Featured

ಕೇಂದ್ರ ಸಚಿವ ಸಂಪುಟದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂಸದರು -Vishwanews24

ನವದೆಹಲಿ,:ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ ಅಭೂತಪೂರ್ವ ಜಯ ಸಾಧಿಸಿದ್ದು, ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಗುರುವಾರ ಸಂಜೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರೊಂದಿಗೆ ಒಟ್ಟು 57 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸಂಪುಟ ದರ್ಜೆ ಸಚಿವರಾಗಿ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಸದಾನಂದ ಗೌಡ, ನಿರ್ಮಲಾ ಸೀತಾರಾಮನ್, ರಾಮವಿಲಾಸ್ ಪಾಸ್ವಾನ್, ನರೇಂದ್ರ ಸಿಂಗ್ ತೋಮರ್, ರವಿಶಂಕರ್ ಪ್ರಸಾದ್, ಹರ್ಸಿಮ್ರತ್ ಕೌರ್, ತಾವರ್ ಚಂದ್ ಗೆಹ್ಲೋಟ್, ಎಸ್.ಜೈಶಂಕರ್, ರಮೇಶ್ ಪೋಖ್ರಿಯಾಲ್, ಅರ್ಜುನ್ ಮುಂಡಾ, ಸ್ಮೃತಿ ಇರಾನಿ, ಡಾ.ಹರ್ಷವರ್ಧನ್, ಪ್ರಕಾಶ್ ಜಾವ್ಡೇಕರ್, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಮುಖ್ತಾರ್ ಅಬ್ಬಾಸ್ ನಖ್ವಿ. ಪ್ರಹ್ಲಾದ್ ಜೋಷಿ, ಮಹೇಂದ್ರನಾಥ್ ಪಾಂಡೆ, ಅರವಿಂದ್ ಸಾವಂತ್, ಗಿರಿರಾಜ್ ಸಿಂಗ್, ಗಜೇಂದ್ರ ಸಿಂಗ್ ಶೇಖವಾತ್ ಪ್ರಮಾಣವಚನ ಸ್ವೀಕರಿಸಿದ್ದಾರೆ.

ರಾಜ್ಯ ಖಾತೆ ಸಚಿವರಾಗಿ ಫಗನ್ ಸಿಂಗ್ ಕುಲಸ್ತೆ, ಅಶ್ವಿನಿ ಚೌಬೆ, ಅರ್ಜುನ್ ರಾಮ್ ಮೇಘವಾಲ್, ವಿ.ಕೆ.ಸಿಂಗ್, ಕೃಷ್ಣಪಾಲ್ ಗುರ್ಜರ್, ರಾವ್ ಸಾಹೇಬ್ ದಾನವೆ ರಾವ್, ಕಿಶನ್ ರೆಡ್ಡಿ, ಪುರುಷೋತ್ತಮ ರುಪಾಲಾ, ರಾಮದಾಸ್ ಅಠಾವಳೆ, ಸಾಧ್ವಿ ನಿರಂಜನ್ ಜ್ಯೋತಿ, ಬಾಬುಲ್ ಸುಪ್ರಿಯೋ, ಸಂಜೀವ್ ಬಲಿಯಾನ್, ಸಂಜಯ್ ಧೋತ್ರೆ, ಅನುರಾಗ್ ಠಾಕೂರ್, ಸುರೇಶ್ ಅಂಗಡಿ, ನಿತ್ಯಾನಂದ್ ರಾಯ್, ರತನ್ ಲಾಲ್ ಕಟಾರಿಯಾ, ವಿ.ಮುರಳೀಧರನ್, ರೇಣುಕಾ ಸಿಂಗ್, ಸೋಮ್ ಪ್ರಕಾಶ್, ರಾಮೇಶ್ವರ್ ತೇಲಿ, ಪ್ರತಾಪ್ ಸಾರಂಗಿ, ಕೈಲಾಶ್ ಚೌಧರಿ, ದೆಬೊಶ್ರೀ ಚೌಧರಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸ್ವತಂತ್ರ ಖಾತೆ ಸಚಿವರಾಗಿ ಸಂತೋಷ್ ಕುಮಾರ್ ಗಂಗ್ವಾರ್, ಇಂದ್ರಜಿತ್ ಸಿಂಗ್, ಶ್ರೀ ಪಾದ್ ಎಸ್ ನಾಯಕ್, ಜಿತೇಂದ್ರ ಸಿಂಗ್, ಕಿರಣ್ ರಿಜಿಜು, ಪ್ರಹ್ಲಾದ್ ಸಿಂಗ್ ಪಟೇಲ್, ರಾಜ್‍ಕುಮಾರ್ ಸಿಂಗ್, ಹರ್ದೀಪ್ ಸಿಂಗ್ ಪುರಿ, ಮನಸುಖ್ ಮಾಂಡವ್ಯ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಮೇ 30ರಂದು ರಾಷ್ಟ್ರಪತಿ ಭವನದ ರೈಸಿನಾ ಹಿಲ್ಸ್ ನಲ್ಲಿ 7 ಗಂಟೆ ನಂತರ ನಡೆದ ಸಮಾರಂಭದಲ್ಲಿ ನರೇಂದ್ರ ದಾಮೋದರ್ ದಾಸ್ ಮೋದಿ ಅವರು 2ನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಬಾರಿ 8 ಸಾವಿರಕ್ಕೂ ಹೆಚ್ಚು ಆಹ್ವಾನಿತ ಅತಿಥಿಗಳು ಈ ಶುಭ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

Vishwa News 24

Recent Posts

ಕುಂದಾಪುರ: ಕಾಲೇಜಿಗೆಂದು ತೆರಳಿದ್ದ ಯುವಕ ನಾಪತ್ತೆ – vishwanews24

ಕುಂದಾಪುರ: ಕಾಲೇಜಿಗೆ ಹೋಗಿ ಟಿಸಿ  ತರುತ್ತೇನೆ ಎಂದು ಮನೆಯಿಂದ ತೆರಳಿದ್ದ ಯುವಕ ನಾಪತ್ತೆ ಕುಂದಾಪುರ: ಕಾಲೇಜಿಗೆ ಹೋಗಿ ಟಿಸಿ  ತರುತ್ತೇನೆ ಎಂದು…

20 hours ago

ಆ. 1 ರಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ – vishwanews24

ಆ. 1 ರಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ; ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ ಮೈಸೂರು:…

20 hours ago

ಮಿಸ್ ಯುನಿವರ್ಸ್ ಇಂಡಿಯಾ 2026 ಸ್ಪರ್ಧೆಯ ಅಂತಿಮ ಸುತ್ತಿಗೆ ಉಡುಪಿ ಮೂಲದ ಸ್ಪೂರ್ತಿ ಶೆಟ್ಟಿ ಆಯ್ಕೆ – vishwanews24

ಮಿಸ್ ಯುನಿವರ್ಸ್ ಇಂಡಿಯಾ 2026 ಸ್ಪರ್ಧೆಯ ಅಂತಿಮ ಸುತ್ತಿಗೆ ಉಡುಪಿ ಮೂಲದ ಸ್ಪೂರ್ತಿ ಶೆಟ್ಟಿ ಆಯ್ಕೆ ಉಡುಪಿ ಮೂಲದ ಸ್ಪೂರ್ತಿ…

20 hours ago

ಗೃಹಲಕ್ಷ್ಮಿ ಯೋಜನೆಯ 31ನೇ ಕಂತಿನ 2,400 ಕೋಟಿ ರೂ. ಹಣ ಬಿಡುಗಡೆ – vishwanews24

ಗೃಹಲಕ್ಷ್ಮಿ ಯೋಜನೆಯ 31ನೇ ಕಂತಿನ 2,400 ಕೋಟಿ ರೂ. ಹಣ ಬಿಡುಗಡೆ ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ…

21 hours ago

ಬಿಡದಿ ಟೌನ್ ಶಿಪ್ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ : ಶೋಭಾ ಕರಂದ್ಲಾಜೆ – vishwanews24

ಬಿಡದಿ ಟೌನ್‍ಶಿಪ್ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ : ಶೋಭಾ ಕರಂದ್ಲಾಜೆ ಬೆಂಗಳೂರು : ಬಿಡದಿ ಟೌನ್‍ಶಿಪ್ ನಿರ್ಮಾಣಕ್ಕೆ ಯಾವುದೇ…

21 hours ago

ಮುಂಬೈ-ಮಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಚಾಕು ತೋರಿಸಿ ದರೋಡೆಗೆ ಯತ್ನ: ಪೊಲೀಸರಿಗೆ ಒಪ್ಪಿಸಿದ ಪ್ರಯಾಣಿಕರು – vishwanews24

ಮುಂಬೈ-ಮಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಚಾಕು ತೋರಿಸಿ ದರೋಡೆಗೆ ಯತ್ನ: ಪೊಲೀಸರಿಗೆ ಒಪ್ಪಿಸಿದ ಪ್ರಯಾಣಿಕರು ಮಂಗಳೂರು: ಪ್ರಯಾಣಿಕರನ್ನು ಚಾಕು ತೋರಿಸಿ ಬೆದರಿಸಿ ದರೋಡೆ…

21 hours ago