Featured

ಕೆ.ಎಸ್ ಈಶ್ವರಪ್ಪ ಅವರು ನೈತಿಕತೆ ಹೊತ್ತು ರಾಜೀನಾಮೆ ಕೊಡಬೇಕು : ಕುಮಾರಸ್ವಾಮಿ – Vishwanews24

ಈಶ್ವರಪ್ಪ ಅವರು ಕಾಂಗ್ರೆಸ್ಸಿಗೆ ಆಹಾರ ಆಗೋದು ಬೇಡ..

ರಾಜೀನಾಮೆ ಕೊಟ್ಟು ನನ್ನದು ತಪ್ಪಿಲ್ಲ ಅಂತ ಸಾಬೀತು ಮಾಡಲಿ..

ರಾಮನಗರ: ಸಚಿವ ಕೆ.ಎಸ್ ಈಶ್ವರಪ್ಪ ಅವರು ಕಾಂಗ್ರೆಸ್‍ಗೆ ಆಹಾರ ಆಗೋದು ಬೇಡ. ಈಶ್ವರಪ್ಪ ಸೀನಿಯರ್ ರಾಜಕಾರಣಿ ಇದ್ದಾರೆ. ನೈತಿಕತೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದರು.

ಸಂತೋಷ್ ಆತ್ಮಹತ್ಯೆ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಒಂದು ವಾರದ ಹಿಂದೆ ಚರ್ಚೆ ನಡೆಯುತ್ತಿತ್ತು. ಈಶ್ವರಪ್ಪ ಮೇಲೆ ವ್ಯಕ್ತಿ ಅನೇಕರಿಗೆ ದೂರು ಕೊಟ್ಟಿದ್ದರು ಅಂತ ನೋಡಿದ್ದೇನೆ. ಈಗ ಸಡನ್ ಆಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರ ಹಿಂದಿನ ಬ್ಯಾಗ್ ರೌಂಡ್ ನನಗೆ ಗೊತ್ತಿಲ್ಲ ಎಂದರು.

ಡೆತ್ ನೋಟ್ ವಿಚಾರದಲ್ಲಿ ನೈತಿಕತೆ ವಿಚಾರ ಬಂದಾಗ ಈಶ್ವರಪ್ಪ ತೀರ್ಮಾನ ಮಾಡಬೇಕು. ಬಿಜೆಪಿಯಲ್ಲಿ ಆಂತರಿಕ ಗಲಾಟೆ ನಡೆಯುತ್ತಿದೆ. ಅನೇಕ ಸಚಿವರನ್ನ ತೆಗೆಯುತ್ತಾರೆ ಅಂತ ಚರ್ಚೆ ಆಗ್ತಿದೆ. ಈ ವಿಚಾರಕ್ಕೆ ಏನಾದ್ರು ಇದು ಸಂಬಂಧ ಇದೆಯಾ ಗೊತ್ತಿಲ್ಲ. ಸರ್ಕಾರಕ್ಕೆ ಘಟನೆ ಬಗ್ಗೆ ಸತ್ಯ ಹೊರಗೆ ತೆಗೆಯುವ ಜವಾಬ್ದಾರಿ ಇದೆ ಎಂದು ಹೇಳಿದರು.

ಈಶ್ವರಪ್ಪ ಅವರು ಕಾಂಗ್ರೆಸ್ಸಿಗೆ ಆಹಾರ ಆಗೋದು ಬೇಡ. ಈಶ್ವರಪ್ಪ ಸೀನಿಯರ್ ರಾಜಕಾರಣಿ ಇದ್ದಾರೆ. ನೈತಿಕತೆ ಹೊತ್ತು ರಾಜೀನಾಮೆ ಕೊಡಬೇಕು. ರಾಜೀನಾಮೆ ಕೊಟ್ಟು ನನ್ನದು ತಪ್ಪಿಲ್ಲ ಅಂತ ಸಾಬೀತು ಮಾಡಲಿ. ಆದರೆ ಈಶ್ವರಪ್ಪರನ್ನ ಮಾತ್ರ ಯಾಕೆ ಟಾರ್ಗೆಟ್ ಮಾಡ್ತಿದ್ದಾರೆ. 40% ಆರೋಪ ಎಲ್ಲಾ ಇಲಾಖೆ ಮೇಲೆ ಇದೆ. ಈಗ ಒಂದೇ ಇಲಾಖೆ ಮೇಲೆ ಯಾಕೆ ಆರೋಪ ಬಂದಿದೆ ಎಂದರು.

ಈಶ್ವರಪ್ಪ ಮೇಲೆ ಇಂತಹ ವಿಷಯ ಬಂದಿರೋದಕ್ಕೆ ಸಂಶಯ ಬರುತ್ತಿದೆ. ಈಶ್ವರಪ್ಪ ರಾಜೀನಾಮೆ ಕೊಡೋದು ಉತ್ತಮ. ಮಂತ್ರಿ ಸ್ಥಾನ ಶಾಶ್ವತ ಅಲ್ಲ. ನೀವು ಕಳಂಕರಹಿತರಾಗಿ ಹೊರಗೆ ಬರಬೇಕು. ಹೀಗಾಗಿ ರಾಜೀನಾಮೆ ಕೊಟ್ಟು ನಿರಪರಾಧಿ ಅಂತ ಸಾಬೀತುಪಡಿಸಲಿ. ಸರ್ಕಾರ ಕೂಡಾ ಈ ಬಗ್ಗೆ ತನಿಖೆ ಮಾಡಿ ಸತ್ಯ ಸತ್ಯತೆ ಹೊರಗೆ ತರುವ ಕೆಲಸ ಮಾಡಲಿ ಎಂದು ಹೇಳಿದರು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago