ಬೆಂಗಳೂರು: ಕೊನೆಗೂ ಅನ್ನದಾತರ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದಿದ್ದು, ಈ ಹಿನ್ನೆಲೆಯಲ್ಲಿ ರೈತರಿಗೆ ಕನ್ನಡ ಚಳವಳಿ ವಾಟಾಳ್ ಪಕ್ಷ ಅಧ್ಯಕ್ಷ ವಾಟಾಳ್ ನಾಗರಾಜ್ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಸತತವಾಗಿ 15 ತಿಂಗಳುಗಳಿಂದ ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸಿದ ಹೋರಾಟಕ್ಕೆ ದೇಶಾದ್ಯಂತ ರೈತರು, ಹೋರಾಟಗಾರರು ಜೊತೆಗೂಡಿ ಕೇಂದ್ರ ಸರ್ಕಾರದ ಮೊಂಡುತನದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸಿದ್ದರು. ಕರ್ನಾಟಕದಲ್ಲಿ ಕೂಡ ರೈತರ ಪರವಾಗಿ 3 ಕೃಷಿ ಕಾಯ್ದೆ ವಿರುದ್ಧ ಹೋರಾಟ ನಡೆಸಿದ್ದು, ಇದೀಗ ಈ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ. ಹೀಗಾಗಿ ಮತ್ತೊಮ್ಮೆ ದೇಶದ ಅನ್ನದಾತರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ವಿವಾದಿತ ಕೃಷಿ ಕಾಯ್ದೆಯನ್ನು ವಾಪಸ್ ಪಡೆದುಕೊಂಡಿದೆ. ದೇಶದ ರೈತರ 355 ದಿನಗಳ ಹೋರಾಟದ ನಂತರ ಫಲ ಸಿಕ್ಕಂತಾಗಿದೆ. ಕೃಷಿ ಕಾನೂನು ಹೋರಾಟದಲ್ಲಿ 600ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡಿದ್ದಾರೆ.
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ…
ಮಂಗಳೂರು: ದಸರಾ ರಜೆ ವೇಳೆ ಸೆಮಿಸ್ಟರ್ ಪರೀಕ್ಷೆ: ಖಾಸಗಿ ಕಾಲೇಜು ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಮಂಗಳೂರು: ದಸರಾ ಸಂಭ್ರಮದ ನಡುವೆಯೇ…
ಮಂಗಳೂರು : ದಸರಾ ಉದ್ಘಾಟನೆಗೆ ಸಿಎಂ ಗೈರು ; ಕರಾವಳಿ ತೀವ್ರ ಜನರಲ್ಲಿ ಅಸಮಾಧಾನ : ಅಕ್ಷಿತ್ ಸುವರ್ಣ ಮಂಗಳೂರು:…
ಮಂಗಳೂರು: ಅಕ್ರಮ ಸಂಬಂಧದ ಶಂಕೆ ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ ಮಂಗಳೂರು: ಅಕ್ರಮ ಸಂಬಂಧದ ಶಂಕೆಯ ಹಿನ್ನೆಲೆ…
ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…
ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…