Featured

ಕೇಂದ್ರ ಸರ್ಕಾರ ಗ್ಯಾಸ್ ದರ ಏರಿಸಿ ಬಡ ಹಾಗೂ ಮಧ್ಯಮ ವರ್ಗದ ಗೃಹಿಣಿಯರನ್ನು ಜೀವಂತ ಸುಡುತ್ತಿದೆ : ಗೀತಾ ವಾಗ್ಳೆ ಆರೋಪ -Vishwanews24

ಕೇಂದ್ರ ಸರ್ಕಾರ ಗ್ಯಾಸ್ ದರ ಏರಿಸಿ ಬಡ ಹಾಗೂ ಮಧ್ಯಮ ವರ್ಗದ ಗೃಹಿಣಿಯರನ್ನು ಜೀವಂತ ಸುಡುತ್ತಿದೆ : ಗೀತಾ ವಾಗ್ಳೆ ಆರೋಪ

ಬೆಲೆ ಏರಿಕೆಯಿಂದಾಗಿ ಗೃಹಿಣಿಯರು ಕಣ್ಣೀರು ಹಾಕುವಂತಾಗಿದೆ..

ಇಂತಹ ಸರಕಾರಕ್ಕೆ ಮುಂದಿನ ದಿನಗಳಲ್ಲಿ ಜನರೇ ಬುದ್ಧಿ ಕಲಿಸಲಿದ್ದಾರೆ..

ಯಾವ ಕಾಳಜಿ ,ಕರುಣೆ ಇಲ್ಲದ ದುರಹಂಕಾರೀ ಮತ್ತು ದುರುಳ ಸರಕಾರ…

ಉಡುಪಿ: ಕೇಂದ್ರದಲ್ಲಿನ ಆಡಳಿತಾರೂಢ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರಕಾರವು ಮನ ಬಂದಂತೆ ಗ್ಯಾಸ್ ದರವನ್ನು  ಪದೇಪದೇ ಏರಿಸುವುದರ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಗೃಹಿಣಿಯರನ್ನು ಜೀವಂತವಾಗಿ ಸುಡುತ್ತಿದೆ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಆರೋಪಿಸಿದ್ದಾರೆ.

ಏಳು ವರ್ಷಗಳ ಹಿಂದೆ ಇದೇ ಬಿಜೆಪಿ ಪಕ್ಷದ ನಾಯಕರು ಅಡುಗೆಅನಿಲದ ದರ ಏರಿಕೆಯನ್ನು ಖಂಡಿಸಿ ದೇಶಾದ್ಯಂತ ಇರುವ ಪೆಟ್ರೋಲ್ ಬಂಕ್ ಗಳಲ್ಲಿ ಆಕರ್ಷಕ ಫ್ಲೆಕ್ಸ್ ಗಳನ್ನು ಅಳವಡಿಸಿ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಗೃಹಿಣಿಯರಿಗೆ ಬಹಳ ಅನ್ಯಾಯವಾಗುತ್ತಿದೆ,ಬೆಲೆ ಏರಿಕೆಯಿಂದಾಗಿ ಗೃಹಿಣಿಯರು ಕಣ್ಣೀರು ಹಾಕುವಂತಾಗಿದೆ ಎಂಬಂತೆ ಬಿಂಬಿಸುವ ಮೂಲಕ ಮಹಿಳೆಯರನ್ನು ಮರುಳುಮಾಡಿ,ಅದೇನೋ ದೇಶದಲ್ಲಿ ದೊಡ್ಡ ಪವಾಡವೇ ನಡೆಯಲಿದೆ ಎನ್ನುವ ರೀತಿಯಲ್ಲಿ ಆಡಳಿತ ಚುಕ್ಕಾಣಿ ಯನ್ನು ಹಿಡಿದ ವಿಚಾರವನ್ನು ಯಾರೂ ಮರೆತಿಲ್ಲ. ಆದರೆ ಅಧಿಕಾರ ಕೈಗೆ ಬರುತ್ತಿದ್ದಂತೆಯೇ,ಈ ಸರ್ಕಾರ ಮಾಡಿದ್ದೇನು?

ಕಳೆದ ಏಳು ವರ್ಷಗಳಿಂದ ತಿಂಗಳಿಗೆ ಎರಡು ಮೂರು ಬಾರಿ ಎಂಬಂತೆ ಗ್ಯಾಸ್ ದರವನ್ನು ಏರಿಸಲಾಗುತ್ತಿದೆ.ಗೃಹಿಣಿಯರ ಕಣ್ಣೀರನ್ನು ಒರೆಸುವ ವಾಗ್ದಾನ ವಿತ್ತ ಸರಕಾರ ಇಂದು ಗೃಹಿಣಿಯರ ಕಣ್ಣೀರು ಉಕ್ಕಿ ಬರುವಂತೆ ಮಾಡುತ್ತಿದೆ.ಅಸಹಾಯಕ ಪರಿಸ್ಥಿತಿಯಲ್ಲಿ ಏನೂ ಹೇಳಲಾರದಂತಹ ಪರಿಸ್ಥಿತಿಯಲ್ಲಿ ನಮ್ಮ ಗೃಹಿಣಿಯರು ಇಂದು ಇದ್ದಾರೆ.ಅವರ ಯಾವ ಪ್ರತಿಭಟನೆ, ಹಾಹಾಕಾರಗಳಿಗೂ ಕಿವಿಗೊಡದ ಸರ್ಕಾರವು ಕೋಮಾಗೆ ಹೋಗಿರುವಂತೆ ವರ್ತಿಸುತ್ತಿದೆ .ಯಾವ ಕಾಳಜಿಯೂ ಇಲ್ಲದ,ಕರುಣೆಯೂ ಇಲ್ಲದ ದುರಹಂಕಾರೀ ಮತ್ತು ದುರುಳ ಸರಕಾರ ಇದಾಗಿದೆ.ಇಂತಹ ಸರಕಾರಕ್ಕೆ ಮುಂದಿನ ದಿನಗಳಲ್ಲಿ ಜನರೇ ಬುದ್ಧಿ ಕಲಿಸಲಿದ್ದಾರೆ ಎಂದವರು ಹೇಳಿದ್ದಾರೆ.

ಬಡವರ ಬಗ್ಗೆ ಒಂದಿನಿತೂ ಕಾಳಜಿ ಇಲ್ಲದ ಈ ಸರಕಾರದ ನಿರ್ಲಜ್ಜ ಸರ್ಕಾರದ ಬಗ್ಗೆ ಮಹಿಳೆಯರ ತಾಳ್ಮೆಯ ಕಟ್ಟೆಯೊಡೆದು ಸರ್ಕಾರದ ಮೇಲೆ ಗದಾ ಪ್ರಹಾರ ಮಾಡುವ ಮೊದಲು ಎಚ್ಚೆತ್ತು ಕೊಂಡು ಗ್ಯಾಸ್ ದರವನ್ನು ಕಡಿಮೆ ಮಾಡಿ ಬಡವರಿಗೆ ಒಂದು ಹೊತ್ತಿನ ಊಟ ವನ್ನಾದರೂ ನೆಮ್ಮದಿಯಿಂದ ಮಾಡುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಗೀತಾ ವಾಗ್ಳೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Vishwa News 24

Recent Posts

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

15 hours ago

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ – vishwanews24

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…

16 hours ago

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

17 hours ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

17 hours ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

18 hours ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

18 hours ago