ಬೆಂಗಳೂರು: ಪದೇಪದೇ ಪಕ್ಷದ ನಾಯಕತ್ವದ ಕುರಿತು ಮುಜುಗರ ತರುವ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕೇಂದ್ರ ಬಿಜೆಪಿ ಶಿಸ್ತುಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಈ ಮೂಲಕ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಹಿನ್ನೆಲೆ ಯತ್ನಾಳ್ ವಿರುದ್ಧ ಬಿಜೆಪಿ ಹೈಕಮಾಂಡ್ ಕ್ರಮಕ್ಕೆ ಮುಂದಾಗಿದೆ. ಹತ್ತು ದಿನಗಳೊಳಗೆ ಸ್ಪಷ್ಟೀಕರಣ ಕೊಡದಿದ್ದಲ್ಲಿ ನಿಮ್ಮ ತಪ್ಪು ನೀವೇ ಒಪ್ಪಿಕೊಂಡಂತೆ. ನಾವು ಕ್ರಮಕ್ಕೆ ಮುಂದಾಗಲು ನಿಮ್ಮ ಒಪ್ಪಿಗೆ ಇದೆಯೆಂದು ಭಾವಿಸುತ್ತೇವೆ. ಈ ಹಿಂದೆಯೂ ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ತಪ್ಪು ಸರಿಪಡಿಸಿಕೊಳ್ಳೋದಾಗಿ ಭರವಸೆ ಕೊಟ್ಟಿದ್ದಿರಿ. ಆದರೆ ಯಾವುದೂ ಬದಲಾವಣೆ ಆಗಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಹೈಕಮಾಂಡ್ ನಮ್ಮ ಪರ ಇದೆ ಎನ್ನುತ್ತಿದ್ದ ಯತ್ನಾಳ್ ತಂಡಕ್ಕೆ ಭಾರೀ ಹಿನ್ನಡೆಯಾಗಿದ್ದು, ಸದ್ಯಕ್ಕೆ ವಿಜಯೇಂದ್ರ ಮೇಲುಗೈ ಸಾಧಿಸಿದ್ದಾರೆ. ಬಿಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ನೀಡಿದ್ದ ಬಹಿರಂಗ ಹೇಳಿಕೆಗಳ ಕುರಿತು ಹೈಕಮಾಂಡ್ ಗರಂ ಆಗಿದೆ. ಇದೀಗ ಶೋಕಾಸ್ ನೊಟೀಸ್ ಜಾರಿಯಾದ ಹಿನ್ನೆಲೆ ಯತ್ನಾಳ್ ಶೋಕಾಸ್ ನೊಟೀಸ್‌ಗೆ ಉತ್ತರ ಕೊಡುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಉತ್ತರ ಕೊಡುತ್ತೇನೆ. ಹಾಗೆಯೇ ರಾಜ್ಯ ಬಿಜೆಪಿಯ ವಸ್ತುಸ್ಥಿತಿಯನ್ನೂ ವರಿಷ್ಠರಿಗೆ ತಿಳಿಸೋದಾಗಿ ಯತ್ನಾಳ್ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಇನ್ನು ಸೋಮವಾರ ಜೆಪಿಸಿ ಅಧ್ಯಕ್ಷ ಜಗದಾಂಬಿಕ ಪಾಲ್ ಅವರಿಗೆ ವಕ್ಫ್ ವಿರೋಧಿ ಜನಜಾಗೃತಿ ವರದಿ ಸಲ್ಲಿಸುವ ಸಲುವಾಗಿ ಭಾನುವಾರವೇ ಯತ್ನಾಳ್ ದೆಹಲಿಗೆ ತೆರಳಿದ್ದಾರೆ. ಇಂದು (ಸೋಮವಾರ) ಉಳಿದ ರೆಬೆಲ್ ನಾಯಕರು ಯತ್ನಾಳ್‌ರನ್ನು ಕೂಡಿಕೊಳ್ಳಲಿದ್ದಾರೆ.
ಕಾರವಾರ : ವೀರ ಯೋಧ ಹುತಾತ್ಮ ವಿನೋದ ನಾಯಕ್ ಅವರ 21ನೇ ಪುಣ್ಯತಿಥಿ ಹಾಗೂ ಸ್ಮಾರಕಕ್ಕೆ ನೂತನ ಕಾಂಪೌಂಡ್ ಗೋಡೆ…
ಕಾನ್ಪುರದಲ್ಲಿ ಖಾಸಗಿ ತರಬೇತಿ ವಿಮಾನ ಅಪಘಾತ: ಉಡುಪಿ ಮೂಲದ ಪೈಲಟ್ ಸಾವು ಉಡುಪಿ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಗಸ್ಟ್ 27ರಂದು…
ಅಮೆರಿಕದ ಪ್ರತಿಷ್ಠಿತ ಗ್ರ್ಯಾಂಡ್ ಚೆಸ್ ಟೂರ್ ಗೆದ್ದು ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ ವಾಷಿಂಗ್ಟನ್: ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ…
ಮೈಸೂರು ದಸರಾಕ್ಕೆ ಅದ್ದೂರಿ ಸಿದ್ಧತೆ : ಅರಮನೆ ಪ್ರವೇಶಿಸಿದ ಗಜಪಡೆಗೆ ಭರ್ಜರಿ ಸ್ವಾಗತ ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ…
ಕುಂದಾಪುರ : ಗಂಗೊಳ್ಳಿ ಸಮುದ್ರದಲ್ಲಿ ಮುಳುಗಿದ್ದ ದೋಣಿಯ ಅವಶೇಷ ಪತ್ತೆ ಕುಂದಾಪುರ : ಗಂಗೊಳ್ಳಿ ನದೀಮುಖದ ಬಳಿ ಬುಧವಾರ ಸಮುದ್ರದಲ್ಲಿ…
2019 – 2023ರ ವರೆಗೆ ಮುಡಾದಿಂದ ಹಂಚಿಕೆಯಾದ ಎಲ್ಲಾ 50:50 ಸೈಟುಗಳು ರದ್ದು .. ಅಕ್ರಮ ನಡೆದಿದ್ದರೆ 2018ರ ಹಿಂದೆ…