Featured

ಕುಯಿಲಾಡಿ ಅವರಿಗೆ ಇಂದಿರಾ ಗಾಂಧಿ ಹೆಸರು ಹೇಳುವ ಯೋಗ್ಯತೆ ಇಲ್ಲ : ವೆರೋನಿಕಾ ಕರ್ನೆಲಿಯೋ – Vishwanews24

ಒರ್ವ ಮಹಿಳೆಯಾಗಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ಕೆಲವೊಂದು ಉದ್ದೇಶಗಳಿಗಾಗಿ ಹೇರಿದ್ದರು..

ಇಂದು ದೇಶದಲ್ಲಿ ಇರುವ ಅಘೋಷಿತ ತುರ್ತು ಪರಿಸ್ಥಿತಿ ಇವರ ಗಮನಕ್ಕೆ ಯಾಕೆ ಬಂದಿಲ್ಲ

ಪ್ರತಿಯೊಂದಕ್ಕೂ ಇಂದಿರಾ ಗಾಂಧಿ, ನೆಹರೂ ಎನ್ನುವುದನ್ನು ಬಿಟ್ಟು ಇವರ ನಾಯಕರುಗಳ ಸಾಧನೆ ಏನಾದರೂ ಇದ್ದರೆ ಹೇಳುವುದು ಉತ್ತಮ.

ಉಡುಪಿ: ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಅವರು ಒರ್ವ ಅಪಕ್ವ ರಾಜಕಾರಣಿಯಾಗಿದ್ದು ಅವರಿಗೆ ಇಂದಿರಾಗಾಂಧಿಯವರ ಹೆಸರು ಹೇಳುವ ಯೋಗ್ಯತೆ ಕೂಡ ಇಲ್ಲ ಎಂದು ಕೆಪಿಸಿಸಿ ಪ್ಯಾನಲಿಸ್ಟ್‌ ವೆರೋನಿಕಾ ಕರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಆಡಳಿತ ಅವಧಿಯಲ್ಲಿ ನಡೆದ ಜನಪಯೋಗಿ ಕೆಲಸಗಳಾದ ಭೂಸುಧಾರಣೆ, ಬ್ಯಾಂಕ್‌ ರಾಷ್ಟ್ರೀಕರಣ, ರಾಜಧನ ರದ್ದತಿ, ಜೀತ ಮುಕ್ತ ಕಾನೂನುಗಳನ್ನು ಮರೆತಿರುವ ಸುರೇಶ್‌ ನಾಯಕ್‌ ಅವರು ತುರ್ತು ಪರಿಸ್ಥಿತಿಯ ನೆಪವೊಡ್ಡಿ ಬಿಜೆಪಿ ನಾಯಕರು ಹಾಗೂ ಅವರ ಪಟಾಲಂ ಮೈಲೆಜ್‌ ಪಡೆದುಕೊಳ್ಳಲು ಒದ್ದಾಡುತ್ತಿರುವುದು ನೋಡಿದರೆ ನಿಜಕ್ಕೂ ಬಿಜೆಪಿಗರ ಸ್ಥಿತಿಯ ಬಗ್ಗೆ ಕರುಣೆ ಉಕ್ಕಿ ಬರುತ್ತದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಧಿಕಾರಿಗಳಿಂದ ನಡೆದ ಕೆಲವು ಕೆಟ್ಟ ಸಂಗತಿಗಳನ್ನು ಮುಂದಿಟ್ಟುಕೊಂಡು ಅದನ್ನೇ ಬೃಹತ್‌ ಆಕಾರದಲ್ಲಿ ಚಿತ್ರಿಸಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೂಡ ಭಾರತ ದೇಶದಲ್ಲಿ ಆರ್ಥಿಕ ಪ್ರಗತಿ ಮತ್ತು ಭೌತಿಕ ಪ್ರಗತಿಯ ಬಗ್ಗೆ ಬಿಜೆಪಿಗರು ಕಣ್ಣಾಡಿಸಲಿ. ಒರ್ವ ಮಹಿಳೆಯಾಗಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ಕೆಲವೊಂದು ಉದ್ದೇಶಗಳಿಗಾಗಿ ಹೇರಿದ್ದರು ಸರಿ ಆದರೆ ಇಂದು ದೇಶದಲ್ಲಿ ಇರುವ ಅಘೋಷಿತ ತುರ್ತು ಪರಿಸ್ಥಿತಿ ಇವರ ಗಮನಕ್ಕೆ ಯಾಕೆ ಬಂದಿಲ್ಲ. ಗೋದ್ರಾ ನರಮೇಧದ ಸಂತ್ರಸ್ತರ ಪರವಾಗಿ ಇದ್ದರು ಎಂಬ ಒಂದೇ ಕಾರಣಕ್ಕೆ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ ಅವರನ್ನು ಬಂಧಿಸಿರುವುದು ಮೋದಿ ಸರಕಾರದ ಅಘೋಷಿತ ತುರ್ತು ಪರಿಸ್ಥಿತಿಗೆ ಸ್ಪಷ್ಟ ಉದಾಹರಣೆಯಾಗಿದೆ.

