Featured

ಕೇಸರಿ ಬಗ್ಗೆ ನಿಮಗೆ ಜಿಗುಪ್ಸೆ ಏಕೆ? ಅದನ್ನ ಕಂಡರೆ ಯಾಕೆ ವಿಚಲಿತರಾಗುತ್ತೀರಿ? ಗೊಂದಲಕ್ಕೆ ಒಳಗಾಗುತ್ತೀರಿ? : ಸಿದ್ದರಾಮಯ್ಯ ವಿರುದ್ಧ ಸುನೀಲ್ ಕುಮಾರ್ ವಾಗ್ದಾಳಿ – Vishwanews24

ಕೇಸರಿ ಬಗ್ಗೆ ನಿಮಗೆ ಜಿಗುಪ್ಸೆ ಏಕೆ? ಅದನ್ನ ಕಂಡರೆ ಯಾಕೆ ವಿಚಲಿತರಾಗುತ್ತೀರಿ? ಗೊಂದಲಕ್ಕೆ ಒಳಗಾಗುತ್ತೀರಿ? : ಸಿದ್ದರಾಮಯ್ಯ ವಿರುದ್ಧ ಸುನೀಲ್ ಕುಮಾರ್ ವಾಗ್ದಾಳಿ – Vishwanews24

ಬೆಂಗಳೂರು: ಸಿದ್ದರಾಮಯ್ಯ ಘನತೆ ಗೌರವ ಬಿಟ್ಟು ಅಸಭ್ಯವಾಗಿ ಮಾತನಾಡುವ ಅಭ್ಯಾಸ ಮಾಡ್ಕೊಂಡಿದಾರೆ. ಯಾವುದೇ ಟೀಕೆ ಎಲ್ಲೆ ಮೀರಬಾರದು. ಆದರೆ, ಇತ್ತೀಚೆಗೆ ಕನ್ನಡದ ಸಂಸ್ಕೃತಿಗೆ ತಕ್ಕಂತೆ ಅವರ ಮಾತುಗಳು ಇಲ್ಲ ಎಂದು ಸಚಿವ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಆರ್‌ಎಸ್ಎಸ್‌ನಿಂದ ಹಿಡಿದು ನರೇಂದ್ರ ಮೋದಿ ಅವರಿಗೆ ಏಕವಚನ ಬಳಸುವವರೆಗೆ ಕೆಳಮಟ್ಟಕ್ಕೆ ಇಳಿದಿದ್ದಾರೆ. ಅಸಹಾಯಕರಾಗಿ ಹೀಗೆ ಮಾತನಾಡುತ್ತಿದ್ದೀರೋ? ಸಂಸ್ಕಾರದ ಕೊರತೆ ಆಗಿ ಹೀಗೆಲ್ಲ ಮಾತನಾಡುತ್ತಿದ್ದೀರಾ? ರಾಷ್ಟ್ರೀಯ ನಾಯಕರನ್ನು ಮೆಚ್ಚಿಸಲಾ? ಸಕಾರಾತ್ಮಕ ಟೀಕೆ ಮೂಲಕ ಸರ್ಕಾರನ ಎಚ್ಚೆರಿಸುವುದು ವಿಪಕ್ಷದ ಕೆಲಸ. ಹಾಗಂತ ಆರ್‌ಎಸ್ಎಸ್‌ ಅನ್ನು ಜರಿಯುವುದಿಲ್ಲ. ಅದರಿಂದಲೇ ಬೆಳೆದವರು ನಾವು ಎಂದರು.
ಸಂಸ್ಕಾರ, ದೇಶಭಕ್ತಿ, ವ್ಯಕ್ತಿ ನಿರ್ಮಾಣವನ್ನು ಆರ್‌ಎಸ್ಎಸ್‌ ಮಾಡುತ್ತದೆ. ಈ ವಿಷಯದಲ್ಲಿ ಮಾಹಿತಿ, ಜ್ಞಾನದ ಕೊರತೆ ನಿಮಗೆ ಇದ್ದಂತೆ ಇದೆ. ನಿಮಗೆ ಸಲಹೆ ಕೊಡುತ್ತಿರುವವರಿಗೆ ಅನುಭವದ ಕೊರತೆ ಇದೆ ಅನಿಸುತ್ತದೆ ಎಂದರು.

