ಬೆಂಗಳೂರು: ಕೇಂದ್ರ ಸರ್ಕಾರದ ಜೊತೆ ನಾವಿದ್ದೇವೆ. ಎಲ್ಲಾ ಉಗ್ರ ತಾಣಗಳನ್ನು ನಾಶಪಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪಹಲ್ಗಾಮ್‌ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಮತ್ತಿಕೆರೆಯ ಭರತ್ ಭೂಷಣ್ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸರ್ಕಾರದ ಪರವಾಗಿ ಕನ್ನಡ ನಾಡಿನ ಏಳು ಕೋಟಿ ಜನರ ಪರವಾಗಿ ಭರತ್ ಭೂಷಣ್‌ಗೆ ಶ್ರದ್ದಾಂಜಲಿ ಸಲ್ಲಿಸಿದ್ದೇನೆ. ಇನ್ನೂ ಚಿಕ್ಕ ವಯಸ್ಸು. ಭರತ್ ಭೂಷಣ್ ಬಿಇ ಎಂಬಿಎ ಮಾಡಿದ್ದಾರೆ. ಉಗ್ರರು ಅಮಾನವೀಯವಾಗಿ ಕೃತ್ಯ ಎಸಗಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸಿದ್ದೇನೆ. ಉಗ್ರ ಚಟುವಟಿಕೆಗಳು ಈ ದೇಶದಿಂದ ಹೋಗಬೇಕು. ಯಾವುದೇ ಕಾರಣಕ್ಕೂ ಸರ್ಕಾರ ಕನಿಕರ ತೋರಬಾರದು ಎಂದು ಮನವಿ ಮಾಡಿದರು.
ಹಾಡಹಗಲೇ ಹೆಂಡತಿ, ಮಗು ಇದ್ದಾಗಲೆ ಶೂಟ್ ಮಾಡೋದಕ್ಕಿಂತ ಹೇಯಕೃತ್ಯ ಇನ್ನೊಂದಿಲ್ಲ. ಮನುಷ್ಯತ್ವ ಇಲ್ಲದವರು ಅವರು. ಇದನ್ನು ಖಂಡಿಸುತ್ತೇನೆ. ಇದೇ ಜಿಲ್ಲೆಯಲ್ಲಿ ಪುಲ್ವಾಮ ಅಟ್ಯಾಕ್ ಆಯಿತು. ಘಟನೆಯಲ್ಲಿ 40 ಸೈನಿಕರು ಸಾವನ್ನಪ್ಪಿದ್ದರು. ಅಲ್ಲೇ ಇದೀಗ ಮತ್ತೆ ಮರುಕಳಿಸಿದೆ. ಅವರು ಎಲ್ಲೇ ಇದ್ದರೂ ಪತ್ತೆ ಹಚ್ಚಿ ನಿರ್ಮೂಲನೆ ಮಾಡಬೇಕು. ಬಹುಷಃ ಎಲ್ಲೋ ಒಂದು ಕಡೆ ಇಂಟೆಲಿಜೆನ್ಸ್ ಫೇಲ್ಯೂರ್ ಆಗಿದೆ ಅನ್ನಿಸುತ್ತಿದೆ ಎಂದರು.
ಸತ್ತವರ ಕುಟುಂಬಗಳಿಗೆ ನಮ್ಮ ಸರ್ಕಾರ 10 ಲಕ್ಷ ರೂ. ಪರಿಹಾರ ನೀಡಿದೆ. ಯಾವಾಗಲೂ ನಮ್ಮ ಸರ್ಕಾರ ಕುಟುಂಬದ ಜೊತೆ ಇದೆ. ಸಚಿವ ಸಂತೋಷ್ ಲಾಡ್ ಅವರನ್ನು ಕೂಡಲೇ ಕಾಶ್ಮೀರಕ್ಕೆ ಕಳುಹಿಸಿದ್ದೆ. ಮೃತದೇಹಗಳು ಹಾಗೂ ಕನ್ನಡಿಗರನ್ನು ವಾಪಸ್ ಕರೆತರುವಂತೆ ತಿಳಿಸಿದ್ದೆ. 177 ಜನರನ್ನು ಲಾಡ್ ವಾಪಸ್ ಕರೆತರುತ್ತಿದ್ದಾರೆ. ಇನ್ನೊಂದು ಸಾರಿ ಉಗ್ರ ಕೃತ್ಯ ಮರುಕಳಿಸದೆ ಇರುವ ಹಾಗೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…