ಮಂಗಳೂರು: ನಗರದಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ ಶಾರೀಕ್ ಗುರುತು ಪತ್ತೆ ಹಚ್ಚಲು ತಡರಾತ್ರಿ ಶಿವಮೊಗ್ಗದಿಂದ ಮಂಗಳೂರಿಗೆ ಆತನ ಪೋಷಕರನ್ನು ಪೊಲೀಸರು ಕರೆತಂದಿದ್ದಾರೆ.
ಮಂಗಳೂರಿನ ಕಂಕನಾಡಿ ಆಸ್ಪತ್ರೆಯಲ್ಲಿ ಶಾರೀಕ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಶೇ.40 ರಷ್ಟು ಶಾರೀಕ್ ದೇಹ ಸುಟ್ಟು ಹೋಗಿದ್ದು, ಮಂಗಳೂರಿನ ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾನೆ. ಮುಖ ಬಾವು ಬಂದಿದ್ದ ಕಾರಣ ಪೊಲೀಸರಿಗೆ ಗುರುತು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅನುಮಾನದ ಹಿನ್ನೆಲೆಯಲ್ಲಿ ಶಾರೀಕ್ ಹೆತ್ತವರನ್ನು ಕರೆಸಿದ್ದಾರೆ. ಪೋಷಕರಿಗೂ ಶಾರೀಕ್ ಗುರುತು ಪತ್ತೆಯಾಗಲಿಲ್ಲ ಎಂದರೆ ಕೊನೆಗೆ ಡಿಎನ್‍ಎ ಟೆಸ್ಟ್ ಮಾಡಿಸುವ ಸಾಧ್ಯತೆ ಇದೆ.
ಬೆಳ್ತಂಗಡಿ: ಟ್ರಕ್‌ಗೆ ಗೂಡ್ಸ್ ವಾಹನ ಢಿಕ್ಕಿ : ಮೂವರಿಗೆ ಗಾಯ, ಆಸ್ಪತ್ರೆಗೆ ದಾಖಲು – Vishwanews24
ಸದ್ಯ ಮಂಗಳೂರಿನಲ್ಲೇ ಬೀಡು ಬಿಟ್ಟಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು, ಶಾರೀಕ್ ಹೆತ್ತವರನ್ನೂ ವಿಚಾರಣೆ ನಡೆಸಲಿದ್ದಾರೆ. ನಿನ್ನೆಯಿಂದ ಶಾರೀಕ್ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಇದೀಗ ಮಾತನಾಡುವ ಸ್ಥಿತಿಯಲ್ಲಿ ಶಾರೀಕ್ ಇದ್ದಾನೆ. ಹೀಗಾಗಿ ಇಂದು ಪೊಲೀಸರಿಂದ ಶಾರೀಕ್ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ ಲಷ್ಕರ್ ಎ ತೋಯ್ಬಾ ಪರ ಗೋಡೆ ಬರಹ ಬರೆದಿದ್ದ ಶಾರೀಕ್, ಇತ್ತೇಚೆಗೆ ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನವಾದ ಬಳಿಕ ತಲೆಮರೆಸಿಕೊಂಡಿದ್ದನು.
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…
ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…
ಅಕ್ರಮ ಎಸ್‌ಐಆರ್ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು : ಶೋಭಾ ಕರಂದ್ಲಾಜೆ ಗಂಭೀರ…
ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…
ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…