ಅನುಭವಿಗಳು ಮತ್ತು ಉತ್ತಮರ ಸಹವಾಸ ಮಾಡಿ ಎಂದು ಕಿವಿ ಮಾತು ಹೇಳಿದ ಅವರು, ಜಗತ್ತಿನ ನಾಯಕರು ಮೋದಿಯವರನ್ನು ಮೆಚ್ಚಿಕೊಂಡಿದ್ದಾರೆ. ಎಚ್ಚರಿಕೆಯಿಂದ ಮಾತನಾಡುವುದು ಹಿರಿತನಕ್ಕೆ ಒಳಿತು ಎಂದು ಕುಟುಕಿದರು.

ನಾನು ನಿಮ್ಮ ಸಮಕಾಲೀನರಲ್ಲ. ಹಿರಿಯರಿಂದ ಕಲಿಯಬೇಕೆಂದು ರಾಜಕಾರಣಕ್ಕೆ ಬಂದೆವು. ನಿಮ್ಮಲ್ಲಿ ನೋಡಿ ಕಲಿಯುವಂತಹ ಗುಣ ಕಡಿಮೆ ಆಗುತ್ತಿದೆ ಎಂದರು.

ಕೇಸರಿ ಬಗ್ಗೆ ನಿಮಗೆ ಜಿಗುಪ್ಸೆ ಏಕೆ? ಅದು ತ್ಯಾಗದ ಸಂಕೇತ, ರಾಷ್ಟ್ರೀಯತೆಯನ್ನು ಬಿಂಬಿಸುತ್ತದೆ. ಯಾಕೆ ಕೇಸರಿ ಕಂಡರೆ ವಿಚಲಿತರಾಗುತ್ತೀರಿ? ಗೊಂದಲಕ್ಕೆ ಒಳಗಾಗುತ್ತೀರಿ? ಎಂದು ಪ್ರಶ್ನಿಸಿದರು. ಮುಂದುವರಿದು, ಸಿಎಂ ಆಗಿದ್ದಾಗ ಕುಂಕುಮ ಇಟ್ಟ ಕಾರ್ಯಕರ್ತರನ್ನು ದೂರ ಇಟ್ಟಿರಿ. ಭಾರತ ತ್ಯಾಗದ ಸಂಕೇತ, ಕೇಸರಿ ಕೂಡ ತ್ಯಾಗದ ಸಂಕೇತ. ಎರಡೂ ಒಂದನ್ನೊಂದು ಬಿಟ್ಟಿಲ್ಲ ಎಂದು ಹೇಳಿದರು.

ವಿಜಯ ದಶಮಿಯಂದು ಆಯುಧ ಪೂಜೆ ಮಾಡುವುದು ಈ ನಾಡಿನ ಪರಂಪರೆ. ಆಗ ಕೇಸರಿ ಶಾಲು ಹಾಕಿದ್ದನ್ನ ಟೀಕಿಸುವ ನಿಮಗೇಕೆ ಸಹಿಸಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರ ಇರುವಾಗಷ್ಟೇ ಸರ್ಕಾರಿ ನೌಕರರು ಪೂಜೆ ಮಾಡಿಲ್ಲ. ಅವರು ಕರ್ತವ್ಯ ಮಾಡುವಾಗ ಹಾಕಿದ್ದಲ್ಲ, ಪೂಜೆ ಮಾಡುವಾಗ ಹಾಕಿದ್ದು. ಯಾರೇ ಕೇಸರಿ ಶಾಲು ಹಾಕಿದರೂ ಬೆಂಬಲಿಸುತ್ತೇನೆ ಎಂದರು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

1 day ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

1 day ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

1 day ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

1 day ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

1 day ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

1 day ago