ಮಂಡ್ಯ: ಕೇಂದ್ರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1.24ಲಕ್ಷ ರೂ. ಜಮೆ ಮಾಡುವ ಗ್ಯಾರಂಟಿಯನ್ನು ರಾಹುಲ್ ಗಾಂಧಿ ನೀಡಿದ್ದಾರೆ.
ಮಂಡ್ಯದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ 24 ಸಾವಿರದ ಜೊತೆಗೆ ಕೇಂದ್ರದಿಂದ ವರ್ಷಕ್ಕೆ 1.24 ಲಕ್ಷ ರೂ. ಹಣವನ್ನು ಮಹಿಳೆಯರ ಖಾತೆಗೆ ಜಮೆ ಮಾಡಲಾಗುವುದು. ಜೊತೆಗೆ ರೈತರ ಸಾಲಮನ್ನಾ, ಕನಿಷ್ಠ ಬೆಂಬಲ ಬೆಲೆಯ ಗ್ಯಾರಂಟಿಯನ್ನು ಘೋಷಿಸಿದ್ದಾರೆ.
ಯುವಕರಿಗೆ ಐತಿಹಾಸಿಕ ಕಾರ್ಯಕ್ರಮ ಮಾಡುತ್ತೇವೆ. ಮೊದಲು ಉದ್ಯೋಗ ಯೋಜನೆ ಜಾರಿ ಮಾಡುತ್ತೇವೆ. ಬಡವರ ಮಕ್ಕಳು ದೊಡ್ಡ ಕಾರ್ಖನೆಗಳಲ್ಲಿ ಅಪ್ರಂಟಿಶಿಪ್ ಮಾಡಿ ಕೆಲಸ ಕೊಡುವ ಕೆಲಸ ಮಾಡುತ್ತೇವೆ. ನರೇಗಾ ಯೋಜನೆಯನ್ನ ನಗರ ಪ್ರದೇಶಕ್ಕೆ ವಿಸ್ತರಿಸುತ್ತೇವೆ. ಆಶಾ ಕಾರ್ಯತರ್ಕರಿಗೆ ಸಂಭಾವನೆ ಹೆಚ್ಚಸಲಿದ್ದೇವೆ. ಗುತ್ತಿಗೆ ಪದ್ದತೆಯನ್ನ ರದ್ದು ಮಾಡುತ್ತೇವೆ. ಉದ್ಯೋಗ ಗ್ಯಾರೆಂಟಿ ಕಾಯಂ ಮಾಡುತ್ತೇವೆ ಎಂದು ರಾಗಾ ಭರಸವೆ ನೀಡಿದರು.
ಚುನಾವಣಾ ಬಾಂಡ್ ಬಗ್ಗೆ ಪ್ರಧಾನಿ ಮಾತನಾಡುತ್ತಾರೆ. ಈ ಕುರಿತು ಮಾತನಾಡುವಾಗ ಅವರ ಕೈ ನಡುಗುತ್ತದೆ. ಇದೊಂದು ದೊಡ್ಡ ಹಗರಣವಾಗಿದೆ. ಎಲ್ಲಾ ಮಾಹಿತಿಯನ್ನ ನಿಗೂಢವಾಗಿ ಇಟ್ಟಿದ್ದಾರೆ. ಕೋರ್ಟ್ ಇವರಿಗೆ ಛೀಮಾರಿ ಹಾಕಿದೆ. ಮಾಹಿತಿ ಬಹಿರಂಗ ಪಡಿಸಬೇಕು ಅಂತ ಹೇಳಿದೆ ಎಂದರು.
ಬಿಜೆಪಿ ಒಂದು ಕಡೆಯಾದರೆ ಬಿಜೆಪಿ ಬಿ ಟೀಂ ಮತ್ತೊಂದು ಕಡೆ. ಈಗ ಎರಡು ಸೇರಿ ಒಂದಾಗಿವೆ ಅವರನ್ನ ಸೋಲಿಸಬೇಕು. ಎಲ್ಲಾ ನಮ್ಮ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು. ಪಕ್ಷದ ಸಿಪಾಯಿಗಳಿಂದ ನಮಗೆ ಬೆಂಬಲ ನೀಡಬೇಕು ಎಂದು ರಾಗಾ ಮನವಿ ಮಾಡಿಕೊಂಡರು.
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…