Featured

ಕೇರಳದಿಂದ ಕರ್ನಾಟಕಕ್ಕೆ ಬರಲು ಆರ್​ಟಿಪಿಸಿಆರ್​ ಟೆಸ್ಟ್​ ವರದಿ ಬೇಕಾಗಿಲ್ಲ – Vishwanews24

ಕೇರಳದಿಂದ ಕರ್ನಾಟಕಕ್ಕೆ ಬರಲು ಆರ್​ಟಿಪಿಸಿಆರ್​ ಟೆಸ್ಟ್​ ವರದಿ ಬೇಕಾಗಿಲ್ಲ – Vishwanews24

ಮಂಗಳೂರು : ಕೊನೆಗೂ ಕೇರಳದ ಜನತೆಗೆ ರಾಜ್ಯ ಸರಕಾರ ಸಿಹಿ ಸುದ್ದಿ ನೀಡಿದ್ದು, ಕೊರೊನಾ ಪ್ರಕರಣಗಳು ಇಳಿಕೆಯಾದ ಹಿನ್ನಲೆ ಗೋವಾ ಮತ್ತು ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸಲು ಆರ್​ಟಿಪಿಸಿಆರ್​ ಟೆಸ್ಟ್​ ನೆಗೆಟಿವ್ ವರದಿ ಬೇಕಾಗಿಲ್ಲ ಎಂದು ಸರ್ಕಾರ ಈಗ ಸುತ್ತೋಲೆ ಹೊರಡಿಸಿದೆ

ಕೊರೊನಾ ಪ್ರಕರಣ ಕಡಿಮೆಯಾಗಿರುವ ಹಿನ್ನಲೆ ಸರ್ಕಾರ ಕೂಡ ಕೋವಿಡ್ ಪರಿಸ್ಥಿತಿ ನಿಭಾಯಿಸಲು ವಿಧಿಸಿದ್ದ ನಿರ್ಬಂಧಗಳನ್ನು ಒಂದೊಂದಾಗಿ ತೆಗೆಯುತ್ತ ಬಂದಿದ್ದು, ಈಗ ಮತ್ತೊಂದು ನಿರ್ಬಂಧವನ್ನು ವಾಪಸ್ ಪಡೆದುಕೊಂಡಿದೆ. ನೆರೆಯ ಗೋವಾ ಹಾಗೂ ಕೇರಳಗಳಲ್ಲಿ ಕರೊನಾ ಪ್ರಕರಣಗಳು ಅತಿಯಾಗಿ ವರದಿಯಾಗಿದ್ದರ ಹಿನ್ನೆಲೆಯಲ್ಲಿ ಆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರ ಬಳಿ ಆರ್​ಟಿಪಿಸಿಆರ್ ಟೆಸ್ಟ್​ನ​ ನೆಗೆಟಿವ್​ ವರದಿ ಇರಬೇಕು ಎಂಬ ನಿರ್ಬಂಧ ವಿಧಿಸಿತ್ತು.

ಆದರೆ ಕೋವಿಡ್​ ಗಣನೀಯವಾಗಿ ಕಡಿಮೆ ಆಗಿರುವುದರಿಂದ ಗೋವಾ ಮತ್ತು ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸಲು ಆರ್​ಟಿಪಿಸಿಆರ್​ ಟೆಸ್ಟ್​ ನೆಗೆಟಿವ್ ವರದಿ ಬೇಕಾಗಿಲ್ಲ ಎಂದು ಸರ್ಕಾರ ಈಗ ಸುತ್ತೋಲೆ ಹೊರಡಿಸಿದೆ. ಇದು ರಸ್ತೆ, ರೈಲು ಅಥವಾ ವಾಯುಮಾರ್ಗದ ಮೂಲಕ ಬರುವ ಎಲ್ಲ ಪ್ರಯಾಣಿಕರು ಅನ್ವಯಿಸಲಿದೆ. ಆದರೆ ಅಂಥವರು ಎರಡೂ ಡೋಸ್ ಲಸಿಕೆ ತೆಗೆದುಕೊಂಡಿರಬೇಕಾದ್ದು ಕಡ್ಡಾಯ, ಲಸಿಕೀಕರಣದ ಪ್ರಮಾಣಪತ್ರ ಇರಲೇಬೇಕು ಎಂಬುದನ್ನು ಒತ್ತಿ ಹೇಳಿದೆ.

Vishwa News 24

Recent Posts

ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ -vishwanews24

ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಕುಂದಾಪುರ : ಪತ್ನಿಗೆ…

1 hour ago

ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು -vishwanews24

ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು ಕಾಪು : ಕಾಪು ಫ್ಲೈಓವರ್ ಬಳಿ ಶನಿವಾರ…

1 hour ago

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ -vishwanews24

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…

21 hours ago

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…

23 hours ago

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ -vishwanews24

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…

23 hours ago

ಸೌಜನ್ಯಾ ಪ್ರಕರಣ: ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ : ಕಲ್ಲಡ್ಕ ಪ್ರಭಾಕರ ಭಟ್‌ -vishwanews24

ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್‌ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…

23 hours ago