ಬಿಜೆಪಿ ನಾಯಕರಿಗೆ ಇಂದಿರಾ ಗಾಂಧಿ, ನೆಹರೂ ಕಾಂಗ್ರೆಸ್‌ ಬಗ್ಗೆ ಮಾತನಾಡದೇ ಹೋದರೆ ಬಿಜೆಪಿಗರಿಗೆ ಯಾವುದೇ ಅಸ್ತಿತ್ವ ಇಲ್ಲ ಪ್ರತಿಯೊಂದಕ್ಕೂ ಇಂದಿರಾ ಗಾಂಧಿ, ನೆಹರೂ ಎನ್ನುವುದನ್ನು ಬಿಟ್ಟು ಇವರ ನಾಯಕರುಗಳ ಸಾಧನೆ ಏನಾದರೂ ಇದ್ದರೆ ಹೇಳುವುದು ಉತ್ತಮ. ಇವರ ಬಟ್ಟಲಲ್ಲಿ ಆನೆ ಬಿದ್ದಿರುವಾಗ ಬೇರೆಯವರ ಬಟ್ಟಲಲ್ಲಿ ನೊಣ ಇದೆ ಇಂದು ಬೊಟ್ಟು ಮಾಡಿ ತೋರಿಸಿ ಇವರೇ ಗೇಲಿಗೊಳಗಾಗುತ್ತಿರುವುದು ನಿಜಕ್ಕೂ ಇವರ ಪಕ್ಷದ ದಯನೀಯ ಸ್ಥಿತಿಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

Vishwa News 24

Recent Posts

ಸತೀಶ್ ಕಡತನಮಲೆ 6 ವರ್ಷ ಬಿಜೆಪಿ ಪಕ್ಷದಿಂದ ಉಚ್ಛಾಟನೆ  – vishwanews24

ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾ‌ನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ  ಬೆಂಗಳೂರು: ರಾಜ್ಯ ರೈತ…

56 minutes ago

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿ – vishwanews24

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…

1 hour ago

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ – vishwanews24

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…

1 hour ago

ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು  – vishwanews24

ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು …

2 hours ago

ಮಂಗಳೂರು: ತಡೆಗೋಡೆ ಕುಸಿದು ಬಿದ್ದು ಮೂವರು ಮೃತ್ಯು; 5 ಲಕ್ಷ ರೂ.ಗಳ ಪರಿಹಾರ ಮೊತ್ತದ ಚೆಕ್‌ ವಿತರಣೆ – vishwanews24

ಮಂಗಳೂರು: ತಡೆಗೋಡೆ ಕುಸಿದು ಬಿದ್ದು ಮೂವರು ಮೃತ್ಯು; 5 ಲಕ್ಷ ರೂ.ಗಳ ಪರಿಹಾರ ಮೊತ್ತದ ಚೆಕ್‌ ವಿತರಣೆ ಮಂಗಳೂರು: ತಡೆಗೋಡೆ…

3 hours ago

ಡಿವಿ ಸದಾನಂದಗೌಡ ಆಡಿಯೋ ವೈರಲ್ ಬಗ್ಗೆ ವಿಜಯೇಂದ್ರ ರಿಯಾಕ್ಷನ್ – vishwanews24

ಡಿವಿ ಸದಾನಂದಗೌಡ ಆಡಿಯೋ ವೈರಲ್ ಬಗ್ಗೆ ವಿಜಯೇಂದ್ರ ಫಸ್ಟ್ ರಿಯಾಕ್ಷನ್ ಆಡಿಯೋ ಧ್ವನಿ ತಮ್ಮದಲ್ಲ ಎಂದು ಸದಾನಂದಗೌಡರೇ ಹೇಳಿದ್ದಾರೆ ;…

3 hours ago