Featured

ಕೇರಳ ಪ್ರವಾಹದಲ್ಲಿ ಹಲವರ ಪ್ರಾಣ ಉಳಿಸಿದ್ದ ಮೀನುಗಾರ ಅಪಘಾತದಲ್ಲಿ ಸಾವು

ಕೇರಳ: ಕಳೆದ ಕೆಲ ದಿನಗಳ ಹಿಂದೆ ಕೇರಳದಲ್ಲಿ ಉಂಟಾದ ಪ್ರವಾಹದಲ್ಲಿ ತನ್ನ ಪ್ರಾಣವನ್ನು ಲೆಕ್ಕಿಸದೆ ಹತ್ತಾರು ಜನರ ಪ್ರಾಣವನ್ನು ಉಳಿಸಿದ್ದ ಮೀನುಗಾರ ಭಾನುವಾರ ಸಂಭವಿಸಿದೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಮೃತ ಮೀನುಗಾರನನ್ನು ಜಿನೀಶ್(24) ಎಂದು ಗುರುತಿಸಲಾಗಿದೆ. ಕಳೆದ ವಾರ ಜಿನೇಶ್​​ ಬೈಕ್​​ನಿಂದ ಬಿದ್ದು ಲಾರಿಯೊಂದರ ಕೆಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ತಿರುವನಂತಪುರಂನ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಿಸದೆ ನಿನ್ನೆ ಕೊನೆಯುಸಿರೆಳೆದಿದ್ದಾರೆ.

ಕೇರಳ ಪ್ರವಾಹದ ವೇಳೆ ನೂರಾರು ಮೀನುಗಾರರು ಜನರ ರಕ್ಷಣೆಗೆ ಮುಂದಾಗಿದ್ದರು. ತಮ್ಮ ಜೀವವನ್ನು ಪಣಕ್ಕಿಟ್ಟ ಮೀನುಗಾರರು ನೂರಾರು ಜನರನ್ನು ಬದುಕಿಸಿದ್ದರು. ಕೇರಳ ಸರ್ಕಾರವು ಮೀನುಗಾರರ ಕಾರ್ಯವನ್ನು ಮೆಚ್ಚಿ ಅವರಿಗೆ ಅನೇಕ ಯೋಜನೆಗಳ ಮೂಲಕ ನೆರವನ್ನು ನೀಡಲು ಮುಂದಾಯಿತು.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ‘ಮೀನುಗಾರ ತನ್ನ ಪ್ರಾಣವನ್ನು ಲೆಕ್ಕಿಸದೆ, ತನ್ನ ಕುಟುಂಬ ಬಗ್ಗೆ ಚಿಂತಿಸದೆ ಹಾಗೂ ಸರ್ಕಾರದ ಸಹಾಯ ಹಸ್ತವನ್ನು ಚಾಚದೆ ಕೇರಳದ ಜನರ ರಕ್ಷಣೆಗೆ ಮುಂದಾಗಿದ್ದರು’ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ಮೀನುಗಾರರ ಈ ಮಾನವೀಯ ಕಾರ್ಯವನ್ನು ಮೆಚ್ಚಿ ಕೇರಳ ಸರ್ಕಾರ ಹಲವು ಯೋಜನೆಗಳನ್ನ ಆರಂಭಿಸಿದೆ. 200 ಮೀನುಗಾರರನ್ನು ಕೋಸ್ಟಲ್​ ವಾರ್ಡನ್​​ಗಳಾಗಿ ಪೊಲೀಸ್​ ಇಲಾಖೆಯಲ್ಲಿ ಉದ್ಯೋಗ ನೀಡಲಾಗಿದೆ. ಆದ್ರೆ ಹಲವಾರು ಜನರ ಪ್ರಾಣ ಉಳಿಸಿದ್ದ ಮೀನುಗಾರ ಜಿನೇಶ್​​ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದು ಮಾತ್ರ ವಿಪರ್ಯಾಸವೇ ಸರಿ.

Vishwa News 24

Recent Posts

ಬ್ರಹ್ಮಾವರ : ಭೀಕರ ರಸ್ತೆ ಅಪಘಾತ ; ಖ್ಯಾತ ಹುಲಿ ವೇಷ ಕಲಾವಿದ ಸಾವು – vishwanews24

ಬ್ರಹ್ಮಾವರ :ಭೀಕರ ರಸ್ತೆ ಅಪಘಾತ: ಪ್ರಸಿದ್ಧ ಹುಲಿ ವೇಷ ಕಲಾವಿದ ಸಾವು ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರದ ಹೇರೂರು…

10 minutes ago

ಇನ್ನು ಮುಂದೆ ಫೋನ್ ನಂಬರ್ ನೀಡದೇ ಚಾಟ್ ಮಾಡಬಹುದು : ಏನಿದು ವಾಟ್ಸಪ್‌ ಹೊಸ ಬದಲಾವಣೆ ? – vishwanews24

ಇನ್ನು ಮುಂದೆ ಫೋನ್ ನಂಬರ್ ನೀಡದೇ ಚಾಟ್ ಮಾಡಬಹುದು : ಏನಿದು ವಾಟ್ಸಪ್‌ ಹೊಸ ಬದಲಾವಣೆ ? ಕ್ಯಾಲಿಫೋರ್ನಿಯಾ :…

1 hour ago

ಬೆಂಗಳೂರು- ಮಂಗಳೂರು ಚತುಷ್ಪಥ ರೈಲು ಮಾರ್ಗ ಯೋಜನೆ ಅಭಿವೃದ್ದಿ: ಸೋಮಣ್ಣ – vishwanews24

ಬೆಂಗಳೂರು- ಮಂಗಳೂರು ಚತುಷ್ಪಥ ರೈಲು ಮಾರ್ಗ ಯೋಜನೆ ಅಭಿವೃದ್ದಿ: ಸೋಮಣ್ಣ ಬೆಂಗಳೂರು: ಬೆಂಗಳೂರಿನಿಂದ 100 ಕಿ.ಮೀ. ಸುತ್ತಮುತ್ತ ಇರುವ ನಗರಗಳಿಗೆ…

1 hour ago

ಮಂಗಳೂರು: ಮಸೀದಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ ; ಗುರುಪುರ ಸೇತುವೆ ಮೇಲೆ ಸ್ಕೂಟರ್ ಪತ್ತೆ – vishwanews24

ಮಂಗಳೂರು: ಮಸೀದಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ ; ಗುರುಪುರ ಸೇತುವೆ ಮೇಲೆ ಸ್ಕೂಟರ್ ಪತ್ತೆ  - ಫಲ್ಗುಣಿ ನದಿಯಲ್ಲಿ ಶೋಧ…

2 hours ago

ಉಳ್ಳಾಲ: ಕೆರೆಬೈಲ್ ಗುಡ್ಡೆಯಲ್ಲಿ ಮನೆ ಮೇಲೆ ಕುಸಿದ ಕಾಂಪೌಂಡ್ ಹಾಲ್: ತಪ್ಪಿದ ಭಾರೀ ದುರಂತ – vishwanews24

ಉಳ್ಳಾಲ: ಕೆರೆಬೈಲ್ ಗುಡ್ಡೆಯಲ್ಲಿ ಮನೆ ಮೇಲೆ ಕುಸಿದ ಕಾಂಪೌಂಡ್ ಹಾಲ್: ತಪ್ಪಿದ ಭಾರೀ ದುರಂತ ಉಳ್ಳಾಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ…

2 hours ago

ನಾಗುರಿ ದುರಂತ – ಕಳಪೆ ಕಾಮಗಾರಿಯ ಶಂಕೆ : ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ – vishwanews24

ನಾಗುರಿ ದುರಂತ - ಕಳಪೆ ಕಾಮಗಾರಿಯ ಶಂಕೆ : ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ಮಂಗಳೂರು: ನಾಗುರಿಯಲ್ಲಿ ಮನೆ…

2 hours ago