ಹೊಳೆಯಲ್ಲಿ ಹಲವು ಸುತ್ತಿನ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಇಂದು ಮುಂಜಾನೆ ಶವ ಪತ್ತೆಯಾಗಿದೆ.
ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…
ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…
ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…
ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…
ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…
ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…