ಕೇರಳ : ವಿಶೇಷಚೇತನ ಪತ್ನಿಯನ್ನು ಹಾವಿನಿಂದ ಕಚ್ಚಿಸಿ ಕೊಲೆ ಮಾಡಿದ ಪತಿ ಆರೋಪಿ ಸೂರಜ್ ಗೆ ಕೇರಳದ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಾಗರಹಾವಿನಿಂದ ಕಚ್ಚಿಸಿ ಪತ್ನಿಯನ್ನು ಸೂರಜ್ ಕೊಲೆ ಮಾಡಿದ್ದ ಪ್ರಕರಣವು ಕೇರಳದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಮೊದಲ ಬಾರಿ ಮಂಡಲದ ಹಾವು ಬಳಸಿ ಕೊಲೆಗೆ ವಿಫಲ ಯತ್ನವನ್ನು ನಡೆಸಿದ್ದ ಅರೋಪ ಸೂರಜ್ ಮೇಲಿತ್ತು. ಎರಡನೇ ಬಾರಿ ನಾಗರ ಹಾವು ಬಳಸಿ ಆಕೆ ಸಾವಿಗೆ ಕಾರಣನಾಗಿದ್ದ. 2020ರ ಮೇ 7ರಂದು ನಾಗರ ಹಾವು ಕಡಿತದಿಂದ ಉತ್ರಾ ಸಾವನ್ನಪ್ಪಿದ ಬಳಿಕ ಆಕೆಯ ಕುಟುಂಬದವರು ವರದಕ್ಷಿಣೆ ಕಿರುಕುಳ ಆರೋಪದ ಪ್ರಕರಣವನ್ನು ಸೂರಜ್ ವಿರುದ್ಧ ದಾಖಲಿಸಿದ್ದರು. ನಂತರ ಸಾರ್ವಜನಿಕವಾಗಿ ಹೇಳಿಕೆ ನೀಡಿದ ಸೂರಜ್, ಹಾವು ಕಡಿತದಿಂದ ಉತ್ರಾ ಮೃತಪಟ್ಟಿದ್ದಾಳೆ ಎಂದಿದ್ದ.
ಸೂರಜ್ ಎಸ್ ಕುಮಾರ್ ವಿರುದ್ಧ ಕೊಲೆ, ವಿಷ ಪ್ರಾಶನ, ಸಾಕ್ಷ್ಯ ನಾಶ ಪ್ರಕರಣ ದಾಖಲಾಗಿತ್ತು ಅಲ್ಲದೆ ತನ್ನ 25 ವರ್ಷದ ಪತ್ನಿ ಉತ್ರಾ ಅವರನ್ನು ಮೊದಲ ಬಾರಿಗೆ ಹಾವಿನಿಂದ ಕಚ್ಚಿಸಿ ಸಾಯಿಸಲು ಯತ್ನಿಸಿದ್ದನ್ನೂ ಕೊಲೆ ಎಂದು ಪರಿಗಣಿಸಿದ ನ್ಯಾಯಾಲಯ, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ-VI ಮನೋಜ್ ಎಂ ಅವರು ಶಿಕ್ಷೆಯ ತೀರ್ಪನ್ನು ಪ್ರಕಟಿಸಿದ್ದಾರೆ. ‘ಇದೊಂದು ಅಪರೂಪದ ಪ್ರಕರಣವಾಗಿದೆ. ಅಪರಾಧಿ ವಯಸ್ಸು 28 ವರ್ಷಗಳಾಗಿರುವುದರಿಂದ, ಮರಣದಂಡನೆಯ ಬದಲಿಗೆ ಜೀವಾವಧಿ ಶಿಕ್ಷೆ ನೀಡಲು ತೀರ್ಮಾನಿಸಿದರು’ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಜಿ ಮೋಹನರಾಜ್ ನ್ಯಾಯಾಲಯದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.
