ಬೆಂಗಳೂರು: ರಾಜೀನಾಮೆ ವಿಳಂಬ ಖಂಡಿಸಿ ಪ್ರತಿಭಟಿಸಿದ್ದ ಕಾಂಗ್ರೆಸ್, ಇದೀಗ ಈಶ್ವರಪ್ಪ ಬಂಧಿಸಬೇಕೆಂದು ಅಹೋರಾತ್ರಿ ಧರಣಿ ಕೈಗೊಂಡಿದೆ.
24 ಗಂಟೆ ಪ್ರತಿಭಟನೆ ಘೋಷಣೆ ಮಾಡಿರೋದ್ರಿಂದ ಆಹೋರಾತ್ರಿ ಧರಣಿಯನ್ನು ಕೈಬಿಡಲ್ಲ. ಈಶ್ವರಪ್ಪ ವಿರುದ್ಧ ಹೊಸದಾಗಿ ಎಫ್‍ಐಆರ್ ಹಾಕಬೇಕು. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು, ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಈಶ್ವರಪ್ಪ ವಿರುದ್ಧ ಬ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡುವವರೆಗೆ ಹೋರಾಟ ಕೈಬಿಡಲ್ಲ. ರಾಜೀನಾಮೆ ಕೊಟ್ಟ ಕೂಡಲೇ ಹಿಂದೆ ಸರಿದರೆ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಹೋಗಲ್ಲ. ಆದ್ದರಿಂದ ಹೋರಾಟ ಮುಂದುವರಿಸಿವುದು ಕೈ ಪಾಳಯದ ಲೆಕ್ಕಾಚಾರವಾಗಿದೆ.
ರಾಜ್ಯದ ಉದ್ದಗಲಕ್ಕೂ ಈ ಸಂಬಂಧ ಹೋರಾಟ ನಡೆಸಲು ಕೈ ಪಾಳಯದ ನಿರ್ಧಾರ ಮಾಡಿದೆ. ಈಶ್ವರಪ್ಪ ವಿರುದ್ಧ ಆರೋಪ ಬಂತು ಈಶ್ವರಪ್ಪ ರಾಜೀನಾಮೆ ಕೊಟ್ಟರು ಅಲ್ಲಿಗೆ ಎಲ್ಲವೂ ಮುಗಿದು ಹೋಯ್ತು ಎಂಬಂತಾಗುತ್ತದೆ. ಅದರ ಬದಲು ಈಶ್ವರಪ್ಪ ವಿರುದ್ಧ ಬ್ರಷ್ಟಾಚಾರ ಕಾಯ್ದೆ ಅಡಿ ದೂರು ದಾಖಲಾಗಿ ಅವರ ಬಂಧನವಾದರೆ ಸರ್ಕಾರದ ವಿರುದ್ಧದ 40% ಆರೋಪಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗುತ್ತದೆ. ಅಲ್ಲದೆ ಇದೆನ್ನೆ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮತ್ತಷ್ಟು ಆರೋಪ ಮಾಡಬಹುದು ಹೋರಾಟ ರೂಪಿಸಬಹುದು. ಆದ್ದರಿಂದ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ದೂರು ದಾಖಲಿಸಿಕೊಂಡು ಈಶ್ವರಪ್ಪ ಬಂಧಿಸುವವರೆಗೆ ಕಾಂಗ್ರೆಸ್ ಹೋರಾಟ ಮುಂದುವರಿಸಲು ತೀರ್ಮಾನಿಸಿದೆ.
ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಪ್ರೇತ ಮದುವೆ : ಸತ್ತು 25 ವರ್ಷ ಆದ್ಮೇಲೆ ಒಂದಾದ ಜೋಡಿ ತುಳುನಾಡಿನ ಸಾಂಪ್ರದಾಯಿಕ…
ಮಂಗಳೂರಿಗೆ ಆಗಮಿಸಿದ ಬಾಲಿವುಡ್ ನಟ ಶಾರುಖ್ ಖಾನ್ ಮಂಗಳೂರು: ನಗರದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಾಲಿವುಡ್ ನಟ ಶಾರುಖ್ ಖಾನ್…
ರಾಜ್ಯದ 13 ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ.. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಉಸ್ತುವಾರಿಯಾಗಿ…
ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ NCERT ಸ್ಪಷ್ಟನೆ ನವದೆಹಲಿ: 6ನೇ ತರಗತಿಯ ಕನ್ನಡ ಪಠ್ಯಪುಸ್ತಕ ‘ಕೃಷ್ಣ’ ಕುರಿತು ಎದ್ದಿರುವ ವಿವಾದಕ್ಕೆ NCERT(ರಾಷ್ಟ್ರೀಯ…
ಮುಲ್ಕಿ : ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ ; 4 ಕೆ.ಜಿ ಗಾಂಜಾ ವಶ ಮುಲ್ಕಿ:…
ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ ಬೆಂಗಳೂರು: 6ನೇ ತರಗತಿಗಾಗಿ ಎನ್‌ಸಿಇಆರ್‌ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ…