ಬೆಂಗಳೂರು: ಕುಮಾರಸ್ವಾಮಿ ಈಗಲೂ ನನ್ನ ಸ್ನೇಹಿತರು, ಮುಂದೆಯೂ ನನ್ನ ಸ್ನೇಹಿತರು. ನಾನು ಯಾರನ್ನೂ ದ್ವೇಷ ಮಾಡಲ್ಲ, ಅವರ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಬಂಡೆನೂ ಅಲ್ಲ, ಮರಳು ಅಲ್ಲ, ಜಲ್ಲಿಯೂ ಅಲ್ಲ. ಉಪಯೋಗಿಸಿಕೊಂಡಿದ್ದಾರೆ ಬಿಡಿ ಎಂದು ಸದಾಶಿವನಗರ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಈ ಇಸ್ ಮೈ ಗುಡ್ ಫ್ರೆಂಡ್, ಟುಡೇ ಆಲ್ಸೋ… ಟುಮಾರೋ ಆಲ್ಸೋ…’ ಎಂದು ಕುಮಾರಸ್ವಾಮಿ ಕುರಿತು ಡಿಕೆಶಿ ಹೇಳಿದ್ದಾರೆ. ‘ಸಂಪದ್ಭರಿತ ಖಾತೆ ಕಾರಣಕ್ಕಾಗಿ ಸಮ್ಮಿಶ್ರ ಸರ್ಕಾರ ಇರಬೇಕು ಎಂದು ಡಿಕೆಶಿ ಬಯಸಿದ್ರು’ ಎಂದಿದ್ದ ಎಚ್ಡಿಕೆ ಮಾತಿಗೆ ಸದಾಶಿವನಗರ ನಿವಾಸದಲ್ಲಿ ತಿರುಗೇಟು ನೀಡಿದ ಶಿವಕುಮಾರ್, ‘ಅವರನ್ನೇಕೆ ಹಳೇ ದೋಸ್ತಿ ಅಂತೀರಾ? ನಾನು ದ್ವೇಷ ಮಾಡಲ್ಲ, ಎಲ್ಲ ಬಿಟ್ಟುಬಿಟ್ಟಿದ್ದೀನಿ. ಕುಮಾರಸ್ವಾಮಿ ಈಗಲೂ ನನ್ನ ಸ್ನೇಹಿತರು, ಮುಂದೆಯೂ ನನ್ನ ಸ್ನೇಹಿತರು’ ಎಂದರು.
ನಾನು ಬಂಡೆಯೂ ಅಲ್ಲ, ಮರಳೂ ಅಲ್ಲ, ಜಲ್ಲಿಯೂ ಅಲ್ಲ. ಆದರೂ ಉಪಯೋಗಿಸಿಕೊಂಡಿದ್ದಾರೆ ಎಂದ ಡಿಕೆಶಿ, ನನಗ್ಯಾಕೆ ನೋವಾಗಬೇಕು? ಜೆಡಿಎಸ್ ಬಗ್ಗೆ ನಾನೇಕೆ ಮಾತಾಡಲಿ? ಅವರದ್ದು ಒಂದು ಪಕ್ಷ, ಅವರನ್ನೇಕೆ ಡಿಗ್ರೇಡ್ ಮಾಡೋದು ಹೇಳಿ… ಸಿಎಂ ಮತ್ತು ಅವರ ಅಡ್ಜೆಸ್ಮೆಂಟ್ ಏನೇನಿದೆಯೋ ಗೊತ್ತಿಲ್ಲ ಎಂದು ಮಾತಿನಲ್ಲೇ ತಿವಿದರು.
ಸರ್ಕಾರದ ಬಳಿ ಪಂಡಿತರಿದ್ದಾರೆ, ಬಹಳ ದೊಡ್ಡ ದೊಡ್ಡ ತಜ್ಞರಿದ್ದಾರೆ. ಸರ್ಕಾರ ನಮ್ಮ ಮಾತು, ಸಲಹೆಯನ್ನಂತೂ ಕೇಳುವುದಿಲ್ಲ. ಏನೇ ಗಲಾಟೆಯಾಗಲಿ ಕಾಂಗ್ರೆಸ್ ನವರೇ ಕಾರಣ ಎನ್ನುತ್ತಾರೆ. ಸರ್ಕಾರಕ್ಕೆ ಕೋವಿಡ್ ವಿಚಾರದಲ್ಲೂ ಹಿಡನ್ ಅಜೆಂಡಾ ಇದೆ. ನಾನು ತಜ್ಞರ ಜೊತೆ ಚರ್ಚೆ ಮಾಡಿ ಮುಂದೆ ಮಾತನಾಡುತ್ತೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಸಿಎಂ ಅಭಿನಂದನೆ : ನೇರ ನೇಮಕಾತಿ , ನಗದು ಪುರಸ್ಕಾರ ಭಾರೀ ಹೆಚ್ಚಳ ಬೆಂಗಳೂರು:…
ನಕಲಿ ಔಷಧಿ ಖರೀದಿಸಿ ಮಾರಾಟ ಮಾಡಿದ್ದ ಫಾರ್ಮಾಗಳ ಮೇಲೆ SIT ದಾಳಿ; ನಕಲಿ ಮಾತ್ರೆಗಳು ಸೀಜ್ ಬೆಂಗಳೂರು: ನಕಲಿ ಔಷಧಿ ದಂಧೆ…
‘ಕಸದ ಚೀಲ’ದ ಮೂಲಕ ವಿಭಿನ್ನ ಕಥನ – ಉಡುಪಿಯ ಸುಮಂತ್ ಗಾಣಿಗ ಅವರ ಬರವಣಿಗೆಗೆ ಮೆಚ್ಚುಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ…
ಎಲ್ಲಾ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹರ್ಮನ್‌ಪ್ರೀತ್ ಕೌರ್ "ರಕ್ತ, ಬೆವರು ಹರಿಸಿ ಸೇವೆ ಸಲ್ಲಿಸಿದ್ದೇನೆ" : ಸಾಮಾಜಿಕ ಜಾಲತಾಣದಲ್ಲಿ…
ಉಡುಪಿ: ಅ.8 ರಂದು ನೇರ ಸಂದರ್ಶನ ಉಡುಪಿ: ನಗರದ ಶಾಂತ ಎಲೆಕ್ಟಿçಕಲ್ಸ್ ಪ್ರೆöÊ.ಲಿ., ಆಭರಣ ಜುವೆರ‍್ಸ್ ಹತ್ತಿರ, ಕಾರ್ಪೋರೇಶನ್ ಬ್ಯಾಂಕ್…
ಹಳೆಕೋಟ–ಕಡವಾಡ ಕ್ರಾಸ್ ರಸ್ತೆ ದುರಸ್ತಿ ಆಗ್ರಹಿಸಿ ಜಿಲ್ಲಾಧಿಕಾರಿಗೆ ಕರವೇ ಮನವಿ ಕಾರವಾರ ಇಳಕಲ್ ಕೈಗಾ ರಾಜ್ಯ ರಸ್ತೆಯ ಹಳೆಕೋಟದಿಂದ ಕಡವಾಡ…