ಆರೋಪಿ ಕುಮಾರ್‌ಗೆ, ಕೊಲೆ ಆರೋಪ ಸಾಬೀತಾಗಿದ್ದಕ್ಕೆ ಜೀವಾವಧಿ ಶಿಕ್ಷೆ, ಕೊಲೆ ಯತ್ನಕ್ಕೆ ಜೀವಾವಧಿ ಶಿಕ್ಷೆ ಹಾಗೂ ವಿಷ ಉಣಿಸಿದ್ದಕ್ಕೆ 10 ವರ್ಷ ಹಾಗೂ ಸಾಕ್ಷ್ಯ ನಾಶಕ್ಕಾಗಿ 7 ವರ್ಷಗಳ ಕಾಲ ನ್ಯಾಯಾಲಯ ಶಿಕ್ಷೆ ವಿಧಿಸಿದೆ ಎಂದು ಎಸ್‌ಪಿಪಿ ತಿಳಿಸಿದರು.
ವಿಷಪ್ರಾಶನ ಮತ್ತು ಸಾಕ್ಷ್ಯಾಧಾರಗಳ ನಾಶಕ್ಕಾಗಿ ವಿಧಿಸಿದ ಶಿಕ್ಷೆಯನ್ನು ಮೊದಲು ನೀಡಬೇಕು ಎಂದು ನ್ಯಾಯಾಲಯ ನಿರ್ದಿಷ್ಟವಾಗಿ ನಿರ್ದೇಶಿಸಿದೆ ಎಂದು ಅವರು ಹೇಳಿದರು. ಒಟ್ಟು 17 ವರ್ಷಗಳ ಸೆರೆವಾಸ ಮತ್ತು ನಂತರ ಆತನ ಜೀವಾವಧಿ ಶಿಕ್ಷೆ ಆರಂಭವಾಗುತ್ತದೆ.
ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು ಮಂಗಳೂರು: ದುಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಕಳೆದ ಕೆಲವು…
ಬಿಜೆಪಿ ಸಂಘಪರಿವಾರವು ದೇಶದ ಕಾನೂನಿಗೆ ವಿರುದ್ಧವಾಗಿದೆ: ರಿಯಾಝ್ ಫರಂಗಿಪೇಟೆ ಗಲಭೆಕೋರರ ವಿರುದ್ಧದ ಪ್ರಕರಣ ಹಿಂಪಡೆದ ಕ್ರಮಕ್ಕೆ SDPI ತೀವ್ರ ವಿರೋಧ…
ಬೆಳ್ತಂಗಡಿ : ಜೂನ್ 1 ರಿಂದ ಪ್ರವಾಸಿಗರಿಗೆ ಟ್ರೆಕ್ಕಿಂಗ್, ಜಲಪಾತಗಳ ಮೇಲಿನ ನಿರ್ಬಂಧ ತೆರವು ಅರಣ್ಯ ಇಲಾಖೆಯಿಂದ ಪ್ರವಾಸಿಗರಿಗೆ ಕಟ್ಟುನಿಟ್ಟಿನ…
50 ಸಾವಿರ ರೂ. ವರೆಗಿನ ಬೆಳೆ ಸಾಲ ಮನ್ನಾ ಘೋಷಿಸಿದ ವಿಜಯ್ ಚೆನ್ನೈ: ರೈತರಿಗೆ ಭಾರಿ ನೆರವು ಘೋಷಿಸಿರುವ ತಮಿಳುನಾಡು…
ನಟ ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ: ಪ್ರಶಸ್ತಿ ಸ್ವೀಕರಿಸಿದ ಪತ್ನಿ ಹೇಮಾ ಮಾಲಿನಿ ನವದೆಹಲಿ: ದಿವಂಗತ ಬಾಲಿವುಡ್ ನಟ ಧರ್ಮೇಂದ್ರ ಅವರಿಗೆ…
ಪುತ್ತೂರು: ವಿದ್ಯುತ್ ಶಾಕ್ ಹೊಡೆದು ಯುವಕ ಮೃತ್ಯು ಪುತ್ತೂರು : ನಿಡಳ್ಳಿ ಗ್ರಾಮದ ಬೋಳುಂಬುಡೆಯಲ್ಲಿ ವಿದ್ಯುತ್ ಶಾಕ್ ಹೊಡೆದು ನೆಲಕ್ಕೆ…